ಸಿನಿಮಾಗಳಲ್ಲಿ ನಟಿಸುವ ಮೂಲಕ ಸಲ್ಮಾನ್ ಖಾನ್ (Salman Khan) ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಂದಲೂ ಅವರಿಗೆ ಕೈತುಂಬ ಸಂಭಾವನೆ ಸಿಗುತ್ತದೆ. ಬಿಗ್ ಬಾಸ್ ನಿರೂಪಣೆ ಮೂಲಕವೂ ಸಲ್ಲು ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಾರೆ. ಶೂಟಿಂಗ್ ಇಲ್ಲದಿರುವಾಗ ಅವರು ಹೆಚ್ಚಿನ ಸಮಯವನ್ನು ಫಾರ್ಮ್ಹೌಸ್ನಲ್ಲಿ ಕಳೆಯುತ್ತಾರೆ. ಮಂಬೈನ ಹೊರವಲಯದ ಪನ್ವೇಲ್ನಲ್ಲಿ ಅವರ ಫಾರ್ಮ್ಹೌಸ್ (Salman Khan Farmhouse) ಇದೆ. ಮೊದಲ ಬಾರಿಗೆ ಲಾಕ್ಡೌನ್ ಆಗಿದ್ದಾಗ ಸಲ್ಮಾನ್ ಖಾನ್ ಅವರು ಅಲ್ಲಿಯೇ ಕಾಲ ಕಳೆದಿದ್ದರು. ಅದು ಅವರ ನೆಚ್ಚಿನ ಸ್ಥಳ. ಅತಿಥಿಗಳನ್ನು ಕರೆದು ಪಾರ್ಟಿ ಮಾಡಲು ಕೂಡ ಅದು ಅವರ ಬೆಸ್ಟ್ ಲೊಕೇಷನ್. ಹಾಗಾದ್ರೆ ಈ ಫಾರ್ಮ್ಹೌಸ್ನ ಬೆಲೆ ಎಷ್ಟು ಇರಬಹುದು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಕೊರೆಯುತ್ತಲೇ ಇದೆ. ಅದಕ್ಕೀಗ ಉತ್ತರ ಸಿಕ್ಕಿದೆ. ಒಂದು ಅಂದಾಜಿನ ಪ್ರಕಾರ ಬರೋಬ್ಬರಿ 80 ಕೋಟಿ ರೂಪಾಯಿಗೆ ಈ ಫಾರ್ಮ್ಹೌಸ್ ಬೆಲೆಬಾಳುತ್ತದೆ. ಈ ತೋಟದ ಮನೆಯಲ್ಲಿ ಏನುಂಟು ಏನಿಲ್ಲ ಎಂಬುದನ್ನು ತಿಳಿಯಲು ಈ ಸುದ್ದಿ ಪೂರ್ತಿ ಓದಿ..
ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್ಹೌಸ್ ಬರೋಬ್ಬರಿ 150 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಮೂರು ಬೃಹತ್ ಬಂಗಲೆಗಳಿವೆ. ನೂರಾರು ಅತಿಥಿಗಳ ವಾಸ್ತವ್ಯಕ್ಕೆ ಅನುಕೂಲ ಆಗುವಷ್ಟು ಸೌಲಭ್ಯ ಇದೆ. ಸ್ವಿಮಿಂಗ್ ಪೂಲ್ ಮತ್ತು ಜಿಮ್ ಕೂಡ ಈ ಫಾರ್ಮ್ಹೌಸ್ನಲ್ಲಿ ಇದೆ. ಪ್ರತಿ ಬಾರಿ ಸಲ್ಮಾನ್ ಖಾನ್ ಅವರು ಇದೇ ಫಾರ್ಮ್ ಹೌಸ್ನಲ್ಲಿ ಬರ್ತ್ಡೇ ಆಚರಿಸಿಕೊಳ್ಳುತ್ತಾರೆ.
ಇತ್ತೀಚೆಗೆ ಸಲ್ಲು ಹುಟ್ಟುಹಬ್ಬಕ್ಕೆ ಪನ್ವೇಲ್ ಫಾರ್ಮ್ಹೌಸ್ ಸಿಂಗಾರಗೊಂಡಿತ್ತು. ಆದರೆ ಬರ್ತ್ಡೇ ಸಂಭ್ರಮಕ್ಕೆ ತಯಾರಿ ನಡೆಯುತ್ತಿರುವಾಗಲೇ ಅವರಿಗೆ ಫಾರ್ಮ್ಹೌಸ್ನಲ್ಲಿ ಹಾವು ಕಚ್ಚಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು ಎಂಬ ಸುದ್ದಿ ಕೇಳಿಬಂತು. ಬಳಿಕ ಸಲ್ಮಾನ್ ಖಾನ್ ತಂದೆ ಆ ಬಗ್ಗೆ ಮಾಹಿತಿ ನೀಡಿದರು. ಅದೊಂದು ವಿಷಕಾರಿಯಲ್ಲದ ಹಾವಾಗಿತ್ತು ಎಂದು ಅವರು ಹೇಳಿದ ಬಳಿಕ ಫ್ಯಾನ್ಸ್ ನಿಟ್ಟುಸಿರು ಬಿಟ್ಟರು.
ಸದ್ಯ ಸಲ್ಮಾನ್ ಖಾನ್ ಕೈಯಲ್ಲಿ ಹತ್ತು ಹಲವು ಆಫರ್ಗಳಿವೆ. ಪ್ರಸ್ತುತ ‘ಟೈಗರ್ 3’ ಚಿತ್ರದ ಕೆಲಸಗಳತ್ತ ಅವರು ಗಮನ ಹರಿಸಿದ್ದಾರೆ. ‘ಬಜರಂಗಿ ಭಾಯಿಜಾನ್’ ಸಿನಿಮಾದ ಸೀಕ್ವೆಲ್ ಆಗಿ ‘ಪವನ ಪುತ್ರ ಭಾಯಿಜಾನ್’ ಚಿತ್ರ ಸಿದ್ಧವಾಗಲಿದೆ. ಆ ಕುರಿತು ಕೂಡ ಬರ್ತ್ಡೇ ಹಿಂದಿನ ದಿನವೇ ಸಲ್ಲು ಮಾಹಿತಿ ಹಂಚಿಕೊಂಡಿದ್ದರು. ಫಾರ್ಮ್ಹೌಸ್ ಮುಂಭಾಗ ಮಾಧ್ಯಮದವರ ಜೊತೆ ಮಾತನಾಡುವಾಗ ಅವರು ಈ ಸುದ್ದಿ ನೀಡಿದ್ದರು.
ಇದನ್ನೂ ಓದಿ:
ಸೀಕ್ರೆಟ್ ಕ್ಯಾಮೆರಾದಲ್ಲಿ ಮಹಿಳಾ ಫ್ಯಾನ್ಸ್ ಫೋಟೋ ಸೆರೆ ಹಿಡಿಯುತ್ತಿದ್ದ ಸಲ್ಮಾನ್ ಖಾನ್; ಕಾರಣ ಏನು?
ಸಲ್ಮಾನ್ ಖಾನ್ ಹೊಸ ಗರ್ಲ್ಫ್ರೆಂಡ್ ಸಮಂತಾ; ಆದ್ರೆ ಇದು ನೀವಂದುಕೊಂಡ ಸಮಂತಾ ಅಲ್ಲ