ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಖ್ಯಾತಿ ಜತೆಗೆ ಒಂದಷ್ಟು ಬೆದರಿಕೆಗಳೂ ಬಂದವು. ಇದಕ್ಕೆಲ್ಲ ಅವರು ತಲೆಕೆಡಿಸಿಕೊಂಡಿಲ್ಲ. ಸದ್ಯ ವಿವೇಕ್ ಅಗ್ನಿಹೋತ್ರಿಗೆ ವೈ ಶ್ರೇಣಿಯ ಭದ್ರತೆ (Y Catogery Security) ನೀಡಲಾಗಿದೆ. ಇತ್ತೀಚೆಗೆ ಅವರು ವೈ ಕೆಟಗರಿ ಭದ್ರತೆಯಲ್ಲಿ ವಾಕಿಂಗ್ ಹೋಗಿದ್ದರು. ‘ನಮ್ಮ ತೆರಿಗೆ ಹಣ ಹೀಗೆ ವ್ಯಯವಾಗುತ್ತಿದೆ’ ಎಂದು ಒಂದಷ್ಟು ಜನ ಕೊಂಕು ನುಡಿದಿದ್ದರು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ತಿರುಗೇಟು ಕೊಟ್ಟಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಬೆಳಿಗ್ಗೆ ವಾಕಿಂಗ್ ಹೊರಟ ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿರುವ ವಿಡಿಯೋ ಇದಾಗಿತ್ತು. ‘ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡ ತೋರಿಸಿದ್ದಕ್ಕಾಗಿ ತೆರೆಬೇಕಾದ ಬೆಲೆ ಇದು. ಹಿಂದೂಗಳು ಬಹುಸಂಖ್ಯೆಯಲ್ಲಿ ಇರುವ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ! ನನ್ನದೇ ದೇಶದಲ್ಲಿ ಬಂಧಿ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದರು.
ಈ ವಿಡಿಯೋಗೆ ಅನೇಕರು ಟೀಕೆ ಮಾಡಿದ್ದರು. ‘ನಮ್ಮ ತೆರಿಗೆ ಹಣ ಹೀಗೆಲ್ಲ ವ್ಯಯವಾಗುತ್ತಿದೆ’ ಎಂದು ಒಂದಷ್ಟು ಮಂದಿ ಟೀಕೆ ಮಾಡಿದ್ದರು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ತಿರುಗೇಟು ನೀಡಿದ್ದಾರೆ. ಭದ್ರತಾ ಸಿಬ್ಬಂದಿಯ ಫೋಟೋ ಹಂಚಿಕೊಂಡಿರುವ ಅವರು, ‘ಧಾರ್ಮಿಕ ಭಯೋತ್ಪಾದನೆಯನ್ನು ತಡೆಯಲು ತೆರಿಗೆ ಹಣವನ್ನು ಬಳಸಲಾಗುತ್ತಿದೆ. ಇದು ನಿಂತರೆ ನಾನೂ ಕೂಡ ಸ್ವತಂತ್ರವಾಗಿ ಬದುಕಬಹುದು’ ಎಂದು ಉತ್ತರ ನೀಡಿದ್ದಾರೆ. ಈ ಮೂಲಕ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
Tax payers money is used here to combat religious terrorism. If this stops, I can also live freely. #Kashmir https://t.co/crBcPhJdnY pic.twitter.com/LSHXq53DAu
— Vivek Ranjan Agnihotri (@vivekagnihotri) December 24, 2022
ಇದನ್ನೂ ಓದಿ: ಹೆಡ್ಲೈನ್ ಓದಿ ಯಾಮಾರಿದ ವಿವೇಕ್ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇ ಬೇರೆ
‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತೆರೆಗೆ ಬಂದ ನಂತರದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಮುನ್ನೆಲೆಗೆ ಬಂದರು. ಈಗ ‘ದಿ ವ್ಯಾಕ್ಸಿನ್ ವಾರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಕೊವಿಡ್ ಸಮಯದಲ್ಲಿ ಭಾರತ ವ್ಯಾಕ್ಸಿನ್ ತಯಾರಿಸಿದ ಕಥೆ ಈ ಚಿತ್ರದಲ್ಲಿದೆ. ಈ ಸಿನಿಮಾ 2024ರಲ್ಲಿ ತೆರೆಗೆ ಬರುತ್ತಿದೆ. ರಾಜಕೀಯ ಉದ್ದೇಶದಿಂದ ಮಾಡಲಾದ ಸಿನಿಮಾ ಇದು ಎಂದು ಕೆಲವರು ಟೀಕೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ