- Kannada News Photo gallery Swara Bhaskar reacts to hate comments after her marriage with Fahad Ahmad
Swara Bhasker: ಫ್ರಿಡ್ಜ್, ಸೂಟ್ಕೇಸ್, ಅಕ್ರಮ ಮದುವೆ, ಮತಾಂತರ ಎಂದವರಿಗೆ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯೆ
Swara Bhaskar Marriage Photos: ಸೋಶಿಯಲ್ ಮೀಡಿಯಾದಲ್ಲಿ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಬಗ್ಗೆ ಹಲವು ಬಗೆಯ ಕಮೆಂಟ್ಗಳು ಬರುತ್ತಿವೆ. ಅದಕ್ಕೆ ನಗುವಿನ ಮೂಲಕವೇ ಈ ದಂಪತಿ ತಿರುಗೇಟು ನೀಡಿದ್ದಾರೆ.
Updated on: Feb 24, 2023 | 8:39 PM

ಖ್ಯಾತ ನಟಿ ಸ್ವರಾ ಭಾಸ್ಕರ್ ಅವರು ಕೆಲವೇ ದಿನಗಳ ಹಿಂದೆ ಮದುವೆ ಆದರು. ಫಹಾದ್ ಅಹ್ಮದ್ ಜೊತೆ ಅವರ ವಿವಾಹ ನೆರವೇರಿತು. ಅಂತರಧರ್ಮೀಯ ಮದುವೆ ಆದ್ದರಿಂದ ನೆಟ್ಟಿಗರು ಇವರನ್ನು ಟ್ರೋಲ್ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಮುಸ್ಲಿಂ ಪ್ರಿಯಕರನಿಂದ ಕೊಲೆಯಾದ ಹಿಂದೂ ಯುವತಿ ಶ್ರದ್ಧಾ ವಾಕರ್ ರೀತಿಯೇ ಸ್ವರಾ ಭಾಸ್ಕರ್ ಅವರಿಗೂ ಆಗಲಿದೆ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ಅಂಥ ಮಾತುಗಳಿಗೆ ಈ ನವ ದಂಪತಿ ತಲೆ ಕೆಡಿಸಿಕೊಂಡಿಲ್ಲ.

ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಅವರು ತಿರುಗೇಟು ನೀಡಿದ್ದಾರೆ. ತಮ್ಮ ನಗುವಿನ ಮೂಲಕವೇ ಅವರು ಎಲ್ಲ ಟ್ರೋಲ್ಗಳನ್ನು ಎದುರಿಸುತ್ತಿದ್ದಾರೆ. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದ್ವೇಷಿಸುವವರು ಫ್ರಿಡ್ಜ್, ಸೂಟ್ಕೇಸ್, ಅಕ್ರಮ ಮದುವೆ, ಮತಾಂತರ, ಅದು ಇದು ಅಂತಾರೆ. ಆದರೆ ತಾವು ಸಖತ್ ಖುಷಿಯಾಗಿ ಇರುವುದಾಗಿ ಸ್ವರಾ ಭಾಸ್ಕರ್ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಲ್ಲಿ ಸ್ವರಾ ಭಾಸ್ಕರ್ ಅವರು ಎಂದೂ ಕೂಡ ಹಿಂದೇಟು ಹಾಕಿದವರಲ್ಲ. ಕೆಲವು ಪ್ರತಿಭಟನೆಗಳಲ್ಲಿ ಅವರು ಜನರ ಜೊತೆ ಭಾಗವಹಿಸಿದ್ದರು. ಅದರಿಂದಾಗಿ ಫಹಾದ್ ಅಹ್ಮದ್ ಜೊತೆ ಅವರಿಗೆ ಪರಿಚಯ ಬೆಳೆಯಿತು. ನಂತರ ಅವರಿಬ್ಬರು ಸತಿ-ಪತಿಯಾದರು.




