ಅಮ್ಮನ ಜೊತೆ ಕುಳಿತ ಈ ಸ್ಟಾರ್ ನಟಿಯರು ಯಾರೆಂದು ಗುರುತಿಸಿ

|

Updated on: Feb 02, 2023 | 12:31 PM

ಸ್ಟಾರ್ ನಟಿಯರಿಬ್ಬರ ಬಾಲ್ಯದ ಫೋಟೋ ವೈರಲ್ ಆಗಿದೆ. ಇವರು ಯಾರು ಎಂದು ಗುರುತಿಸಿ ಎಂಬ ಸವಾಲನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗುತ್ತಿದೆ.

ಅಮ್ಮನ ಜೊತೆ ಕುಳಿತ ಈ ಸ್ಟಾರ್ ನಟಿಯರು ಯಾರೆಂದು ಗುರುತಿಸಿ
Follow us on

ಸೋಶಿಯಲ್ ಮೀಡಿಯಾದಲ್ಲಿ (Social Media) ಸೆಲೆಬ್ರಿಟಿಗಳು ಸದಾ ಆ್ಯಕ್ಟೀವ್ ಆಗಿರುತ್ತಾರೆ. ಹಲವು ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ಅವರು ಖುಷಿಪಡಿಸುತ್ತಿರುತ್ತಾರೆ. ಈಗ ಸ್ಟಾರ್ ನಟಿಯರಿಬ್ಬರ ಬಾಲ್ಯದ ಫೋಟೋ ವೈರಲ್ ಆಗಿದೆ. ಇವರು ಯಾರು ಎಂದು ಗುರುತಿಸಿ ಎಂಬ ಸವಾಲನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗುತ್ತಿದೆ. ಇದಕ್ಕೆ ಅಭಿಮಾನಿಗಳು ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಈ ಫೋಟೋದಲ್ಲಿರುವವರು ಬೇರಾರು ಅಲ್ಲ ಬಾಲಿವುಡ್​ನ ಟಬು ಹಾಗೂ ಅವರ ಅಕ್ಕ ಫರಾ ಹಶ್ಮಿ. ತಾಯಿಯ ಜತೆ ಅವರು ಕುಳಿತಿರುವ ಫೋಟೋ ಇದಾಗಿದೆ. ಇದು 70ರ ದಶಕದಲ್ಲಿ ತೆಗೆದ ಫೋಟೋ. ಫರಾ ಅವರು ಅಮ್ಮನ ಪಕ್ಕದಲ್ಲಿ ಕುಳಿತಿದ್ದರೆ, ಟಬು ಅಮ್ಮನ ಕಾಲಿನ ಮೇಲೆ ಕುಳಿತಿದ್ದಾರೆ. ಈ ಕಪ್ಪು ಬಿಳುಪಿನ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.

ಫರಾ ಅವರು 80-90ರ ದಶಕದಲ್ಲಿ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದರು. ಆದರೆ, ವರ್ಷ ಕಳೆದಂತೆ ಅವರಿಗೆ ಬೇಡಿಕೆ ಕಡಿಮೆ ಆಯಿತು. 2005ರ ಬಳಿಕ ಅವರು ಚಿತ್ರರಂಗ ತೊರೆದರು. ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಲೇ ಇಲ್ಲ. ಅಭಿಮಾನಿಗಳು ಅವರ ಬಳಿ ಕಂಬ್ಯಾಕ್ ಮಾಡುವಂತೆ ಅನೇಕ ಬಾರಿ ಕೋರಿದ್ದರು.

ಇದನ್ನೂ ಓದಿ: ‘ಬಾಲಿವುಡ್​ಗೆ ಅಪರಿಚಿತನಾಗಿದ್ದ ಯಶ್ 500 ಕೋಟಿ ರೂ. ಬಿಸ್ನೆಸ್ ಮಾಡುವಾಗ ಪಠಾಣ್​ ಯಶಸ್ಸು ಯಾವ ಲೆಕ್ಕ?’ ಆರ್​ಜಿವಿ

ಟಬು ಚಿತ್ರರಂಗದಲ್ಲಿ ಇನ್ನೂ ಬೇಡಿಕೆ ಇಟ್ಟುಕೊಂಡಿದ್ದಾರೆ. ಅವರ ನಟನೆಯ ಸಿನಿಮಾಗಳು ಹಿಟ್ ಆಗುತ್ತಿವೆ. 2022ರಲ್ಲಿ ರಿಲೀಸ್ ಆದ ‘ಭೂಲ್​ ಭುಲಯ್ಯ 2’ ಹಾಗೂ ‘ದೃಶ್ಯಂ 2’ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿದವು. ಎರಡೂ ಚಿತ್ರಗಳು ಸೂಪರ್ ಹಿಟ್​ ಎನಿಸಿಕೊಂಡವು. ಈ ಯಶಸ್ಸಿನಿಂದ ಟಬು ಬೇಡಿಕೆ ಹೆಚ್ಚಿದೆ. ಸದ್ಯ ಅಜಯ್ ದೇವಗನ್ ನಟನೆಯ ‘ಭೋಲಾ’ ಚಿತ್ರದಲ್ಲಿ ಟಬು ನಟಿಸುತ್ತಿದ್ದಾರೆ. ತಮಿಳಿನ ಸೂಪರ್ ಹಿಟ್ ಸಿನಿಮಾ ‘ಕೈದಿ’ಯ ಹಿಂದಿ ರಿಮೇಕ್ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ