ರಶ್ಮಿಕಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಕೊವಿಡ್​ ಮಧ್ಯೆಯೂ ರಿಲೀಸ್​ ಆಗುತ್ತಿದೆ ಹೊಸ ಸಿನಿಮಾ

ರಶ್ಮಿಕಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಕೊವಿಡ್​ ಮಧ್ಯೆಯೂ ರಿಲೀಸ್​ ಆಗುತ್ತಿದೆ ಹೊಸ ಸಿನಿಮಾ
ರಶ್ಮಿಕಾ-ಶರ್ವಾನಂದ್

ಶರ್ವಾನಂದ್ ಹಾಗೂ ರಶ್ಮಿಕಾ ಮಂದಣ್ಣ ‘ಆಡವಾಳ್ಳು ಮೀಕು ಜೋಹಾರ್ಲು'ದಲ್ಲಿ ಒಟ್ಟಾಗಿ ನಟಿಸಿದ್ದಾರೆ. ತಿರುಮಲ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ರೆಡ್​’ ಸೇರಿ ಹಲವು ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ ಅನುಭವ ಅವರಿಗೆ ಇದೆ.

TV9kannada Web Team

| Edited By: Rajesh Duggumane

Jan 28, 2022 | 7:38 PM

ಕೊರೊನಾ ವೈರಸ್​ ಮೂರನೇ ಅಲೆಯ ಅಬ್ಬರ ಜೋರಾಗಿದೆ. ಆದರೆ, ಸಾವಿನ ಸಂಖ್ಯೆ ಕಡಿಮೆ ಇರುವ ಕಾರಣ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ಹೀಗಾಗಿ, ಎಲ್ಲವೂ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಚಿತ್ರರಂಗದಲ್ಲೂ ಮೊದಲಿನ ಕಳೆ ನಿಧಾನವಾಗಿ ಮರಳುತ್ತಿದೆ. ದೊಡ್ಡ ಸ್ಟಾರ್​ ನಟರ ಸಿನಿಮಾಗಳು ರಿಲೀಸ್​ ದಿನಾಂಕ ಘೋಷಣೆ ಮಾಡಿಕೊಳ್ಳುತ್ತಿವೆ. ಶೇ.50 ಆಸನಕ್ಕೆ ಮಾತ್ರ ಅವಕಾಶ ಇರುವ ನಿಯಮದ ಹೊರತಾಗಿಯೂ ದೊಡ್ಡದೊಡ್ಡ ಸಿನಿಮಾಗಳು ಅದೃಷ್ಟಪರೀಕ್ಷೆಗೆ ಮುಂದಾಗುತ್ತಿವೆ. ಈಗ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಹೊಸ ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಘೋಷಣೆ ಮಾಡಿದೆ. ಹಾಗಾದರೆ ಯಾವುದು ಆ ಚಿತ್ರ? ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ (Aadavaallu Meeku Joharlu).

ಶರ್ವಾನಂದ್ ಹಾಗೂ ರಶ್ಮಿಕಾ ಮಂದಣ್ಣ ‘ಆಡವಾಳ್ಳು ಮೀಕು ಜೋಹಾರ್ಲು’ದಲ್ಲಿ ಒಟ್ಟಾಗಿ ನಟಿಸಿದ್ದಾರೆ. ತಿರುಮಲ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ರೆಡ್​’ ಸೇರಿ ಹಲವು ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ ಅನುಭವ ಅವರಿಗೆ ಇದೆ. ಅವರು ನಿರ್ದೇಶನ ಮಾಡಿರುವ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಫೆಬ್ರವರಿ 25ರಂದು ಚಿತ್ರಮಂದಿರದಲ್ಲೇ ತೆರೆಗೆ ಬರುತ್ತಿದೆ.

ಸದ್ಯ, ಕೊರೊನಾ ಪ್ರಕರಣಗಳು ಹೆಚ್ಚಿದ್ದರೂ ಇನ್ನೊಂದು ತಿಂಗಳಲ್ಲಿ ಕೊವಿಡ್​ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಚಿತ್ರತಂಡ ರಿಲೀಸ್ ಡೇಟ್​ ಘೋಷಣೆ ಮಾಡಿದೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣಗೆ ದಕ್ಷಿಣ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಹೀಗಾಗಿ, ಅವರು ಈ ಚಿತ್ರದಲ್ಲಿ ನಟಿಸಿರುವುದರಿಂದ ಸಿನಿಮಾದ ಮೈಲೇಜ್​ ಹೆಚ್ಚುವ ಸಾಧ್ಯತೆ ಇದೆ.

2020ರ ಅಕ್ಟೋಬರ್ ತಿಂಗಳಲ್ಲಿ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರ ಘೋಷಣೆ ಆಗಿತ್ತು. ಕೊವಿಡ್​ ಎರಡನೇ ಅಲೆ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬವಾದವು. ಈಗ ಸಿನಿಮಾ ರಿಲೀಸ್​ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಪ್ರಚಾರ ಕಾರ್ಯ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಸೀರೆ ವಿಚಾರದಲ್ಲಿ ಸುದ್ದಿಯಾಗಿದ್ದ ರಶ್ಮಿಕಾ:

ಜನವರಿ 22ರಂದು ರಶ್ಮಿಕಾ ಮಂದಣ್ಣ ಅವರು ಎರಡು ಫೋಟೋಗಳನ್ನು ಪೋಸ್ಟ್​ ಮಾಡಿದ್ದರು. ಈ ಫೋಟೋದಲ್ಲಿ ಅವರು ಸೀರೆ ಉಟ್ಟಿದ್ದರು. ಇದರಲ್ಲಿ ಅವರು ಸಖತ್​ ಟ್ರೆಡಿಷನಲ್​ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದರು. ಅಚ್ಚರಿ ಎಂದರೆ ಈ ಸೀರೆಯ ಬೆಲೆ ಬರೋಬ್ಬರಿ 31 ಸಾವಿರ ರೂಪಾಯಿ! ಈ ಸೀರೆಯ ಬೆಲೆ ಕೇಳಿ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಪಟ್ಟಿದ್ದರು. ಇನ್ನೂ ಕೆಲವರು ಈ ಸೀರೆ ಅವರಿಗೆ ಹೊಂದುತ್ತದೆ ಎಂದು ಹೇಳಿದ್ದರು

ನಟಿ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್​ವುಡ್​ಗಿಂತ ಹೆಚ್ಚು ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಅವರ ಕಾಲ್​ಶೀಟ್​ ಪಡೆಯೋಕೆ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಹಾಗಲ್ಲ. ತುಂಬಾನೇ ಎಚ್ಚರಿಕೆ ವಹಿಸಿ ಕಥೆ ಒಪ್ಪಿಕೊಳ್ಳುತ್ತಿದ್ದಾರೆ. ಅವರ ಪಾತ್ರಕ್ಕೆ ಸ್ಕೋಪ್​ ಇದೆ ಎಂದಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಖ್ಯಾತಿ ಹೆಚ್ಚುತ್ತಿದ್ದಂತೆ ಅವರಿಗೆ ಬರುವ ಜಾಹೀರಾತುಗಳ​ ಸಂಖ್ಯೆ ಕೂಡ ಹೆಚ್ಚಿದೆ.  ಸಾಕಷ್ಟು ಬ್ರ್ಯಾಂಡ್​ಗಳಿಗೆ ರಶ್ಮಿಕಾ ಮಂದಣ್ಣ ರಾಯಭಾರಿ ಆಗಿದ್ದಾರೆ.

ಇದನ್ನೂ ಓದಿ: ಕರಣ್​ ಜೋಹರ್​ ಜತೆ ರಶ್ಮಿಕಾ ಮಂದಣ್ಣ ಸಿನಿಮಾ?

ಟಾಲಿವುಡ್​ನಲ್ಲಿ ಹೆಚ್ಚುತ್ತಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ ಮಂದಣ್ಣಗೆ ಎದುರಾಗುತ್ತಾ ಟಫ್​ ಸ್ಪರ್ಧೆ

Follow us on

Related Stories

Most Read Stories

Click on your DTH Provider to Add TV9 Kannada