‘ದಿ ವ್ಯಾಕ್ಸಿನ್ ವಾರ್’ ಕಳಪೆ ಕಲೆಕ್ಷನ್; ಚಿತ್ರಮಂದಿರದ ಎದುರು ಜನರ ಪ್ರತಿಭಟನೆ: ವಿಡಿಯೋ ವೈರಲ್
‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ವಿರುದ್ಧ ಜನರು ಪ್ರತಿಭಟನೆ ಮಾಡಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ನೆಟ್ಟಿಗರು ಈ ವೈರಲ್ ವಿಡಿಯೋ ನೋಡಿ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಚಿತ್ರತಂಡದವರೇ ಇದನ್ನೆಲ್ಲ ಮಾಡಿಸಿರಬಹುದು ಎಂದು ಕೂಡ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಏನೇ ಮಾಡಿದರೂ ಸುದ್ದಿ ಆಗುತ್ತಾರೆ. ಈ ಹಿಂದೆ ಅವರು ನಿರ್ದೇಶಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸಖತ್ ಸದ್ದು ಮಾಡಿತ್ತು. ಈಗ ಅವರ ನಿರ್ದೇಶನದಲ್ಲಿ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಮೂಡಿಬಂದಿದೆ. ಈ ಚಿತ್ರ ಕೂಡ ಹಲವು ಕಾರಣಗಳಿಂದಾಗಿ ವಿವಾದ ಮಾಡಿಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಕಲೆಕ್ಷನ್ (Box Office Collection) ಆಗಿಲ್ಲ. ಕೆಲವರು ಈ ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅದರ ವಿಡಿಯೋವನ್ನು ಸ್ವತಃ ವಿವೇಕ್ ಅಗ್ನಿಹೋತ್ರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ವಿರುದ್ಧ ಜನರು ಪ್ರತಿಭಟನೆ ಮಾಡಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಜನರು ಈ ವೈರಲ್ ವಿಡಿಯೋ ನೋಡಿ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಚಿತ್ರತಂಡದವರೇ ಇದನ್ನೆಲ್ಲ ಮಾಡಿಸಿರಬಹುದು ಎಂದು ಕೂಡ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವ್ಯಂಗ್ಯವಾಡಿದ್ದಾರೆ. ‘ಬುಕ್ ಮಾಡಿದ ಟಿಕೆಟ್ ಕ್ಯಾನ್ಸಲ್ ಮಾಡಿ, ಆಮೇಲೆ ದುಡ್ಡು ವಾಪಸ್ ಕೇಳಲು ಜನರು ಪ್ರತಿಭಟನೆ ಮಾಡಿರಬಹುದು’ ಎಂದು ಕೂಡ ಕೆಲವರು ಕಾಲೆಳೆದಿದ್ದಾರೆ.
I have just received a video of protest against #TheVaccineWar. Why are people getting rattled if they are clean? pic.twitter.com/lgz51HZ70v
— Vivek Ranjan Agnihotri (@vivekagnihotri) October 2, 2023
ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕಷ್ಟಪಡುತ್ತಿದೆ. ಆರಂಭದಲ್ಲಿ ಈ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಗಲಿಲ್ಲ. ನಂತರದ ದಿನಗಳಲ್ಲೂ ಹೇಳಿಕೊಳ್ಳುವಂತಹ ಕಲೆಕ್ಷನ್ ಆಗುತ್ತಿಲ್ಲ. 5 ದಿನ ಕಳೆದರೂ ಕೂಡ ಈ ಸಿನಿಮಾ ಗಳಿಸಿರುವುದು ಕೇವಲ 7.25 ಕೋಟಿ ರೂಪಾಯಿ ಮಾತ್ರ. ಈ ಸಿನಿಮಾದ ಬಜೆಟ್ 10ರಿಂದ 12 ಕೋಟಿ ರೂಪಾಯಿ. ಹಾಕಿದ ಬಂಡವಾಳದಷ್ಟು ಮೊತ್ತವನ್ನು ಪಡೆಯಲು ಕೂಡ ಈ ಸಿನಿಮಾ ಕಷ್ಟಪಡುತ್ತಿದೆ.
ಇದನ್ನೂ ಓದಿ: ನಟಿ, ನಿರ್ಮಾಪಕಿ ಪಲ್ಲವಿ ಜೋಶಿ ಜನಪ್ರಿಯತೆ ಹೆಚ್ಚಿಸಿದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ
ಭಾರತದ ವಿಜ್ಞಾನಿಗಳು ಕೊರೊನಾ ವೈರಸ್ಗೆ ಲಸಿಕೆ ಕಂಡುಹಿಡಿದ ಘಟನೆಗಳನ್ನು ಆಧರಿಸಿ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮೂಡಿಬಂದಿದೆ. ನಾನಾ ಪಾಟೇಕರ್, ಸಪ್ತಮಿ ಗೌಡ, ಪಲ್ಲವಿ ಜೋಶಿ, ಗಿರಿಜಾ ಓಕ್, ರೈಮಾ ಸೇನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಚಂದ್ರಮುಖಿ 2’, ‘ಫುಕ್ರೆ 3’ ಮುಂತಾದ ಸಿನಿಮಾಗಳ ಕಠಿಣ ಪೈಪೋಟಿ ನಡುವೆ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಕಲೆಕ್ಷನ್ ನೀರಸವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.