ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇತ್ತೀಚೆಗಿನ ಚುನಾವಣಾ ರ‍್ಯಾಲಿಗಳಲ್ಲಿ ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್ ಹೆಸರನ್ನು ಪದೇ ಪದೇ ಎಳೆದು ತರುತ್ತಿದ್ದಾರೆ. ಈಗ ರಾಹುಲ್ ಗಾಂಧಿ ಅವರು ಮತ್ತೆ ಹಾಗೆಯೇ ಮಾಡಿದ್ದಾರೆ. ನವದೆಲಿಯಲ್ಲಿ ನಡೆದ ‘ಸಾಮಾಜಿಕ ನ್ಯಾಯ ಸಮ್ಮೇಳನ’ದಲ್ಲಿ ಅವರು ಐಶ್ವರ್ಯಾ, ಅಮಿತಾಭ್ ಜೊತೆ ವಿರಾಟ್ ಕೊಹ್ಲಿ ಹೆಸರನ್ನೂ ಹೇಳಿದ್ದಾರೆ.
‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ನಾನು ರಾಜಕೀಯದ ಬಗ್ಗೆ ಗಂಭೀರವಾಗಿಲ್ಲ ಎಂದು ಅವರು ಮಾಧ್ಯಮಗಳಲ್ಲಿ ಹೇಳುತ್ತಲೇ ಬರುತ್ತಿದ್ದಾರೆ. ಅವರಿಗೆ ನರೇಗಾಕ್ಕಾಗಿ, ಭೂ ಸ್ವಾಧೀನ ಕಾಯ್ದೆಗಾಗಿ ಹೋರಾಡುವುದು ಗಂಭೀರ ಅಲ್ಲವೆ? ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ವಿರಾಟ್ ಕೊಹ್ಲಿ ಬಗ್ಗೆ ಮಾತನಾಡೋದು ಗಂಭೀರವೇ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಸಂಪತ್ತು ಮರುಹಂಚಿಕೆ ಮಾಡಲು ರಾಹುಲ್ ಗಾಂಧಿಯೇನು ಮಾವೋವಾದಿಯಾ? ದೇವೇಗೌಡರು ಆಕ್ರೋಶ
ಫೆಬ್ರವರಿ ತಿಂಗಳಲ್ಲೂ ರಾಹುಲ್ ಗಾಂಧಿ ಅವರು ಐಶ್ವರ್ಯಾ ಹೆಸರು ಉಲ್ಲೇಖ ಮಾಡಿದ್ದರು. ‘ರಾಮ ಮಂದಿರ ಉದ್ಘಾಟನೆ ವೇಳೆ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ಅಂಬಾನಿ, ಅದಾನಿ ಮೊದಲಾದ ಉದ್ಯಮಿಗಳನ್ನು ನೋಡಿದೆ. ಆದರೆ, ಒಬ್ಬೇ ಒಬ್ಬ ಬಡವನನ್ನು, ರೈತನನ್ನು, ಕಾರ್ಮಿಕನನ್ನು, ನಿರುದ್ಯೋಗಿಯನ್ನು ನೋಡಿಲ್ಲ’ ಎಂದು ಹೇಳಿದ್ದರು. ಈ ಹೇಳಿಕೆ ಚರ್ಚೆ ಹುಟ್ಟುಹಾಕಿತ್ತು.
“They used to say about me in the media that I am not interested in politics, I am not serious about politics. For them, the one fighting on MNREGA and the land acquisition bill is non-serious, while the one talking about Amitabh, Aishwarya Rai, and Virat Kohli is serious?” says… pic.twitter.com/ZyVGnSa14b
— IANS (@ians_india) April 24, 2024
ಪದೇ ಪದೇ ಬಚ್ಚನ್ ಕುಟುಂಬದ ಹೆಸರನ್ನು ರಾಹುಲ್ ಗಾಂಧಿ ಉಲ್ಲೇಖ ಮಾಡುತ್ತಿರುವುದು ಅಮಿತಾಭ್ ಅಭಿಮಾನಿಗಳಿಗೆ ಇಷ್ಟ ಆಗುತ್ತಿಲ್ಲ. ಅವರು ರಾಹುಲ್ ಗಾಂಧಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ವಿಚಾರದಲ್ಲಿ ಅಮಿತಾಭ್ ಆಗಲಿ, ಐಶ್ವರ್ಯಾ ರೈ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಬಾಲಿವುಡ್ನಲ್ಲಿ ಸಾಕಷ್ಟು ಸೆಲೆಬ್ರಿಟಿಗಳಿದ್ದಾರೆ. ಆದಾಗ್ಯೂ ರಾಹುಲ್ ಗಾಂಧಿ ಅವರು ಬಚ್ಚನ್ ಕುಟುಂಬದವರನ್ನೇ ಉಲ್ಲೇಖಿಸುವುದೇಕೆ ಅನ್ನೋದು ಅನೇಕರ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Thu, 25 April 24