Loop Lapeta: ಕಿಸ್ಸಿಂಗ್ ದೃಶ್ಯವನ್ನು ಮಧ್ಯದಲ್ಲೇ ನಿಲ್ಲಿಸಿದ್ದ ತಾಪ್ಸಿ; ಇದಕ್ಕೆ ಕಾರಣವಾಗಿದ್ದು ನಿರ್ದೇಶಕರ ‘ಆ ಮಾತು’!

| Updated By: shivaprasad.hs

Updated on: Feb 10, 2022 | 1:29 PM

Taapsee Pannu: ಬಾಲಿವುಡ್ ನಟಿ ತಾಪ್ಸಿ ಪನ್ನು ನಟನೆಯ ‘ಲೂಪ್ ಲಪೇಟಾ’ ಇತ್ತೀಚೆಗೆ ನೆಟ್​ಫ್ಲಿಕ್ಸ್​​ನಲ್ಲಿ ತೆರೆಕಂಡಿದೆ. ಚಿತ್ರದ ಕಿಸ್ಸಿಂಗ್ ದೃಶ್ಯವೊಂದರ ಚಿತ್ರೀಕರಣದ ಬಗ್ಗೆ ನಟಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

Loop Lapeta: ಕಿಸ್ಸಿಂಗ್ ದೃಶ್ಯವನ್ನು ಮಧ್ಯದಲ್ಲೇ ನಿಲ್ಲಿಸಿದ್ದ ತಾಪ್ಸಿ; ಇದಕ್ಕೆ ಕಾರಣವಾಗಿದ್ದು ನಿರ್ದೇಶಕರ ‘ಆ ಮಾತು’!
‘ಲೂಪ್ ಲಪೇಟಾ’ ಚಿತ್ರದಲ್ಲಿ ತಾಪ್ಸಿ
Image Credit source: Loop Lapeta Movie
Follow us on

ತಾಪ್ಸಿ ಪನ್ನು (Taapsee Pannu) ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಹಿಂದಿ ಚಿತ್ರರಂಗದಲ್ಲಿ ನಟಿ ಸಖತ್ ಬ್ಯುಸಿ. ಇತ್ತೀಚೆಗೆ ಅವರು ಮಹಿಳಾ ಪ್ರಧಾನ ಪಾತ್ರಗಳತ್ತ ಒಲವು ತೋರುತ್ತಿದ್ದಾರೆ.  ತಮಗೆ ಬರುತ್ತಿರುವ ಪಾತ್ರಗಳೂ ನಾಯಕಿಯನ್ನು ಕೇಂದ್ರೀಕರಿಸಿವೆ ಎಂದು ತಾಪ್ಸಿ ಹೇಳಿಕೊಂಡಿದ್ದರು. ಫೆಬ್ರವರಿ 4ರಂದು ತಾಪ್ಸಿ ನಟನೆಯ ‘ಲೂಪ್ ಲಪೇಟಾ’ (Loop Lapeta) ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ (Netflix) ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ತಾಪ್ಸಿ ಕೆಲವು ಬೋಲ್ಡ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಅಂತಹ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ನಡೆದ ಘಟನೆಗಳನ್ನು ತಾಪ್ಸಿ ಸ್ಮರಿಸಿಕೊಂಡಿದ್ದಾರೆ. ಕಿಸ್ಸಿಂಗ್ ದೃಶ್ಯದ ಮಧ್ಯೆಯೇ ನಿರ್ದೇಶಕರು ಹೇಳಿದ್ದ ಆ ಒಂದು ಮಾತು ತಾಪ್ಸಿಗೆ ಕಿರಿಕಿರಿ ಉಂಟುಮಾಡಿತ್ತಂತೆ. ಆ ಸಂದರ್ಭದಲ್ಲಿ ನಿರ್ದೇಶಕರ ಮಾತನ್ನು ಕೇಳುವುದು ಬಿಡಿ ಎಂದು ಸಹನಟರಿಗೆ ತಾಪ್ಸಿ ಹೇಳಿದ್ದರಂತೆ. ಈ ಎಲ್ಲವನ್ನೂ ತಾಪ್ಸಿ ನೆನಪಿಸಿಕೊಂಡಿದ್ದು, ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಚಿತ್ರೀಕರಣದ ವೇಳೆ ನಡೆದ ಘಟನೆ ಬಗ್ಗೆ ತಾಪ್ಸಿ ಹೇಳಿದ್ದೇನು?

‘ಲೂಪ್ ಲಪೇಟಾ’ ಚಿತ್ರವನ್ನು ನಿರ್ದೇಶಿಸಿದ್ದು ಆಕಾಶ್ ಭಾಟಿಯಾ. ತಾಪ್ಸಿ ಈ ಚಿತ್ರದಲ್ಲಿ ನಟ ತಾಹಿರ್ ರಾಜ್ ಭಾಸಿನ್ ಜತೆ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಇದರ ಚಿತ್ರೀಕರಣದ ವೇಳೆ ನಿರ್ದೇಶಕರ ಮಾತು ತಾಪ್ಸಿಗೆ ಅಚ್ಚರಿ ತರಿಸಿತ್ತಂತೆ. ಈ ವಿಚಾರವನ್ನು ತಾಪ್ಸಿ ಕಾಮಿಡಿಯನ್ ರೋಹನ್ ಭಾಸಿ ಜತೆ ಯುಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.

ಮಾಂಟೇಜ್ ಮಾದರಿಯಲ್ಲಿ ಬಿಡಿಬಿಡಿ ದೃಶ್ಯಗಳನ್ನು ಒಂದರ ಹಿಂದೊಂದು ಚಿತ್ರೀಕರಿಸಲಾಗುತ್ತಿತ್ತಂತೆ. ಈ ಸಂದರ್ಭದಲ್ಲಿ ಸೌಂಡ್ ರೆಕಾರ್ಡ್ ಅವಶ್ಯಕತೆ ಇಲ್ಲದ ಕಾರಣ, ನಿರ್ದೇಶಕ ಆಕಾಶ್ ಮೈಕ್​ನಲ್ಲಿ ಕಲಾವಿದರಿಗೆ ಒಂದರ ಹಿಂದೆ ಒಂದರಂತೆ ನಿರ್ದೇಶನಗಳನ್ನು ನೀಡುತ್ತಿದ್ದರು. ‘ಓಕೆ, ಈಗ ಜಗಳವಾಡಿ, ನಿಧಾನವಾಗಿ ಮಾತನಾಡಿ, ಕೈಯನ್ನು ಹಿಡಿದುಕೊಳ್ಳಿ. ಈಗ ಇಬ್ಬರೂ ಕಿಸ್ ಮಾಡಿ..’ ಹೀಗೆ ಒಂದರ ನಂತರ ಮತ್ತೊಂದು ಚಟುವಟಿಕೆಗಳ ಕುರಿತು ನಿರ್ದೇಶನ ನೀಡುತ್ತಿದ್ದರು. ಈ ಸಂದರ್ಭದ ಚಿತ್ರೀಕರಣದ ವೇಳೆ ಆಕಾಶ್ ಮಾತಿನ ನಡುವೆ, ‘‘ತಾಹಿರ್, ನೀವು ಇದುವರೆಗೆ ಇಂತಹ ಹುಡುಗಿಯನ್ನೇ ನೋಡಿಲ್ಲ. ನಿಮಗೆ ಯಾವತ್ತೂ ಇಂತಹ ಹುಡುಗಿ ಸಿಕ್ಕುವುದಿಲ್ಲ’ ಎಂದು ಹೇಳಿದ್ದರು.

ಈ ಮಾತನ್ನು ಕೇಳಿದ ತಾಪ್ಸಿ ತಕ್ಷಣ ಕಿಸ್ಸಿಂಗ್ ದೃಶ್ಯವನ್ನು ನಿಲ್ಲಿಸಿದರು. ಅಲ್ಲದೇ, ತಾಹಿರ್ ಮುಖ ನೋಡಿ, ‘ಅವರೇನು ಮಾತನಾಡುತ್ತಿದ್ದಾರೆ?’ ಎಂಬರ್ಥದಲ್ಲಿ ನೋಡಿದರಂತೆ. ನಂತರ ‘‘ಈ ಮಾತುಗಳು ನನ್ನ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ನಿರ್ದೇಶಕ ಆಕಾಶ್ ಮಾತನ್ನು ಸದ್ಯ ಕೇಳುವುದು ಬೇಡ’ ಎಂದು ಯೋಚಿಸಿದೆ..’’ ಹೀಗೆಂದು ಹೇಳಿಕೊಂಡಿದ್ದಾರೆ ತಾಪ್ಸಿ.

‘ಲೂಪ್ ಲಪೇಟಾ’ ಚಿತ್ರ ಜರ್ಮನ್ ಚಿತ್ರವಾದ ‘ರನ್ ಲೋಲಾ ರನ್’ನ ಅಧಿಕೃತ ರಿಮೇಕ್. ಈ ಚಿತ್ರದಲ್ಲಿ ಶ್ರೇಯಾ ಧನ್ವಂತರಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೆಟ್​ಫ್ಲಿಕ್ಸ್​​ನಲ್ಲಿ ಸದ್ಯ ಈ ಚಿತ್ರ ಬಿತ್ತರವಾಗುತ್ತಿದೆ.

ಇದನ್ನೂ ಓದಿ:

ಸಿನಿಮಾ ಪ್ರಚಾರದಲ್ಲಿ ದೀಪಿಕಾ ಹಾಟ್​ ಅವತಾರ

ರಶ್ಮಿಕಾ ಹೊಸ ಚಿತ್ರದ ಒಟಿಟಿ ಹಾಗೂ ಸ್ಯಾಟಲೈಟ್​​ ಹಕ್ಕುಗಳಿಗೆ ಭರ್ಜರಿ ಆಫರ್; ಮೊತ್ತ ಕೇಳಿ ಹುಬ್ಬೇರಿಸಿದ ಫ್ಯಾನ್ಸ್