‘ದಿ ಕೇರಳ ಸ್ಟೋರಿ’ ಸಿನಿಮಾದ (The Kerala Story Movie) ಅಬ್ಬರದ ಕಲೆಕ್ಷನ್ ಮುಂದುವರಿದಿದೆ. ರಿಲೀಸ್ ಆಗಿ 20 ದಿನ ಕಳೆಯುವುದರೊಳಗೆ ಈ ಸಿನಿಮಾ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಡಿಮೆ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ನಿರ್ಮಾಪಕರಿಗೆ ಖುಷಿ ನೀಡಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು ಕಲೆಕ್ಷನ್ ಹೆಚ್ಚುತ್ತಲೇ ಇದೆ. ವಾರಾಂತ್ಯ ಮಾತ್ರವಲ್ಲದೆ ವಾರದ ದಿನಗಳಲ್ಲೂ ಸಿನಿಮಾ ಅಬ್ಬರಿಸುತ್ತಿದೆ.
ರಿಲೀಸ್ ಆದ ವೀಕೆಂಡ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡೋದು ಸಹಜ. ‘ದಿ ಕೇರಳ ಸ್ಟೋರಿ’ ಮೂರನೇ ಭಾನುವಾರವೂ ಅಬ್ಬರಿಸಿದೆ. ಮೇ 21ರಂದು ಈ ಸಿನಿಮಾ 11.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಇನ್ನೂ ಕೆಲ ದಿನಗಳ ಕಾಲ ಸಿನಿಮಾ ಅಬ್ಬರಿಸುವ ಸೂಚನೆ ಸಿಕ್ಕಿದೆ.
ಸಿನಿಮಾದ ಒಟ್ಟೂ ಗಳಿಕೆ 198.97 ಕೋಟಿ ರೂಪಾಯಿ ಆಗಿದೆ. ಇಂದಿನ ಗಳಿಕೆಯೂ ಸೇರಿದರೆ ಈ ಚಿತ್ರದ ಒಟ್ಟಾರೆ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಲಿದೆ. ಕೇವಲ 20 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರುವುದರಿಂದ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾಗೆ ಒಳ್ಳೆಯ ಲಾಭ ಆಗಿದೆ. ಇಷ್ಟೇ ಅಲ್ಲದೆ ಟಿವಿ ಹಾಗೂ ಒಟಿಟಿ ಹಕ್ಕಿನಿಂದಲೂ ನಿರ್ಮಾಪಕರಿಗೆ ಸಾಕಷ್ಟು ಹಣ ಸಿಕ್ಕಿದೆ.
DOUBLE CENTURY… #TheKeralaStory will hit ₹ 200 cr TODAY [Mon; Day 18]… The second #Hindi film to cross the coveted number in 2023, after #Pathaan [Jan 2023]… [Week 3] Fri 6.60 cr, Sat 9.15 cr, Sun 11.50 cr. Total: ₹ 198.97 cr. #India biz. Nett BOC. #Boxoffice pic.twitter.com/PIdIwl4c8J
— taran adarsh (@taran_adarsh) May 22, 2023
1ನೇ ದಿನ: 8.03 ಕೋಟಿ ರೂ.
2ನೇ ದಿನ: 11.22 ಕೋಟಿ ರೂ.
3ನೇ ದಿನ: 16.40 ಕೋಟಿ ರೂ.
4ನೇ ದಿನ: 10.07 ಕೋಟಿ ರೂ.
5ನೇ ದಿನ: 11.14 ಕೋಟಿ ರೂ.
6ನೇ ದಿನ: 12 ಕೋಟಿ ರೂ.
7ನೇ ದಿನ: 12.50 ಕೋಟಿ ರೂ.
8ನೇ ದಿನ: 12.23 ಕೋಟಿ ರೂ.
9ನೇ ದಿನ: 19.50 ಕೋಟಿ ರೂ.
10ನೇ ದಿನ: 23.75 ಕೋಟಿ ರೂ.
11ನೇ ದಿನ: 10.30 ಕೋಟಿ ರೂ.
12ನೇ ದಿನ: 9.65 ಕೋಟಿ ರೂ.
13ನೇ ದಿನ: 8.03 ಕೋಟಿ ರೂ.
14ನೇ ದಿನ: 7 ಕೋಟಿ ರೂ.
15ನೇ ದಿನ: 6.60 ಕೋಟಿ ರೂ.
16ನೇ ದಿನ: 9.15 ಕೋಟಿ ರೂ.
17ನೇ ದಿನ: 11.50 ಕೋಟಿ ರೂ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ