ಬಾಲಿವುಡ್​ನಲ್ಲಿ ಮತ್ತೆ ಗೆದ್ದ ರಶ್ಮಿಕಾ; ಮೊದಲ ದಿನವೇ ‘ಥಾಮಾ’ ಸಿನಿಮಾ ಭರ್ಜರಿ ಕಲೆಕ್ಷನ್

‘ಮುಂಜ್ಯ’, ‘ಕುಕುಡ’ ರೀತಿಯ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್​ದಾರ್ ಅವರು ‘ಥಾಮಾ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಿಸಿ ಗಮನ ಸೆಳೆದ ದಿನೇಶ್ ವಿಜನ್ ಅವರ ‘ಮ್ಯಾಡಾಕ್’ ನಿರ್ಮಾಣ ಮಾಡಿದೆ. ರಶ್ಮಿಕಾ ಇದರಿಂದ ಗೆದ್ದಿದ್ದಾರೆ.

ಬಾಲಿವುಡ್​ನಲ್ಲಿ ಮತ್ತೆ ಗೆದ್ದ ರಶ್ಮಿಕಾ; ಮೊದಲ ದಿನವೇ ‘ಥಾಮಾ’ ಸಿನಿಮಾ ಭರ್ಜರಿ ಕಲೆಕ್ಷನ್
ರಶ್ಮಿಕಾ

Updated on: Oct 22, 2025 | 7:42 AM

ದೀಪಾವಳಿ ಪ್ರಯುಕ್ತ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಆಯುಷ್ಮಾನ್ ಖುರಾನಾ ನಟನೆಯ ‘ಥಮ’ ಸಿನಿಮಾ ಅಕ್ಟೋಬರ್ 21ರಂದು ರಿಲೀಸ್ ಆಯಿತು. ಸಾಮಾನ್ಯವಾಗಿ ಸಿನಿಮಾಗಳು ಗುರುವಾರ ಅಥವಾ ಶುಕ್ರವಾರ ರಿಲೀಸ್ ಆಗುತ್ತವೆ. ಆದರೆ, ‘ಥಮ’ ಚಿತ್ರತಂಡದವರು ಮಂಗಳವಾರ ಚಿತ್ರವನ್ನು ರಿಲೀಸ್ ಮಾಡಿ ಅಚ್ಚರಿ ಮೂಡಿಸಿದರು. ಆದರೆ, ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಗಳಿಕೆ ಮಾಡಿದೆ. ಈ ಚಿತ್ರದಿಂದ ರಶ್ಮಿಕಾ ಮಂದಣ್ಣ ಮತ್ತೆ ಗೆದ್ದು ಬೀಗಿದ್ದಾರೆ.

‘ಥಮ’ ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಒಂದು ಲವ್​ ಸ್ಟೋರಿ ಕೂಡ ಇದೆ. ಈ ಸಿನಿಮಾ ಬುಕ್​ ಮೈ ಶೋ ನಲ್ಲಿ ಒಳ್ಳೆಯ ರೇಟಿಂಗ್ ಕೂಡ ಪಡೆದುಕೊಂಡಿದೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ 24 ಕೋಟಿ ರೂಪಾಯಿ. ಮೊದಲ ದಿನವೇ ಸಿನಿಮಾ ಇಷ್ಟು ದೊಡ್ಡ ಕಲೆಕ್ಷನ್ ಮಾಡಿರುವುದರಿಂದ ಸಿನಿಮಾ ಗೆದ್ದಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ
ದೀಪಿಕಾ-ರಣವೀರ್ ಪಡುಕೋಣೆ ಮಗಳ ಮುಖ ರಿವೀಲ್; ಯಾರ ಹಾಗೆ ಕಾಣ್ತಾರೆ ದುವಾ?
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಪರಿಣಿತಿ ಚೋಪ್ರಾ
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾ ‘ಥಮ’ ಬಿಡುಗಡೆ: ಸಿನಿಮಾ ಹೇಗಿದೆ?

ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ‘ಅನಿಮಲ್’, ‘ಛಾವ’ ಸಿನಿಮಾಗಳು ಗೆಲುವು ಕಂಡಿವೆ. ‘ಸಿಕಂದರ್’ ಸಿನಿಮಾ ಸಾಧಾರಣ ಎನಿಸಿಕೊಂಡಿತು. ಈಗ ‘ಥಮ’ ಮೂಲಕ ರಶ್ಮಿಕಾ ಗೆದ್ದಿದ್ದಾರೆ. ಇತ್ತೀಚೆಗೆ ಸೋಲನ್ನೇ ಹೆಚ್ಚು ಕಂಡ ಆಯುಷ್ಮಾನ್ ಕೂಡ ಈ ಸಿನಿಮಾ ಮೂಲಕ ಗೆದ್ದಿದ್ದಾರೆ.

‘ಮುಂಜ್ಯ’, ‘ಕುಕುಡ’ ರೀತಿಯ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್​ದಾರ್ ಅವರು ‘ಥಾಮಾ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಿಸಿ ಗಮನ ಸೆಳೆದ ದಿನೇಶ್ ವಿಜನ್ ಅವರ ‘ಮ್ಯಾಡಾಕ್’ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:40 am, Wed, 22 October 25