ಅಂಡರ್​ವರ್ಡ್​ ಡಾನ್ ದಾವೂದ್ ಎದುರು ಡ್ಯಾನ್ಸ್ ಮಾಡ್ತಿದ್ರಾ ಟ್ವಿಂಕಲ್ ಖನ್ನಾ?

|

Updated on: Apr 22, 2024 | 12:14 PM

1995ರಲ್ಲಿ ರಿಲೀಸ್ ಆದ ‘ಬರ್ಸಾತ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಟ್ವಿಂಕಲ್ ಖನ್ನಾ. 2001ರವರೆಗೆ ಅವರು ನಟಿಯಾಗಿ ಗುರುತಿಸಿಕೊಂಡರು. ಈ ಅವಧಿಯಲ್ಲಿ ದಾವೂದ್ ಇಬ್ರಾಹಿಂ ಜೊತೆ ಅವರು ಸಂಪರ್ಕದಲ್ಲಿ ಇದ್ದರು ಎಂದು ಹೇಳಲಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು.

ಅಂಡರ್​ವರ್ಡ್​ ಡಾನ್ ದಾವೂದ್ ಎದುರು ಡ್ಯಾನ್ಸ್ ಮಾಡ್ತಿದ್ರಾ ಟ್ವಿಂಕಲ್ ಖನ್ನಾ?
ಟ್ವಿಂಕಲ್-ದಾವೂದ್
Follow us on

ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಅವರು ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಆ ಬಳಿಕ ಅವರು ಬರಹಗಾರ್ತಿ ಆದರು. ಅವರು ಅಂಕಣಕಾರ್ತಿಯಾಗೂ ಫೇಮಸ್ ಆಗಿದ್ದಾರೆ. ಟ್ವಿಂಕಲ್ ಖನ್ನಾ ಬಗ್ಗೆ ಒಂದು ದೊಡ್ಡ ವದಂತಿ ಇತ್ತು. ಅವರು, ದಾವೂದ್ ಇಬ್ರಾಹಿಂ (Dawaood Ibrahim) ಎದುರು ಡ್ಯಾನ್ಸ್ ಮಾಡುತ್ತಿದ್ದರು ಎನ್ನಲಾಗಿತ್ತು. ಈ ವಿವಾದದ ಬಗ್ಗೆ ಅವರು ಈಗ ಮಾತನಾಡಿದ್ದಾರೆ. ಇದನ್ನು ಅವರು ಸುಳ್ಳು ಎಂದಿದ್ದಾರೆ. ಜೊತೆಗೆ ತಮ್ಮ ಡ್ಯಾನ್ಸ್ ಸ್ಕಿಲ್ ಬಗ್ಗೆ ಹೇಳಿದ್ದಾರೆ.

1995ರಲ್ಲಿ ರಿಲೀಸ್ ಆದ ‘ಬರ್ಸಾತ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಟ್ವಿಂಕಲ್ ಖನ್ನಾ. 2001ರವರೆಗೆ ಅವರು ನಟಿಯಾಗಿ ಗುರುತಿಸಿಕೊಂಡರು. ಈ ಅವಧಿಯಲ್ಲಿ ದಾವೂದ್ ಇಬ್ರಾಹಿಂ ಜೊತೆ ಅವರು ಸಂಪರ್ಕದಲ್ಲಿ ಇದ್ದರು ಎಂದು ಹೇಳಲಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆದರೆ, ಇದನ್ನು ಅವರು ಅಲ್ಲಗಳೆದಿದ್ದಾರೆ.

‘ದಾವೂದ್ ಎದುರು ನಾನು ಡ್ಯಾನ್ಸ್ ಮಾಡಿದ್ದೇನೆ ಎನ್ನುವ ಸುದ್ದಿಗಳನ್ನು ಕೆಲವು ವಾಹಿನಿಗಳಲ್ಲಿ ನೋಡಿದ್ದೇನೆ. ನನ್ನ ಮಕ್ಕಳು ನನ್ನ ನೃತ್ಯದ ಬಗ್ಗೆ ಟೀಕೆ ಮಾಡಿದ್ದಿದೆ. ದಾವೂದ್ ಅವರು ಒಳ್ಳೆಯ ನೃತ್ಯಗಾರ್ತಿಯನ್ನು ಆಯ್ಕೆ ಮಾಡುತ್ತಾರೆ ಅನ್ನೋದು ಗೊತ್ತಿರಬೇಕಿತ್ತು. ನನ್ನ  ಬಗ್ಗೆ ಹರಿದಾಡಿದ್ದು ಫೇಕ್ ನ್ಯೂಸ್’ ಎಂದಿದ್ದಾರೆ ಅವರು.

ಟ್ವಿಂಕಲ್ ಖನ್ನಾ ಅವರ ತಂದೆಯೊಬ್ಬರು ಜ್ಯೋತಿಷಿ ಒಬ್ಬರ ಬಳಿ ಭವಿಷ್ಯ ಕೇಳುತ್ತಿದ್ದರು. ಈ ವೇಳೆ ಟ್ವಿಂಕಲ್ ಖನ್ನಾ ಬರಹಗಾರ್ತಿ ಆಗುತ್ತಾರೆ ಎಂದು ಭವಿಷ್ಯ ನುಡಿಯಲಾಗಿತ್ತು. ಇದನ್ನು ಕೇಳಿ ಟ್ವಿಂಕಲ್ ಖನ್ನಾ ನಕ್ಕಿದ್ದರು. ಕೊನೆಗೂ ಈ ವಿಚಾರ ನಿಜವಾಯಿತು. ಅವರು ಈಗ ಬರಹಗಾರ್ತಿ ಆಗಿದ್ದಾರೆ.

ಇದನ್ನೂ ಓದಿ: ‘ಅಕ್ಷಯ್​ ಕುಮಾರ್ ಎಂಬ ವ್ಯಕ್ತಿ ಜೊತೆ ನಿನ್ನ ಮದುವೆ’; ಟ್ವಿಂಕಲ್ ಖನ್ನಾಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಅಕ್ಷಯ್ ಕುಮಾರ್ ಅವರು ಸದ್ಯ ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಅವರ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣೋಕೆ ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.