ರಶ್ಮಿಕಾ ಹೊಸ ಚಿತ್ರದ ಒಟಿಟಿ ಹಾಗೂ ಸ್ಯಾಟಲೈಟ್​​ ಹಕ್ಕುಗಳಿಗೆ ಭರ್ಜರಿ ಆಫರ್; ಮೊತ್ತ ಕೇಳಿ ಹುಬ್ಬೇರಿಸಿದ ಫ್ಯಾನ್ಸ್

Rashmika Mandanna | Sharwanand: ರಶ್ಮಿಕಾ ನಟನೆಯ ತೆಲುಗಿನ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರ ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಶರ್ವಾನಂದ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರ ಫೆಬ್ರವರಿ 25ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ಸ್ಯಾಟಲೈಟ್ ಹಾಗೂ ಒಟಿಟಿ ಹಕ್ಕುಗಳು ಉತ್ತಮ ಬೆಲೆಗೆ ಮಾರಾಟವಾಗಿದೆ.

ರಶ್ಮಿಕಾ ಹೊಸ ಚಿತ್ರದ ಒಟಿಟಿ ಹಾಗೂ ಸ್ಯಾಟಲೈಟ್​​ ಹಕ್ಕುಗಳಿಗೆ ಭರ್ಜರಿ ಆಫರ್; ಮೊತ್ತ ಕೇಳಿ ಹುಬ್ಬೇರಿಸಿದ ಫ್ಯಾನ್ಸ್
‘ಆಡವಾಲ್ಲು ಮೀಕು ಜೋಹಾರ್ಲು’
Image Credit source: Aadavallu Meeku Johaarlu
TV9kannada Web Team

| Edited By: shivaprasad.hs

Feb 10, 2022 | 12:25 PM

Aadavaallu Meeku Johaarlu | ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಟಾಲಿವುಡ್​ನಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಅವರು, ಉತ್ತಮ ಚಿತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ರಶ್ಮಿಕಾ ನಟಿಸಿದ್ದ ‘ಪುಷ್ಪ: ದಿ ರೈಸ್’ ದೊಡ್ಡ ಹಿಟ್ ಆಗಿತ್ತು. ಅಲ್ಲದೇ ಹಿಂದಿಯಲ್ಲೂ ಉತ್ತಮವಾಗಿ ಗಳಿಸಿದ್ದ ಈ ಚಿತ್ರ, ರಶ್ಮಿಕಾ ಬಾಲಿವುಡ್​ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿದೆ ಎನ್ನಬಹುದು. ಕಾರಣ, ರಶ್ಮಿಕಾ ಸದ್ಯದಲ್ಲೇ ‘ಮಿಷನ್ ಮಜ್ನು’ ಸೇರಿದಂತೆ ಕೆಲವು ಚಿತ್ರಗಳ ಮೂಲಕ ಬಾಲಿವುಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ರಶ್ಮಿಕಾ ನಟನೆಯ ತೆಲುಗಿನ ‘ಆಡವಾಳ್ಳು ಮೀಕು ಜೋಹಾರ್ಲು’ (Aadavallu Meeku Johaarlu) ಚಿತ್ರ ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಶರ್ವಾನಂದ್ (Sharwanand) ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರ ಫೆಬ್ರವರಿ 25ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಇದೀಗ ಟಾಲಿವುಡ್ ಅಂಗಳದಿಂದ ಹೊಸ ಸಮಾಚಾರ ಬಂದಿದ್ದು, ಚಿತ್ರದ ಒಟಿಟಿ ಹಕ್ಕುಗಳು ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.

‘ಆಡವಾಳ್ಳು ಮೀಕು ಜೋಹಾರ್ಲು’ ಹಕ್ಕುಗಳು ಯಾವ ಒಟಿಟಿಗೆ? ಎಷ್ಟು ಮೊತ್ತಕ್ಕೆ?

ರಶ್ಮಿಕಾ, ಶರ್ವಾನಂದ್ ನಟನೆಯ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಇದಾಗ್ಯೂ ಚಿತ್ರದ ಒಟಿಟಿ ಹಕ್ಕುಗಳು ಉತ್ತಮ ಬೆಲೆಗೆ ಮಾರಾಟವಾಗಿದೆ. ಕಂಪ್ಲೀಟ್ ಫ್ಯಾಮಿಲಿ ಎಂಟರ್​ಟೈನರ್ ಆಗಿರುವ ಈ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಸೋನಿ ಲಿವ್ ಖರೀದಿಸಿದೆ. ಇದಕ್ಕಾಗಿ ಬರೋಬ್ಬರಿ 25 ಕೋಟಿ ರೂಗಳನ್ನು ನೀಡಲಾಗಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಉತ್ತಮ ಬೆಲೆಗೆ ಖರೀದಿಸಿದೆ. ಶರ್ವಾನಂದ್ ನಟನೆಯ ಚಿತ್ರ ಸ್ಯಾಟಲೈಟ್ ಹಾಗೂ ಒಟಿಟಿಗೆ ಇಷ್ಟು ದೊಡ್ಡ ಮೊತ್ತವನ್ನು ಪಡೆದಿರುವುದು ಇದೇ ಮೊದಲು. ಇದು ಅಭಿಮಾನಿಗಳಿಗೆ ಅಚ್ಚರಿ ತಂದಿರುವುದಲ್ಲದೇ, ಸಖತ್ ಖುಷಿ ನೀಡಿದೆ.

ಇಂದು ರಿಲೀಸ್ ಆಗಲಿದೆ ಟ್ರೈಲರ್:

‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರವನ್ನು ತಿರುಮಲ ಕಿಶೋರ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿರುವ ಈ ಚಿತ್ರದ ಟ್ರೈಲರ್ ಇಂದು (ಫೆಬ್ರವರಿ 10) ಸಂಜೆ 5.49ಕ್ಕೆ ರಿಲೀಸ್ ಆಗಲಿದೆ. ಖುಷ್ಬು, ರಾಧಿಕಾ ಶರತ್​ಕುಮಾರ್, ಊರ್ವಶಿ ಮೊದಲಾದವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಧಾಕರ್ ಚೆರುಕುರಿ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸುಜಿತ್ ಸಾರಂಗ್ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ:

ರಶ್ಮಿಕಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಕೊವಿಡ್​ ಮಧ್ಯೆಯೂ ರಿಲೀಸ್​ ಆಗುತ್ತಿದೆ ಹೊಸ ಸಿನಿಮಾ

Anushka Sharma: ‘ಒಂದುವೇಳೆ ಅನುಷ್ಕಾ ನನ್ನ ಬಯೋಪಿಕ್​ನಲ್ಲಿ ನಟಿಸಿದರೆ..’; ವಿರಾಟ್ ಕೊಹ್ಲಿ ಹಂಚಿಕೊಂಡಿದ್ರು ಅಚ್ಚರಿಯ ವಿಚಾರ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada