‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲೋಕೆ ನಾನೇ ಕಾರಣ ಎಂದ ಅಜಯ್ ದೇವಗನ್

‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲೋಕೆ ಹಲವು ವಿಚಾರ ಕಾರಣ ಆಗಿದೆ. ಸಿನಿಮಾದ ಡ್ಯಾನ್ಸ್ ಇಲ್ಲಿ ಮೋಡಿ ಮಾಡಿದೆ. ಈಗ ಅಜಯ್ ದೇವಗನ್ ಈ ವಿಚಾರದಲ್ಲಿ ಜೋಕ್ ಮಾಡಿದ್ದಾರೆ.

‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲೋಕೆ ನಾನೇ ಕಾರಣ ಎಂದ ಅಜಯ್ ದೇವಗನ್
ಅಜಯ್-ರಾಜಮೌಳಿ

Updated on: Mar 25, 2023 | 7:20 AM

‘ಆರ್​ಆರ್​ಆರ್’ ಚಿತ್ರದ (RRR Movie) ‘ನಾಟು ನಾಟು..’ ಹಾಡು ಆಸ್ಕರ್ ಅವಾರ್ಡ್ ಗೆದ್ದಿದೆ. ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂಎಂ ಕೀರವಾಣಿಗೆ ಎಲ್ಲ ಕಡೆಗಳಿಂದ ಶುಭಾಶಯ ಬಂದಿದೆ. ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್ ಗೆಲ್ಲಲು ಇವರಿಬ್ಬರು ಪ್ರಮುಖ ಕಾರಣ. ಇದರ ಜೊತೆಗೆ ರಾಮ್ ಚರಣ್, ಜೂ.ಎನ್​ಟಿಆರ್​, ಹಾಡಿನ ಸಾಹಿತ್ಯ ಬರೆದ ಚಂದ್ರಬೋಸ್ ಮತ್ತಿತರರ ಕೊಡುಗೆಯೂ ಇದೆ. ಈಗ ಅಜಯ್ ದೇವಗನ್ ಅವರು ಈ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದಾರೆ. ‘ನಾಟು ನಾಟು ಆಸ್ಕರ್ ಗೆದ್ದಿದ್ದು ನನ್ನಿಂದ’ ಎಂದಿದ್ದಾರೆ ಅವರು. ಹಾಗಂತ ಅವರು ಇದನ್ನು ಹೇಳಿದ್ದು ಗಂಭೀರವಾಗಿ ಅಲ್ಲ.

‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲೋಕೆ ಹಲವು ವಿಚಾರ ಕಾರಣ ಆಗಿದೆ. ಸಿನಿಮಾದ ಡ್ಯಾನ್ಸ್ ಇಲ್ಲಿ ಮೋಡಿ ಮಾಡಿದೆ. ಚಿತ್ರದ ಸಂಗೀತವೂ ಕಮಾಲ್ ಮಾಡಿದೆ. ಒಟ್ಟಾರೆ ಹಾಡಿನಲ್ಲಿರುವ ಪ್ರತಿ ವಿಚಾರವೂ ಆಸ್ಕರ್ ಗೆಲ್ಲೋಕೆ ಸಹಕಾರಿ ಆಗಿದೆ. ಈಗ ಅಜಯ್ ದೇವಗನ್ ಈ ವಿಚಾರದಲ್ಲಿ ಜೋಕ್ ಮಾಡಿದ್ದಾರೆ. ‘ನಾಟು ನಾಟು ಆಸ್ಕರ್ ಗೆಲ್ಲೋಕೆ ನಾನೇ ಕಾರಣ, ಏಕೆಂದರೆ ನಾನು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿಲ್ಲವಲ್ಲ’ ಎಂದಿದ್ದಾರೆ. ಈ ಮೂಲಕ ತಮಗೆ ಡ್ಯಾನ್ಸ್ ಮಾಡೋಕೆ ಬರಲ್ಲ ಎಂದಿದ್ದಾರೆ.

ಇದನ್ನೂ ಓದಿ: ಡ್ಯಾನ್ಸ್ ಟೀಚರ್ ಆಗಿದ್ದವನ ಆಸ್ಕರ್ ವರೆಗೆ ಕೊಂಡೊಯ್ದ ರಾಜಮೌಳಿ: ನಾಟು-ನಾಟು ಕೊರಿಯೋಗ್ರಾಫರ್ ಬಗ್ಗೆ ನಿಮಗೆಷ್ಟು ಗೊತ್ತು?

ಅಜಯ್ ದೇವಗನ್ ನಿರ್ದೇಶಿಸಿ, ನಟಿಸಿರುವ ‘ಭೋಲಾ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ತಮಿಳಿನ ‘ಕೈದಿ’ ಚಿತ್ರದ ರಿಮೇಕ್ ಇದು. ಈ ಸಿನಿಮಾದ ಪ್ರಚಾರದಲ್ಲಿ ಅಜಯ್ ದೇವಗನ್ ಬ್ಯುಸಿ ಇದ್ದಾರೆ. ಮಾರ್ಚ್ 30ರಂದು ಚಿತ್ರ ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕೆ ಅವರು ‘ದಿ ಕಪಿಲ್ ಶರ್ಮಾ’ ಶೋಗೆ ಬಂದಿದ್ದರು. ಈ ವೇಳೆ ಅವರು ಈ ಮಾತನ್ನು ಹೇಳಿಕೊಂಡಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: Naatu Naatu: ಮಗನ ಸಿನಿಮಾದ ಹಾಡಿಗೆ ಆಸ್ಕರ್​ ಪ್ರಶಸ್ತಿ; ಮೆಗಾಸ್ಟಾರ್​ ಜಿರಂಜೀವಿ ಮೊದಲ ರಿಯಾಕ್ಷನ್​

ಅಜಯ್ ದೇವಗನ್ ಅವರ ಜೋಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ‘ಮೊದಲ ಬಾರಿಗೆ ಅಜಯ್ ದೇವಗನ್ ಅವರು ನಗುತ್ತಿರುವುದನ್ನು ನೋಡಿದೆ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ. ಅಜಯ್ ದೇವಗನ್ ಅವರು ಬಹುತೇಕ ಸಂದರ್ಭದಲ್ಲಿ ಗಂಭೀರವಾಗಿಯೇ ಇರುತ್ತಾರೆ. ಈ ಕಾರಣಕ್ಕೆ ಈ ರೀತಿಯ ಕಮೆಂಟ್​ಗಳು ಬಂದಿವೆ. ‘ಭೋಲಾ’ ಸಿನಿಮಾ ಯಶಸ್ಸು ಕಾಣಲಿ ಎಂದು ಅಜಯ್​ ದೇವಗನ್ ಅವರಿಗೆ ಕಪಿಲ್ ಶರ್ಮಾ ವಿಶ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ