Mamata Banerjee: ‘ಕೈ ಮುಗಿದು ಕೇಳ್ತೀನಿ, ಮಮತಾ ಬ್ಯಾನರ್ಜಿ ನಮ್ಮ ಚಿತ್ರ ನೋಡಲಿ’: ‘ದಿ ಕೇರಳ ಸ್ಟೋರಿ’ ನಿರ್ಮಾಪಕನ ಮನವಿ

‘ಇದು ಪ್ರಜಾಪ್ರಭುತ್ವ ಆದ್ದರಿಂದ ನಮ್ಮ ಭಿನ್ನಾಭಿಪ್ರಾಯವನ್ನು ನಾವು ಚರ್ಚಿಸಬಹುದು. ಇದು ನನ್ನ ವಿನಂತಿ’ ಎಂದು ವಿಪುಲ್​ ಅಮೃತ್​ಲಾಲ್​ ಶಾ ಹೇಳಿದ್ದಾರೆ.

Mamata Banerjee: ‘ಕೈ ಮುಗಿದು ಕೇಳ್ತೀನಿ, ಮಮತಾ ಬ್ಯಾನರ್ಜಿ ನಮ್ಮ ಚಿತ್ರ ನೋಡಲಿ’: ‘ದಿ ಕೇರಳ ಸ್ಟೋರಿ’ ನಿರ್ಮಾಪಕನ ಮನವಿ
ವಿಪುಲ್​ ಅಮೃತ್​ಲಾಲ್​ ಶಾ, ಮಮತಾ ಬ್ಯಾನರ್ಜಿ
Follow us
ಮದನ್​ ಕುಮಾರ್​
|

Updated on:May 19, 2023 | 10:54 AM

‘ದಿ ಕೇರಳ ಸ್ಟೋರಿ’ ಸಿನಿಮಾಗೆ ಪಶ್ಚಿಮ ಬಂಗಾಳದಲ್ಲಿ (West Bengal) ನಿಷೇಧ ಹೇರಲಾಗಿತ್ತು. ಆದರೆ ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್​ ತೀರ್ಪು ನೀಡಿದೆ. ಇದು ಚಿತ್ರತಂಡಕ್ಕೆ ಖುಷಿ ನೀಡಿದೆ. ಕೋರ್ಟ್​ನಿಂದ ತೀರ್ಪು ಪ್ರಕಟವಾದ ಬಳಿಕ ನಿರ್ಮಾಪಕ ವಿಪುಲ್​ ಅಮೃತ್​ಲಾಲ್​ ಶಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಎಎನ್​ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಅವರು ಈ ಸಿನಿಮಾವನ್ನು ಮಮತಾ ಬ್ಯಾನರ್ಜಿ (Mamata Banerjee) ನೋಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ಶೀಘ್ರದಲ್ಲೇ 200 ಕೋಟಿ ರೂಪಾಯಿ ಗಳಿಸಲಿದೆ. 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ 2ನೇ ಸ್ಥಾನದಲ್ಲಿದೆ.

ವಿಪುಲ್​ ಅಮೃತ್​ಲಾಲ್​ ಶಾ ಹೇಳಿದ್ದೇನು?

‘ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಮತಾ ದೀದಿ ಅವರು ನಮ್ಮ ಈ ಸಿನಿಮಾವನ್ನು ನೋಡಲಿ. ಆಕ್ಷೇಪಾರ್ಹವಾದದ್ದು ಏನಾದರೂ ಕಂಡುಬಂದಲ್ಲಿ ನಮ್ಮೊಂದಿಗೆ ಚರ್ಚಿಸಲಿ. ನಾವು ಅವರ ಎಲ್ಲಾ ಟೀಕೆಗಳನ್ನು ಕೇಳಲು ಮತ್ತು ನಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಬಯಸುತ್ತೇವೆ. ಇದು ಪ್ರಜಾಪ್ರಭುತ್ವ ಆದ್ದರಿಂದ ನಾವು ಒಪ್ಪಬಹುದು ಅಥವಾ ಒಪ್ಪದೆಯೂ ಇರಬಹುದು. ನಮ್ಮ ಭಿನ್ನಾಭಿಪ್ರಾಯವನ್ನು ನಾವು ಚರ್ಚಿಸಬಹುದು. ಇದು ನನ್ನ ವಿನಂತಿ’ ಎಂದು ವಿಪುಲ್​ ಅಮೃತ್​ಲಾಲ್​ ಶಾ ಹೇಳಿದ್ದಾರೆ.

ಇದನ್ನೂ ಓದಿ
Image
‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
Image
The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್​ನಲ್ಲಿ ಜೋರಾಗಿದೆ ಚರ್ಚೆ
Image
Adah Sharma: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಗಮನ ಸೆಳೆದ ಅದಾ ಶರ್ಮಾ ನಟನೆ; ಪ್ರೇಕ್ಷಕರಿಂದ ಸಿಕ್ತು ಮೆಚ್ಚುಗೆ
Image
The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

‘ಸೆನ್ಸಾರ್ ಮಂಡಳಿಯ ಅನುಮೋದನೆಯ ನಂತರ ಯಾವುದೇ ರಾಜ್ಯವು ಸಿನಿಮಾವನ್ನು ನಿಷೇಧಿಸಲು ಸಾಧ್ಯವಿಲ್ಲ. ಈ ನಿಷೇಧ ಕಾನೂನುಬಾಹಿರವಾಗಿತ್ತು. ಚಿತ್ರ ವೀಕ್ಷಿಸುವ ಹಕ್ಕು ಎಲ್ಲರಿಗೂ ಇದೆ. ನಿಮಗೆ ಇಷ್ಟವಾಗಬಹುದು ಅಥವಾ ಇಷ್ಟಪಡದೇ ಇರಬಹುದು. ಆದರೆ ಯಾರನ್ನೂ ಬಲವಂತವಾಗಿ ತಡೆಯಲು ಸಾಧ್ಯವಿಲ್ಲ ಅಂತ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸಾಬೀತುಪಡಿಸಿದೆ. ನಾವು ಯಾವಾಗಲೂ ಸರ್ವೋಚ್ಚ ನ್ಯಾಯಾಲಯವನ್ನು ನಂಬುತ್ತೇವೆ’ ಎಂದು ನಿರ್ದೇಶಕ ಸುದೀಪ್ತೋ ಸೇನ್​ ಹೇಳಿದ್ದಾರೆ.

The Kerala Story: 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ​ ಚಿತ್ರಗಳ ಪಟ್ಟಿಯಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ 2ನೇ ಸ್ಥಾನ

‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾಗಿ 14 ದಿನ ಕಳೆದಿದೆ. ಎರಡನೇ ವಾರ ಕೂಡ ಉತ್ತಮವಾಗಿ ಕಲೆಕ್ಷನ್​ ಆಗುತ್ತಿದೆ. ಪ್ರತಿ ದಿನ ಬಹುಕೋಟಿ ರೂಪಾಯಿ ಆದಾಯ ಹರಿದು ಬರುತ್ತಿದೆ. ಈಗ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಕೂಡ ಪ್ರದರ್ಶನ ಆರಂಭವಾದರೆ ಸಹಜವಾಗಿಯೇ ಕಲೆಕ್ಷನ್​ ಹೆಚ್ಚಾಗಲಿದೆ. ಅದಾ ಶರ್ಮಾ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:38 am, Fri, 19 May 23

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ