The Vaccine War Twitter Review: ‘ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ ಸಿನಿಮಾ’: ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದ ಟ್ವಿಟರ್​ ವಿಮರ್ಶೆ ಇಲ್ಲಿದೆ..

|

Updated on: Sep 28, 2023 | 5:21 PM

Vivek Agnihotri: ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ 10ರಿಂದ 12 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿದೆ. ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ‘ಚಂದ್ರಮುಖಿ 2’, ‘ಫುಕ್ರೆ 3’ ಮುಂತಾದ ಸಿನಿಮಾಗಳ ಜೊತೆ ‘ದಿ ವ್ಯಾಕ್ಸಿನ್​ ವಾರ್​’ ಸ್ಪರ್ಧಿಸುತ್ತಿದೆ.

The Vaccine War Twitter Review: ‘ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ ಸಿನಿಮಾ’: ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದ ಟ್ವಿಟರ್​ ವಿಮರ್ಶೆ ಇಲ್ಲಿದೆ..
ನಾನಾ ಪಾಟೇಕರ್​
Follow us on

ಹಲವು ಕಾರಣಗಳಿಂದಾಗಿ ‘ದಿ ವ್ಯಾಕ್ಸಿನ್​ ವಾರ್​’ (The Vaccine War) ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಇಂದು (ಸೆಪ್ಟೆಂಬರ್​ 28) ಈ ಚಿತ್ರ ಬಿಡುಗಡೆ ಆಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹೈಪ್​ ಹೆಚ್ಚಲು ಅದು ಕೂಡ ಒಂದು ಕಾರಣ. ಪಲ್ಲವಿ ಜೋಶಿ, ರೈಮಾ ಸೇನ್​, ಸಪ್ತಮಿ ಗೌಡ, ನಾನಾ ಪಾಟೇಕರ್​, ಅನುಪಮ್​ ಖೇರ್​, ಗಿರಿಜಾ ಓಕ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ದಿನವೇ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟರ್​ ಮೂಲಕ ತಮ್ಮ ವಿಮರ್ಶೆ (The Vaccine War Twitter Review) ತಿಳಿಸಿದ್ದಾರೆ. ‘ಕೊವಿಡ್​ ವೈರಸ್​ಗೆ ವ್ಯಾಕ್ಸಿನ್​ ಕಂಡುಹಿಡಿದ ವಿಜ್ಞಾನಿಗಳಿಗೆ ಈ ಚಿತ್ರದ ಮೂಲಕ ಗೌರವ ಸಲ್ಲಿಸಲಾಗಿದೆ’ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ಟ್ವಿಟರ್​ ವಿಮರ್ಶೆ ಇಲ್ಲಿದೆ..

‘ದಿ ವ್ಯಾಕ್ಸಿನ್​ ವಾರ್​ ಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡಿದೆ. ತಾಂತ್ರಿಕವಾಗಿ ಉತ್ತಮವಾಗಿರುವ ಈ ಸಿನಿಮಾದಿಂದ ಭಾರತದ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಗಿದೆ. ಎಲ್ಲ ಕಲಾವಿದರ ನಟನೆ ಉತ್ಕೃಷ್ಟವಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆ ತುಂಬ ಚೆನ್ನಾಗಿದೆ. ಮನರಂಜನೆ ನೀಡುವುದರ ಜೊತೆಗೆ ಎಂಗೇಜಿಂಗ್​ ಆಗಿದೆ. ಈ ಸಿನಿಮಾ ಮಾಡಿದ್ದಕ್ಕೆ ವಿವೇಕ್​ ಅಗ್ನಿಹೋತ್ರಿ ಅವರಿಗೆ ಧನ್ಯವಾದಗಳು’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ಇದು ಸೂಪರ್​ ಸಿನಿಮಾ. ವ್ಯಾಕ್ಸಿನ್​ ತಯಾರಿಸಿದ ಬಲರಾಮ್​ ಭಾರ್ಗವ್ ಸರ್​ ಮತ್ತು ಮಹಿಳಾ ವಿಜ್ಞಾನಿಗಳಿಗೆ ಹ್ಯಾಟ್ಸಾಫ್​. ಅವರ ಶ್ರಮ ಮತ್ತು ತ್ಯಾಗದ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಲೇಬೇಕು. ವಿವೇಕ್​ ಅಗ್ನಿಹೋತ್ರಿ ಅವರ ಕೆಲಸ ಶ್ರೇಷ್ಠವಾಗಿದೆ’ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಪಲ್ಲವಿ ಜೋಶಿ, ನಾನಾ ಪಾಟೇಕರ್​, ರೈಮಾ ಸೇನ್​ ಅವರ ನಟನೆಗೆ ಜನರಿಂದ ಚಪ್ಪಾಳೆ ಸಿಗುತ್ತಿದೆ.

‘ವಿವೇಕ್​ ಅಗ್ನಿಹೋತ್ರಿ ಮತ್ತು ಅವರ ತಂಡಕ್ಕೆ ಜಯವಾಗಲಿ. ತುಂಬ ಚೆನ್ನಾಗಿ ವಿವೇಕ್​ ಅವರು ನಿರ್ದೇಶನ ಮಾಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ. ಒಳ್ಳೆಯ ಸಿನಿಮಾಗಳನ್ನು ಮಾಡುವುದನ್ನು ಮುಂದುವರಿಸಿ’ ಎಂದು ವಿವೇಕ್​ ಅಗ್ನಿಹೋತ್ರಿ ಅವರಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ‘ವಿವೇಕ್​ ಅಗ್ನಿಹೋತ್ರಿ ಅವರಿಗೆ ಹ್ಯಾಟ್ಸಾಫ್​. ಈ ಸಿನಿಮಾ ನಿಜಕ್ಕೂ ಮಾಸ್ಟರ್​ಪೀಸ್​. ಕೊವಿಡ್​ ವಾರಿಯರ್​ಗಳಿಗೆ ಈ ಸಿನಿಮಾ ಗೌರವ ಸಲ್ಲಿಸಿದೆ. ಭಾರತದ ಒಳಗಡೆಯೇ ಇರುವ ಶತ್ರುಗಳನ್ನು ಇದು ಬಯಲಿಗೆ ಎಳೆಯುತ್ತದೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ.

ಈ ಹಿಂದೆ ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದ ‘ದಿ ಕಾಶ್ಮೀರ್​ ಫೈಲ್ಸ್’ ಸಿನಿಮಾ 252 ಕೋಟಿ ರೂಪಾಯಿ ಗಳಿಸಿತ್ತು. ಈಗ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. 10ರಿಂದ 12 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ‘ಚಂದ್ರಮುಖಿ 2’, ‘ಫುಕ್ರೆ 3’ ಮುಂತಾದ ಸಿನಿಮಾಗಳ ಜೊತೆ ‘ದಿ ವ್ಯಾಕ್ಸಿನ್​ ವಾರ್​’ ಸ್ಪರ್ಧಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.