Aamir Khan: ಒಟ್ಟಿಗೆ ಆಟ ಆಡಿದ ಆಮಿರ್​ ಖಾನ್​-ಫಾತಿಮಾ ಸನಾ ಶೇಖ್​; ನೆಟ್ಟಿಗರಿಗೆ ಹೆಚ್ಚಿತು ಗುಮಾನಿ

‘ದಂಗಲ್​’ ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ಫಾತಿಮಾ ಸನಾ ಶೇಖ್​ ಅವರು ತಂದೆ-ಮಗಳ ಪಾತ್ರದಲ್ಲಿ ನಟಿಸಿದ್ದರು. ಆದರೆ ಅವರಿಬ್ಬರು ಮದುವೆ ಆಗುತ್ತಾರೆ ಎಂಬ ಗಾಸಿಪ್​ ಹಬ್ಬಿದಾದ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು.

Aamir Khan: ಒಟ್ಟಿಗೆ ಆಟ ಆಡಿದ ಆಮಿರ್​ ಖಾನ್​-ಫಾತಿಮಾ ಸನಾ ಶೇಖ್​; ನೆಟ್ಟಿಗರಿಗೆ ಹೆಚ್ಚಿತು ಗುಮಾನಿ
ಆಮಿರ್ ಖಾನ್, ಫಾತಿಮಾ ಸನಾ ಶೇಖ್
Follow us
ಮದನ್​ ಕುಮಾರ್​
|

Updated on: May 24, 2023 | 3:46 PM

ನಟ ಆಮಿರ್ ಖಾನ್​ ಅವರು ಕಿರಣ್​ ರಾವ್​ (Kiran Rao) ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಅಂತ್ಯ ಹಾಡಿದರು. ವಿಚ್ಛೇದನ ನೀಡಿದ ಬಳಿಕ ಅವರ ಬಗ್ಗೆ ಅನೇಕ ಬಗೆಯ ಗಾಸಿಪ್​ಗಳು ಹಬ್ಬಿದ್ದುಂಟು. ಅವರು ನಟಿ ಫಾತಿಮಾ ಸಹಾ ಶೇಖ್​​ ಜೊತೆ ಹೆಚ್ಚು ಆಪ್ತವಾಗಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರಿಬ್ಬರ ನಡುವೆ ಇರುವಂತಹ ಸಂಬಂಧ ಎಂಥದ್ದು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆಮಿರ್​ ಖಾನ್ (Aamir Khan)​ ಮತ್ತು ಫಾತಿಮಾ ಸನಾ ಶೇಖ್​​ ಅವರು ಮದುವೆ ಆಗಬಹುದು ಎಂಬ ಗುಮಾನಿ ಕೂಡ ಅನೇಕರಿಗೆ ಇದೆ. ಆ ಗುಮಾನಿ ಹೆಚ್ಚಾಗುವ ರೀತಿಯಲ್ಲಿ ಒಂದು ವಿಡಿಯೋ ವೈರಲ್​ ಆಗಿದೆ. ಆಮಿರ್​ ಖಾನ್​ ಮತ್ತು ಫಾತಿಮಾ ಸನಾ ಶೇಖ್​​ ಒಟ್ಟಾಗಿ ಆಟ ಆಡಿದ್ದಾರೆ. ಆ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಈ ಬಗ್ಗೆ ಆಮಿರ್​ ಖಾನ್​ ಅಥವಾ ಫಾತಿಮಾ ಸನಾ ಶೇಖ್​​ (Fatima Sana Shaikh) ಅವರು ಪ್ರತಿಕ್ರಿಯೆ ನೀಡಬಹುದು ಎಂದು ಫ್ಯಾನ್ಸ್​ ನಿರೀಕ್ಷಿಸಿದ್ದಾರೆ.

ಆಮಿರ್ ಖಾನ್​ ಕುಟುಂಬದ ಜೊತೆ ಫಾತಿಮಾ ಸನಾ ಶೇಖ್​​ ಅವರು ಹೆಚ್ಚು ಆಪ್ತವಾಗಿದ್ದಾರೆ. ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಜೊತೆ ಫಾತಿಮಾಗೆ ಸ್ನೇಹ ಇದೆ. ಈ ಹಿಂದೆ ‘ದಂಗಲ್​’ ಮತ್ತು ‘ಥಗ್ಸ್​ ಆಫ್​ ಹಿಂದೂಸ್ತಾನ್​’ ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ಫತಿಮಾ ಸನಾ ಶೇಖ್​ ಅವರು ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಆಪ್ತತೆ ಹೆಚ್ಚಾಯಿತು.

View this post on Instagram

A post shared by yogen shah (@yogenshah_s)

ಫಾತಿಮಾ ಸನಾ ಶೇಖ್​ ಮತ್ತು ಆಮಿರ್ ಖಾನ್​ ಮದುವೆ ಆಗಬಹುದು ಎಂಬ ಗಾಸಿಪ್​ ಕೇಳಿಬಂದಿದ್ದು ಇದೇ ಮೊದಲೇನೂ ಅಲ್ಲ. ಆದರೆ ಅಂಥ ರಿಪೋರ್ಟ್​ಗಳು ಪ್ರಕಟ ಆದಾಗ ಫಾತಿಮಾ ಸಖತ್​ ಡಿಸ್ಟರ್ಬ್​ ಆಗಿದ್ದರಂತೆ. ಆದರೆ ಪದೇ ಪದೇ ಅಂಥದ್ದೇ ಗಾಸಿಪ್​ ಕೇಳಿಬಂದ ಬಳಿಕ ಅವರು ಇದನ್ನೆಲ್ಲ ನಿರ್ಲಕ್ಷಿಸಲು ಆರಂಭಿಸಿದರು.

ಇದನ್ನೂ ಓದಿ: Aamir Khan: ನೇಪಾಳಕ್ಕೆ ತೆರಳಿ ಧ್ಯಾನ ಮಾಡುತ್ತಿರುವ ಆಮಿರ್​ ಖಾನ್​; ಸೋಲಿನ ಸುಳಿಯಿಂದ ಹೊರಬಾರದ ನಟ

‘ದಂಗಲ್​’ ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ಫಾತಿಮಾ ಸನಾ ಶೇಖ್​ ಅವರು ತಂದೆ-ಮಗಳ ಪಾತ್ರದಲ್ಲಿ ನಟಿಸಿದ್ದರು. ಆದರೆ ಅವರಿಬ್ಬರು ಮದುವೆ ಆಗುತ್ತಾರೆ ಎಂಬ ಗಾಸಿಪ್​ ಹಬ್ಬಿದಾದ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು. ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಮಿರ್ ಖಾನ್​ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ‘ಲಾಲ್​ ಸಿಂಗ್​ ಚಡ್ಡಾ’ ಸೋತ ನಂತರ ಅವರು ಹೊಸ ಸಿನಿಮಾ ಅನೌನ್ಸ್​ ಮಾಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮುಖವಾಡ ಕಳಚಿದ ಮೇಲೆ ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ
ಮುಖವಾಡ ಕಳಚಿದ ಮೇಲೆ ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ
ಕಲಬುರಗಿಯ ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ
ಕಲಬುರಗಿಯ ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ
Video: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಲಾರೆನ್ ಪೊವೆಲ್
Video: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಲಾರೆನ್ ಪೊವೆಲ್
ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ