ಕೋರ್ಟ್​ ಕೇಸ್​ನಲ್ಲಿ ಗೆದ್ದ ಕಪಿಲ್ ಶರ್ಮಾ; ಅರ್ಜಿ ಹಾಕಿದವನಿಗೆ ಕಿವಿಮಾತು ಹೇಳಿದ ಕೋರ್ಟ್

‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಆಕ್ಷೇಪಾರ್ಹ ವಿಚಾರ ಹಾಗೂ ಮಹಿಳೆಯರಿಗೆ ಅಗೌರವ ಕೊಡುವ ರೀತಿಯಲ್ಲಿ ಇದೆ ಎಂದು ವ್ಯಕ್ತಿಯೋರ್ವ ಗ್ವಾಲಿಯರ್ ಹೈಕೋರ್ಟ್​ನಲ್ಲಿ ಎರಡು ವರ್ಷಗಳ ಹಿಂದೆ ಕೇಸ್ ದಾಖಲು ಮಾಡಿದ್ದರು. ಪ್ರಕರಣ ಕಪಿಲ್ ಪರವಾಗಿದೆ.

ಕೋರ್ಟ್​ ಕೇಸ್​ನಲ್ಲಿ ಗೆದ್ದ ಕಪಿಲ್ ಶರ್ಮಾ; ಅರ್ಜಿ ಹಾಕಿದವನಿಗೆ ಕಿವಿಮಾತು ಹೇಳಿದ ಕೋರ್ಟ್
ಕಪಿಲ್ ಶರ್ಮಾ
Edited By:

Updated on: Mar 23, 2024 | 2:59 PM

ನಟ ಕಪಿಲ್ ಶರ್ಮಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರ ಖ್ಯಾತಿ ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ. ಕಪಿಲ್ ಶರ್ಮಾ ಅವರು ‘ದಿ ಕಪಿಲ್ ಶರ್ಮಾ ಶೋ’ (The Kapil Sharma Show) ನಡೆಸಿಕೊಟ್ಟಿದ್ದರು. ಈ ಶೋಗೆ ಕಾನೂನು ತೊಡಕು ಉಂಟಾಗಿತ್ತು. ಎರಡು ವರ್ಷಗಳ ಹಿಂದೆ ಶೋ ವಿರುದ್ಧ ಕೇಸ್ ಹಾಕಲಾಗಿತ್ತು. ಈ ಪ್ರಕರಣದಲ್ಲಿ ಕಪಿಲ್ ಶರ್ಮಾ ಅವರಿಗೆ ಗೆಲುವು ಸಿಕ್ಕಿದೆ. ಈ ಕೇಸ್​ನ ಕೋರ್ಟ್ ರದ್ದು ಮಾಡಿದೆ.

‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಆಕ್ಷೇಪಾರ್ಹ ವಿಚಾರ ಹಾಗೂ ಮಹಿಳೆಯರಿಗೆ ಅಗೌರವ ಕೊಡುವ ರೀತಿಯಲ್ಲಿ ಇದೆ ಎಂದು ವ್ಯಕ್ತಿಯೋರ್ವ ಗ್ವಾಲಿಯರ್ ಹೈಕೋರ್ಟ್​ನಲ್ಲಿ ಎರಡು ವರ್ಷಗಳ ಹಿಂದೆ ಕೇಸ್ ದಾಖಲು ಮಾಡಿದ್ದರು. ಕಪಿಲ್ ಶರ್ಮಾ ಅವರು ನಡೆಸಿಕೊಟ್ಟ ಕೋರ್ಟ್​ರೂಂನ ದೃಶ್ಯವೊಂದನ್ನು ತೋರಿಸಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದರು. ಆದರೆ, ಇದನ್ನು ಕಪಿಲ್ ಶರ್ಮಾ ಅವರು ವಿರೋಧಿಸಿದ್ದರು.

ಗ್ವಾಲಿಯರ್ ಕೋರ್ಟ್ ಈ ಪ್ರಕರಣವನ್ನು ರದ್ದು ಮಾಡಿದೆ. ‘ಕೋರ್ಟ್​ನ ಸಮಯವನ್ನು ಸ್ವಂತ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಬಾರದು’ ಎಂದು ಖಡಕ್ ಆಗಿ ಹೇಳಿದೆ. ಇದರಿಂದ ಅರ್ಜಿದಾರರಿಗೆ ಹಿನ್ನಡೆ ಆಗಿದೆ. ಕಪಿಲ್ ಶರ್ಮಾ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ’ ಶೋನಲ್ಲಿ ಭಾಗಿ ಆಗುತ್ತಿದ್ದಾರೆ. ಈ ಸೀರಿಸ್​ನ ಟ್ರೇಲರ್ ಮಾರ್ಚ್ 23ರಂದು ರಿಲೀಸ್ ಆಗಲಿದೆ. ಈ ಶೋ ನೆಟ್​ಫ್ಲಿಕ್ಸ್​ನಲ್ಲಿ ಮಾರ್ಚ್ 29ರಿಂದ ಪ್ರಸಾರ ಆಗಲಿದೆ. ಈ ಶೋನಲ್ಲಿ ವಿಕ್ಕಿ ಗ್ರೋವರ್ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸುನಿಲ್ ಗ್ರೋವರ್​ಗೆ ಬೂಟ್​ನಲ್ಲಿ ಹೊಡೆದಿದ್ದ ಕಪಿಲ್ ಶರ್ಮಾ

ಕಪಿಲ್ ಶರ್ಮಾ ಅವರು ಕಿರುತೆರೆ ಜೊತೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಅವರು ಕರೀನಾ ಕಪೂರ್, ಟಬು ಹಾಗೂ ಕೃತಿ ಸನೋನ್ ನಟನೆಯ ‘ಕ್ರ್ಯೂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹಿಂದಿ ನಿರ್ದೇಶಕ ರಾಜೇಶ್ ಕೃಷ್ಣನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾರ್ಚ್ 29ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:45 pm, Sat, 23 March 24