ಸ್ವರಾ ಭಾಸ್ಕರ್​-ಫಹಾದ್​ ಅಹ್ಮದ್​ಗೆ ಹೆಣ್ಣು ಮಗು; ರಾಬಿಯಾ ಎಂದು ಹೆಸರಿಟ್ಟ ದಂಪತಿ

|

Updated on: Sep 25, 2023 | 10:47 PM

ಸ್ವರಾ ಭಾಸ್ಕರ್​ ಹಾಗೂ ಫಹಾದ್ ಅಹ್ಮದ್​ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಮುಖ ತೋರಿಸಿಲ್ಲ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಈ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮಗುವಿಗೆ ರಾಬಿಯಾ ಎಂದು ಹೆಸರು ಇಡಲಾಗಿದೆ. ಪುತ್ರಿಯ ಜೊತೆ ಸ್ವರಾ ಭಾಸ್ಕರ್​ ಹಂಚಿಕೊಂಡಿರುವ ಈ ಫೋಟೋಗಳು ವೈರಲ್​ ಆಗಿವೆ.

ಸ್ವರಾ ಭಾಸ್ಕರ್​-ಫಹಾದ್​ ಅಹ್ಮದ್​ಗೆ ಹೆಣ್ಣು ಮಗು; ರಾಬಿಯಾ ಎಂದು ಹೆಸರಿಟ್ಟ ದಂಪತಿ
ಸ್ವರಾ ಭಾಸ್ಕರ್​, ಫಹಾದ್​ ಅಹ್ಮದ್​
Follow us on

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ (Swara Bhasker) ಅವರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಿದೆ. ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಆಗಮನದಿಂದ ಸ್ವರಾ ಭಾಸ್ಕರ್​ ಅವರು ಖುಷಿಯಾಗಿದ್ದಾರೆ. ಪತಿ ಫಹಾದ್​ ಅಹ್ಮದ್​ (Fahad Ahmad) ಜೊತೆ ಸೇರಿ ಈ ಖುಷಿಯ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಹೆಣ್ಣು ಮಗುವಿಗೆ (Baby Girl) ರಾಬಿಯಾ ಎಂದು ಈ ದಂಪತಿ ನಾಮಕರಣ ಮಾಡಿದ್ದಾರೆ. ಜೊತೆಗೆ ಮಗುವಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಆದರೆ ಮುಖ ತೋರಿಸಿಲ್ಲ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸ್ವರಾ ಭಾಸ್ಕರ್​ ಹಾಗೂ ಫಹಾದ್ ಅಹ್ಮದ್​ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮಗುವಿನ ಜೊತೆ ಈ ದಂಪತಿ ಹಂಚಿಕೊಂಡಿರುವ ಫೋಟೋಗಳು ವೈರಲ್​ ಆಗಿವೆ.

‘ಒಂದು ಪ್ರಾರ್ಥನೆ ಕೇಳಿಸಿತು. ಒಂದು ಆಶೀರ್ವಾದ ಸಿಕ್ಕಿತು. ಒಂದು ಹಾಡು ಗುನುಗಿತು. ನಮ್ಮ ಮಗಳು ರಾಬಿಯಾ ಸೆಪ್ಟೆಂಬರ್ 23ರಂದು ಜನಿಸಿದಳು. ನಿಮ್ಮೆಲ್ಲರ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು. ನಮಗೆ ಇದು ಹೊಸ ಜಗತ್ತು’ ಎಂದು ಸ್ವರಾ ಭಾಸ್ಕರ್​ ಅವರು ಪೋಸ್ಟ್​ ಮಾಡಿದ್ದಾರೆ. ನೀನಾ ಗುಪ್ತಾ, ಗೌಹರ್​ ಖಾನ್​, ತಿಲೋತ್ತಮ ಶೋಮೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಮೆಂಟ್​ ಮಾಡುವ ಮೂಲಕ ಸ್ವರಾ ಭಾಸ್ಕರ್​ಗೆ ಅಭಿನಂದನೆ ತಿಳಿಸಿದ್ದಾರೆ.

ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ಸ್ವರಾ ಭಾಸ್ಕರ್​ ನಟಿಸಿದ್ದಾರೆ. ತಮ್ಮ ನೇರ ನಡೆ-ನುಡಿಯ ಸ್ವಭಾವದಿಂದ ಅವರು ಗುರುತಿಸಿಕೊಂಡಿದ್ದಾರೆ. ಮದುವೆ ಬಳಿಕ ಅವರು ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಸ್ವರಾ ಭಾಸ್ಕರ್​ ಮತ್ತು ಫಹಾದ್​ ಅಹ್ಮದ್​ ಅವರದ್ದು ಅಂತರ್​ ಧರ್ಮೀಯ ವಿವಾಹ. ಆ ಕಾರಣಕ್ಕಾಗಿ ಅನೇಕರು ಈ ಜೋಡಿಯನ್ನು ಟೀಕೆ ಮಾಡಿದ್ದರು. ಎಲ್ಲವನ್ನೂ ಎದುರಿಸಿ ಈ ದಂಪತಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.

ಫ್ರಿಡ್ಜ್​, ಸೂಟ್​ಕೇಸ್​, ಅಕ್ರಮ ಮದುವೆ, ಮತಾಂತರ ಎಂದವರಿಗೆ ನಟಿ ಸ್ವರಾ ಭಾಸ್ಕರ್​ ಪ್ರತಿಕ್ರಿಯೆ

ಫಹಾದ್​ ಅಹ್ಮದ್​ ಅವರು ಸಮಾಜವಾದಿ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸ್ವರಾ ಭಾಸ್ಕರ್​ ಜೊತೆ ಅವರಿಗೆ ಪ್ರೀತಿ ಚಿಗುರಿತು. 2023ರ ಫೆಬ್ರವರಿಯಲ್ಲಿ ಅವರಿಬ್ಬರು ಕೋರ್ಟ್​ ಮ್ಯಾರೇಜ್​ ಮಾಡಿಕೊಂಡರು. ನಂತರ ಮಾರ್ಚ್​ನಲ್ಲಿ ಹಳದಿ, ಸಂಗೀತ್​, ಆರತಕ್ಷತೆ ಸೇರಿ ಅನೇಕ ಸಮಾರಂಭಗಳನ್ನು ಈ ದಂಪತಿ ಹಮ್ಮಿಕೊಂಡಿದ್ದರು. ಜೂನ್​ ತಿಂಗಳಲ್ಲಿ ತಾವು ಗರ್ಭಿಣಿ ಎಂಬ ಸುದ್ದಿಯನ್ನು ಸ್ವರಾ ನೀಡಿದ್ದರು. ಪ್ರೆಗ್ನೆನ್ಸಿ ಫೋಟೋಶೂಟ್​ ಮಾಡಿಸಿ ಖುಷಿಪಟ್ಟಿದ್ದರು. ಈಗ ಅವರು ತಾಯಿ ಆಗಿದ್ದಾರೆ. ಇನ್ನೂ ಒಂದಷ್ಟು ತಿಂಗಳ ಕಾಲ ಅವರು ಮಗುವಿನ ಆರೈಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ನಂತರ ನಟನೆಗೆ ಮರಳುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:56 pm, Mon, 25 September 23