ಖ್ಯಾತ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರಿಗೆ ಅನಾರೋಗ್ಯ ಉಂಟಾಗಿದ್ದರಿಂದ ಅವರ ಅಭಿಮಾನಿಗಳಿಗೆ ಆತಂಕ ಆಗಿತ್ತು. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಪ್ರಚಾರದಲ್ಲಿ ಭಾಗಿ ಆಗಿದ್ದ ಅವರು ಏಕಾಏಕಿ ಆಸ್ಪತ್ರೆ ಸೇರುವಂತೆ ಆಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿತ್ತು. ಅವರ ಹೆಲ್ತ್ ಅಪ್ಡೇಟ್ (Sudipto Sen Health Update) ತಿಳಿಯಲು ಫ್ಯಾನ್ಸ್ ಕಾದಿದ್ದರು. ಈಗ ಸ್ವತಃ ಸುದೀಪ್ತೋ ಸೇನ್ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಫೆಕ್ಷನ್ ಮತ್ತು ಡಿಹೈಡ್ರೇಷನ್ ಕಾರಣದಿಂದ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಸದ್ಯ ಅವರ ಚೇತರಿಸಿಕೊಳ್ಳುತ್ತಿದ್ದಾರೆ. ಇಂದು (ಮೇ 27) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
‘ನಾನು ಕೊಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈಗ ಆರೋಗ್ಯ ಸುಧಾರಿಸಿದೆ. ಇಂದೇ ನನ್ನನ್ನು ಡಿಸ್ಚಾರ್ಜ್ ಮಾಡುವಂತೆ ವೈದ್ಯರ ಬಳಿ ಕೇಳಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದೆ. ಆದರೆ ಈ ಕಲೆಕ್ಷನ್ನಿಂದ ನಿರ್ದೇಶಕ ಸುದೀಪ್ತೋ ಸೇನ್ ಅವರಿಗೆ ಸಮಾಧಾನ ಆಗಿಲ್ಲ. ಅವರ ಉದ್ದೇಶ ಬೇರೆಯೇ ಇದೆ. ‘ನಮ್ಮ ಸಿನಿಮಾವನ್ನು ಇನ್ನಷ್ಟು ಜನರು ನೋಡಬೇಕು. ವಿಶ್ವಾದ್ಯಂತ ಇರುವ ಭಾರತದ ಜನರಲ್ಲಿ ಶೇಕಡ 10ರಷ್ಟು ಜನರಿಗಾದರೂ ನಮ್ಮ ಚಿತ್ರದ ಸಂದೇಶ ತಲುಪಬೇಕು. ಆಗಲೇ ಇದನ್ನು ಸಕ್ಸಸ್ ಅಂತ ನಾವು ಕರೆಬಹುದು’ ಎಂದು ಸುದೀಪ್ತೋ ಸೇನ್ ಹೇಳಿದ್ದಾರೆ.
ಇದನ್ನೂ ಓದಿ: The Kerala Story: 3ನೇ ವೀಕೆಂಡ್ನಲ್ಲಿ ಮತ್ತೆ ಹೆಚ್ಚಾಯಿತು ‘ದಿ ಕೇರಳ ಸ್ಟೋರಿ’ ಕಮಾಯಿ; ಟೋಟಲ್ ಕಲೆಕ್ಷನ್ ಎಷ್ಟು?
ಕೆಲವೇ ದಿನಗಳ ಹಿಂದೆ ಸುದೀಪ್ತೋ ಸೇನ್ ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೆ ಈಡಾಗಿತ್ತು. ಆದರೂ ಅವರಿಗೆ ಹೆಚ್ಚೇನೂ ಪೆಟ್ಟಾಗಿರಲಿಲ್ಲ ಎಂಬುದು ಸಮಾಧಾನಕರ ಸಂಗತಿ. ಅದರ ಬೆನ್ನಲ್ಲೇ ಅವರಿಗೆ ಅನಾರೋಗ್ಯ ಉಂಟಾಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅನೇಕ ಕಡೆಗಳಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದರ ಕಲೆಕ್ಷನ್ ಇಳಿಮುಖ ಆಗಿದ್ದರೂ ಕೂಡ ಇನ್ನೂ ಅನೇಕ ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಯಲಿದೆ. ಹಾಗಾಗಿ ಸುದೀಪ್ತೋ ಸೇನ್ ಮತ್ತು ತಂಡದವರು ಬೇರೆ ಬೇರೆ ನಗರಗಳಿಗೆ ತೆರಳಿ ಪ್ರಚಾರ ಮುಂದುವರಿಸುವ ಪ್ಲ್ಯಾನ್ನಲ್ಲಿದ್ದಾರೆ. ನಿರ್ದೇಶಕರು ಅನಾರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ಕಾಯಲಾಗುತ್ತಿದೆ.
ಇದನ್ನೂ ಓದಿ: ‘ಕೈ ಮುಗಿದು ಕೇಳ್ತೀನಿ, ಮಮತಾ ಬ್ಯಾನರ್ಜಿ ನಮ್ಮ ಚಿತ್ರ ನೋಡಲಿ’: ‘ದಿ ಕೇರಳ ಸ್ಟೋರಿ’ ನಿರ್ಮಾಪಕನ ಮನವಿ
ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಪಾತ್ರದ ಸುತ್ತವೇ ಇಡೀ ಸಿನಿಮಾ ಸಾಗುತ್ತದೆ. ಈ ಚಿತ್ರದಲ್ಲಿ ಅವರ ನಟನೆಗೆ ಸಖತ್ ಸ್ಕೋಪ್ ಸಿಕ್ಕಿದೆ. ಎಲ್ಲರೂ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಟಿಸಿದ ಬಳಿಕ ಅವರಿಗೆ ಒಂದಷ್ಟು ತೊಂದರೆ ಕೂಡ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಟ್ರೋಲ್ ಮಾಡಲಾಯಿತು. ಅಲ್ಲದೇ, ಸೈಬರ್ ಕಿಡಿಗೇಡಿಗಳಿಂದ ಕಿರುಕುಳ ಕೂಡ ಉಂಟಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.