‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದೇನು?

The Bengal Files: ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ ತುಸು ವಿವಾದ ಹುಟ್ಟುಹಾಕಿತ್ತು. ಆಡಳಿತ ಸರ್ಕಾರದ ಬಗ್ಗೆ ಕಮ್ಯೂನಿಸ್ಟರ ಬಗ್ಗೆ, ಮುಸ್ಲೀಮರ ಬಗ್ಗೆ ದ್ವೇಷ ಮೂಡಿಸಲೆಂದೇ ನಿರ್ಮಿಸಲಾದ ಸಿನಿಮಾ ಇದೆಂಬ ಟೀಕೆಗೆ ಗುರಿ ಆಗಿತ್ತು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ.

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದೇನು?
The Bengal Files

Updated on: Sep 05, 2025 | 3:19 PM

‘ದಿ ಕಶ್ಮೀರ್ ಫೈಲ್ಸ್’, ‘ವ್ಯಾಕ್ಸಿನ್ ವಾರ್’ ಸಿನಿಮಾಗಳ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದೀಗ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ನಿರ್ದೇಶನ ಮತ್ತು ನಿರ್ಮಾಣವನ್ನೂ ಮಾಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಹೇಳಿರುವಂತೆ ಅವರ ಈ ಸಿನಿಮಾ ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸ ಹೇಳುವ ಸಿನಿಮಾ ಆಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ ತುಸು ವಿವಾದ ಹುಟ್ಟುಹಾಕಿತ್ತು. ಆಡಳಿತ ಸರ್ಕಾರದ ಬಗ್ಗೆ ಕಮ್ಯೂನಿಸ್ಟರ ಬಗ್ಗೆ, ಮುಸ್ಲೀಮರ ಬಗ್ಗೆ ದ್ವೇಷ ಮೂಡಿಸಲೆಂದೇ ನಿರ್ಮಿಸಲಾದ ಸಿನಿಮಾ ಇದೆಂಬ ಟೀಕೆಗೆ ಗುರಿ ಆಗಿತ್ತು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಲವ್ ಪ್ರೇಮ್ ಎಂಬುವರು ಟ್ವೀಟ್ ಮಾಡಿ, ‘ಇದೊಂದು ಕಣ್ಣು ತೆರೆಸುವ ಸಿನಿಮಾ. ಪಂಜಾಬ್ ಮತ್ತು ಕಾಶ್ಮೀರಗಳಲ್ಲಿ ಇಂಥಹಾ ಘಟನೆಗಳು ನಡೆದಿವೆ ಎಂದು ಕೇಳಿದ್ದೆ. ಆದರೆ ಪಶ್ಚಿಮ ಬಂಗಾಳದಲ್ಲಿಯೂ ಹೀಗೆ ನಡೆದಿದೆ ಎಂಬುದು ಗೊತ್ತಿರಲಿಲ್ಲ. ಕುಟುಂಬ ಮತ್ತು ಗೆಳೆಯರೊಟ್ಟಿಗೆ ನೋಡಲೇಬೇಕಾದ ಸಿನಿಮಾ. ಇಂಥಹಾ ಒಂದು ಕಣ್ತೆರೆಸುವ ಸಿನಿಮಾ ನೀಡಿದ್ದಕ್ಕೆ ವಿವೇಕ್ ಅಗ್ನಿಹೋತ್ರಿಗೆ ಧನ್ಯವಾದ ಎಂದಿದ್ದಾರೆ.

ರೋಹಿತ್ ಜೈಸ್ವಾಲ್ ಎಂಬುವರು ಟ್ವೀಟ್ ಮಾಡಿ, ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದಲ್ಲಿ ಸಿಮ್ರತ್ ಕೌರ್ ಅವರ ಉದ್ದನೆಯ ಸಂಭಾಷಣೆಯೇ ನನ್ನ ತಲೆಯಲ್ಲಿ ಇನ್ನೂ ತಿರುಗುತ್ತಿದೆ. ಅದ್ಭುತವಾದ ನಟನೆಯನ್ನು ಸಿಮ್ರತ್ ಕೌರ್ ನೀಡಿದ್ದಾರೆ. ಸಿಮ್ರತ್ ಒಬ್ಬ ಅದ್ಭುತವಾದ ನಟಿ. ಅವರಿಗೆ ಪ್ರಶಸ್ತಿ ಸಿಗುವುದು ಪಕ್ಕಾ ಎಂದಿದ್ದಾರೆ.

ಈಶ್ವರ್ ಎಂಬುವರು ಟ್ವೀಟ್ ಮಾಡಿ, ‘ಸಿನಿಮಾನಲ್ಲಿ ಸ್ವಾತಂತ್ರ್ಯಕ್ಕೆ ಪೂರ್ವದಲ್ಲಿ ಬಂಗಾಳ ಹೇಗಿತ್ತು ಎಂಬುದನ್ನು ಸಿಮ್ರತ್ ಕೌರ್, ನಮಿಷಾ ಚಕ್ರಬರ್ತಿಗೆ ವಿವರಿಸುವ ದೃಶ್ಯ ಅದ್ಭುತವಾಗಿದೆ. ಆದರೆ ಈಗ ಅದು ಕೇವಲ ನೆಲದ ಒಂದು ತುಂಡಾಗಿದೆ ಎಂದಿದ್ದಾರೆ.

ಅಲೋಕ್ ರಂಜನ್ ಎಂಬುವರು ಟ್ವೀಟ್ ಮಾಡಿ, ‘ಬೆಂಗಾಲ್ ಫೈಲ್ಸ್ ಸಿನಿಮಾವನ್ನು ಈಗಷ್ಟೆ ನೋಡಿದೆ. ಅದ್ಭುತವಾದ ಸಿನಿಮಾ ಇದು. ಹೃದಯವನ್ನು ತಾಕುವ ಸಿನಿಮಾ, ಭಾವನಾತ್ಮಕ ಗೊಳಿಸುವ ಸಿನಿಮಾ. ಯಾರೂ ಹೇಳದ ಕತೆಯೊಂದನ್ನು ವಿವೇಕ್ ಅಗ್ನಿಹೋತ್ರಿ ಈ ಸಿನಿಮಾ ಮೂಲಕ ಹೇಳಿದ್ದಾರೆ ಎಂದಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಳಿಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಅದ್ಭುತವಾದ ಸಿನಿಮಾ ನೀಡಿದ್ದಾರೆ. ಸಿನಿಮಾದ ಚಿತ್ರಕತೆ, ಸಂಭಾಷಣೆ ಮತ್ತು ಕಲಾವಿದರ ನಟನೆ ಅದ್ಭುತವಾಗಿದೆ. ಪ್ರತಿ ಭಾರತೀಯನೂ ನೋಡಲೇಬೇಕಾದ ಸಿನಿಮಾ ಇದಾಗಿದೆ ಎಂದು ಟ್ವೀಟ್ ಮಾಡಿರುವುದು ಸೂರ್ಯಕಾಂತ್ ಸಿಂಗ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ