Priyanka Chopra: ಸೆಟ್​​​ನಲ್ಲೇ ಒಳ ಉಡುಪು ತೆಗೆಯಲು ಹೇಳಿದ್ದ ನಿರ್ದೇಶಕ; ಭಯಾನಕ ಸತ್ಯ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

|

Updated on: May 24, 2023 | 11:23 AM

ಪ್ರಿಯಾಂಕಾ ಚೋಪ್ರಾ ಚರ್ಮದ ಬಣ್ಣದ ಬಗ್ಗೆ ಅನೇಕರು ಟೀಕೆ ಮಾಡಿದ್ದರು. ಈ ವಿಚಾರದ ಬಗ್ಗೆ ಅವರು ಈ ಮೊದಲು ಮಾತನಾಡಿದ್ದರು. ಈಗ ಹಿಂದಿ ನಿರ್ದೇಶಕನೊಬ್ಬನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

Priyanka Chopra: ಸೆಟ್​​​ನಲ್ಲೇ ಒಳ ಉಡುಪು ತೆಗೆಯಲು ಹೇಳಿದ್ದ ನಿರ್ದೇಶಕ; ಭಯಾನಕ ಸತ್ಯ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Follow us on

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್​ಗೆ ಮರಳುವ ಯಾವುದೇ ಆಲೋಚನೆ ಅವರಿಗೆ ಉಳಿದುಕೊಂಡಿಲ್ಲ. ಅನೇಕರ ಬಾರಿ ಬಾಲಿವುಡ್​ನಲ್ಲಿ ಆದ ತೊಂದರೆಗಳ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದಾರೆ. ಆರಂಭದಲ್ಲಿ ಅವರ ಚರ್ಮದ ಬಣ್ಣದ ಬಗ್ಗೆ ಅನೇಕರು ಟೀಕೆ ಮಾಡಿದ್ದರು. ಈ ವಿಚಾರದ ಬಗ್ಗೆ ಅವರು ಈ ಮೊದಲು ಮಾತನಾಡಿದ್ದರು. ಈಗ ಹಿಂದಿ ನಿರ್ದೇಶಕನೊಬ್ಬನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿದೆ.

‘ಆಗಷ್ಟೇ ನಾನು ಬಾಲಿವುಡ್​ಗೆ ಕಾಲಿಟ್ಟಿದ್ದೆ. ನಾನೊಂದು ಸಿನಿಮಾ ಒಪ್ಪಿಕೊಂಡಿದ್ದೆ. ಅದರಲ್ಲಿ ಡ್ಯಾನ್ಸ್ ಮಾಡಬೇಕಿತ್ತು. ಆಗ ನಿರ್ದೇಶಕರು ನನ್ನ ಬಳಿ ಬಂದು ನೀವು ನೃತ್ಯ ಮಾಡುತ್ತ ನಿಮ್ಮ ಉಳ ಉಡುಪಗಳನ್ನೆಲ್ಲ ಕಳಚಬೇಕು ಎಂದು ಹೇಳಿದರು. ನನಗೆ ತುಂಬ ಕೋಪ ಬಂತು. ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಆದರೆ ಒಪ್ಪಲಿಲ್ಲ. ಮರುದಿನವೇ ಆ ಪ್ರಾಜೆಕ್ಟ್​ನಿಂದ ನಾನು ಹೊರನಡೆದೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ’ ಎಂಬುದಾಗಿ ಪ್ರಿಯಾಂಕಾ ಚೋಪ್ರಾ ಹಳೆ ಘಟನೆ ನೆನಪಿಸಿಕೊಂಡಿದ್ದಾರೆ.

‘ಶೂಟಿಂಗ್​ ಸೆಟ್​ನಲ್ಲಿ ನನ್ನ ಒಳ ಉಡುಪು ಬಿಚ್ಚಲು ಹೇಳಿದ ನಿರ್ದೇಶಕನಿಗೆ ನಾನೇನೂ ಹೇಳಲಿಲ್ಲ. ಅವನ ವಿರುದ್ಧ ಮಾತನಾಡಲಿಲ್ಲ. ಆತನ ವಿರುದ್ಧ ಪ್ರತಿಭಟಿಸಲು ನನಗೆ ಭಯವಿತ್ತು. ಈ ಬಗ್ಗೆ ಬೇಸರವಿದೆ’ ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

‘ನಾನು ಅಂದು ಸುಮ್ಮನೆ ಆ ಸಿನಿ ನಿರ್ಮಾಪಕನ ಕಚೇರಿಯಿಂದ ಹೊರಟೆ. ನಿಜಕ್ಕೂ ದಿಗ್ಭ್ರಮೆಯಾಗಿತ್ತು. ಆದರೆ ಈಗಲೂ ಅನ್ನಿಸುತ್ತದೆ, ನಾನು ಅಂದು ಆ ವ್ಯಕ್ತಿಯನ್ನು ಎದುರಿಸಬೇಕಿತ್ತು. ನೀವು ಹೇಳುತ್ತಿರುವುದು ತಪ್ಪು ಎಂದು ಅವರಿಗೆ ಕಠಿಣವಾಗಿ ಹೇಳಬೇಕಿತ್ತು. ಆ ಕ್ಷಣಕ್ಕೆ ಭಯಗೊಂಡು, ಮೌನವಾಗಿ ಇಲ್ಲಿಂದ ದೂರ ನಡೆಯುವುದೇ ಉತ್ತಮ ಎನ್ನಿಸಿಬಿಟ್ಟಿತ್ತು. ಅದು ನಾನು ಮಾಡಿದ ದೊಡ್ಡ ತಪ್ಪು’ ಎಂದಿದ್ದಾರೆ ಪ್ರಿಯಾಂಕಾ.

ಇದನ್ನೂ ಓದಿ: ಹಾಟ್ ಅವತಾರ ತಾಳಿದ ನಟಿ ಪ್ರಿಯಾಂಕಾ ಚೋಪ್ರಾ: ಇಷ್ಟು ಬಿಸಿಯಾದರೆ ಹೇಗೆಂದ ಅಭಿಮಾನಿಗಳು

ಪ್ರಿಯಾಂಕಾ ಚೋಪ್ರಾ ಅವರು ಪಾಪ್ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದರು. ಆ ಬಳಿಕ ಅವರು ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಇತ್ತೀಚೆಗೆ ಅವರ ಸಹೋದರಿ ಪರಿಣೀತಿ ಚೋಪ್ರಾ ಅವರ ಎಂಗೇಜ್​​ಮೆಂಟ್​ಗಾಗಿ ಅವರು ದೆಹಲಿಗೆ ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:12 am, Wed, 24 May 23