Updated on: May 19, 2023 | 7:33 AM
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ 2023ರ ಆರಂಭದಲ್ಲೇ ಬಿಡುಗಡೆಯಾಗಿ ಭರ್ಜರಿ ಲಾಭ ಮಾಡಿತು. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಸುವ ಮೂಲಕ ನಂಬರ್ 1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. 13 ದಿನಕ್ಕೆ ಈ ಚಿತ್ರ 164 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ 2ನೇ ಸ್ಥಾನದಲ್ಲಿದೆ. ಈ ಸಿನಿಮಾದ ಕಲೆಕ್ಷನ್ ಇನ್ನೂ ಹೆಚ್ಚಾಗುತ್ತಿದೆ.
ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರು ಜೋಡಿಯಾಗಿ ಅಭಿನಯಿಸಿದ ‘ತೂ ಜೂಟಿ ಮೈ ಮಕ್ಕಾರ್’ ಸಿನಿಮಾಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. 149 ಕೋಟಿ ರೂ. ಗಳಿಸಿದ ಈ ಚಿತ್ರ 3ನೇ ಸ್ಥಾನದಲ್ಲಿದೆ.
ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅವರು ತೆರೆಹಂಚಿಕೊಂಡ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 110 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಅಜಯ್ ದೇವಗನ್ ಅವರು ನಟಿಸಿ, ನಿರ್ದೇಶಿಸಿದ ‘ಭೋಲಾ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ಗಳಿಸಿದ್ದು 82 ಕೋಟಿ ರೂಪಾಯಿ ಮಾತ್ರ. ಆ ಮೂಲಕ ಈ ಚಿತ್ರ 5ನೇ ಸ್ಥಾನದಲ್ಲಿದೆ.