ನಟನೆಯಲ್ಲಿಲ್ಲ ಗೆಲುವು, ಟಾಯ್ಲೆಟ್ ಕ್ಲೀನರ್ ಜಾಹೀರಾತು ಮಾಡಿ ಮನೆ ಖರೀದಿಸಿದ ಹೀರೋ
Harpic advertisement: ವಿಶಾಲ್ ಮಲ್ಹೋತ್ರಾ ಅವರು 30 ವರ್ಷಗಳಿಂದ ನಟನೆಯಲ್ಲಿ ಸಕ್ರಿಯರಾಗಿದ್ದರೂ, ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ಜಾಹೀರಾತು ಅವರ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿತು. ಈ ಜಾಹೀರಾತು ಅವರಿಗೆ ಹೆಚ್ಚಿನ ಜನಪ್ರಿಯತೆ ಮತ್ತು ಆರ್ಥಿಕ ಲಾಭವನ್ನು ತಂದುಕೊಟ್ಟಿತು. ಬಾಂದ್ರಾದಲ್ಲಿ ತಮ್ಮದೇ ಮನೆ ಖರೀದಿಸಲು ಇದು ಸಹಾಯ ಮಾಡಿತು. ನಟನೆ ಮತ್ತು ಜಾಹೀರಾತುಗಳ ಮೂಲಕ ಸಾಧನೆ ಸಾಧಿಸಬಹುದೆಂದು ಇದು ಸಾಬೀತುಪಡಿಸುತ್ತದೆ.

ಜಾಹೀರಾತಿನಿಂದಲೂ ಕೆಲವರು ಫೇಮಸ್ ಆದ ಉದಾಹರಣೆ ಇದೆ. ಇದಕ್ಕೆ ‘ಹಾರ್ಪಿಕ್ ಟಾಯ್ಲೆಟ್ ಕ್ಲೀನರ್’ನ ಜಾಹೀರಾತು ನಟ ವಿಶಾಲ್ ಮಲ್ಹೋತ್ರಾ ಒಳ್ಲೆಯ ಉದಾಹರಣೆ. ವಿಶಾಲ್ ಕಳೆದ 30 ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇಂದು, ಟಾಯ್ಲೆಟ್ ಕ್ಲೀನರ್‌ನ ಜಾಹೀರಾತಿನ ಕಾರಣದಿಂದಾಗಿ ಅವರು ಸ್ವಲ್ಪ ಯಶಸ್ಸನ್ನು ಕಂಡರು. ಇದರಿಂದಾಗಿ ನಟ ಬಾಂದ್ರಾದಲ್ಲಿ ತನ್ನದೇ ಆದ ಮನೆಯನ್ನು ಖರೀದಿಸಲು ಸಾಧ್ಯವಾಯಿತಂತೆ.
2003 ರಲ್ಲಿ ಬಿಡುಗಡೆಯಾದ ‘ಇಷ್ಕ್ ವಿಷ್ಕ್’ ಚಿತ್ರದಲ್ಲಿ ವಿಶಾಲ್ ನಟ ಶಾಹಿದ್ ಕಪೂರ್ ಜೊತೆ ವಿಶಾಲ್ ತೆರೆ ಹಂಚಿಕೊಂಡರು. ಈ ಚಿತ್ರದಲ್ಲಿ ಶಾಹಿದ್ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರದಿಂದಾಗಿ ವಿಶಾಲ್ ಅವರ ಜನಪ್ರಿಯತೆ ಹೆಚ್ಚಾಯಿತು. ಆದರೆ ಅವರಿಗೆ ಕೇವಲ ಪೋಷಕ ಪಾತ್ರಗಳು ಸಿಕ್ಕವು. ಇದು ನಟನಿಗೆ ಬೇಸರ ಮೂಡಿಸಿತು.
ಸಂದರ್ಶನವೊಂದರಲ್ಲಿ ಮಾತನಾಡಿದ ವಿಶಾಲ್, ‘ನಾನು ವಿಭಿನ್ನ ರೀತಿಯ ಪಾತ್ರಗಳನ್ನು ಕೇಳಿದೆ. ಆದರೆ ನಿರ್ಮಾಪಕರು ಮತ್ತು ನಿರ್ದೇಶಕರು ನನ್ನ ವಿನಂತಿಯನ್ನು ಇಷ್ಟಪಡಲಿಲ್ಲ. ಫಲಿತಾಂಶಗಳು ಸಹ ತುಂಬಾ ಕೆಟ್ಟದಾಗಿತ್ತು, ಅದಕ್ಕಾಗಿ ನಾನು ಸಿದ್ಧನಾಗಿರಲಿಲ್ಲ ಒಬ್ಬ ಪ್ರಭಾವಿ ವ್ಯಕ್ತಿ ನಿಮ್ಮನ್ನು ತಿರಸ್ಕರಿಸಿದಾಗ, ನಿಮ್ಮ ವೃತ್ತಿಜೀವನ ಕೊನೆಗೊಳ್ಳುತ್ತದೆ. ಅದಾದ ನಂತರ, ನನಗೆ ಎರಡು ವರ್ಷಗಳ ಕಾಲ ಯಾವುದೇ ಶಾಶ್ವತ ಪಾತ್ರಗಳು ಸಿಗಲಿಲ್ಲ… ಅದು ನನಗೆ ತುಂಬಾ ಭಯವನ್ನುಂಟುಮಾಡಿತು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:Viral: ಅತುಲ್ ಪತ್ನಿ ನಾಪತ್ತೆ; ಬೆಂಗಳೂರಿನಲ್ಲಿ ಗಮನ ಸೆಳೆಯುತ್ತಿದೆ ವಿಚಿತ್ರ ಜಾಹೀರಾತು
‘ಆ ಬಳಿಕ ನನ್ನನ್ನು ಒಂದು ಜಾಹೀರಾತಿಗಾಗಿ ಕೇಳಲಾಯಿತು. ಅದು ಹಾರ್ಪಿಕ್. ಅದು ಒಂದು ಟಾಯ್ಲೆಟ್ ಕ್ಲೀನರ್ ಬ್ರ್ಯಾಂಡ್ ಅಲ್ಲವೇ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಬಂದಿತು. ಇದು ನನ್ನ ಗುರುತಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ನನಗೆ ನಾನೇ ಕೇಳಿಕೊಂಡೆ? ಈ ಜಾಹೀರಾತು ಹೊಸ ಗುರುತು ನೀಡಿತು’ ಎಂದಿದ್ದಾರೆ ಅವರು.
ಹಾರ್ಪಿಕ್ನಿಂದ ನೀವು ಎಷ್ಟು ಹಣ ಸಂಪಾದಿಸಿದ್ದೀರಿ ಎಂದು ನಟನಿಗೆ ಕೇಳಲಾಯಿತು. ‘ನಾನು ತುಂಬಾ ಸಂಪಾದಿಸಿದ್ದೇನೆ. ಬಾಂದ್ರಾದಲ್ಲಿ ನನಗಾಗಿ ಒಂದು ಮನೆ ಖರೀದಿಸಿದ್ದೇನೆ. ಇಂದಿಗೂ ನನ್ನ ಬಳಿ ಕಾರು ಇಲ್ಲ. ನಾನು ಓಲಾ, ಉಬರ್‌ನಲ್ಲಿ ಪ್ರಯಾಣಿಸುತ್ತೇನೆ. ನನ್ನ ಬಳಿ ಎಲೆಕ್ಟ್ರಿಕ್ ಹೀರೋ ಸೈಕಲ್ ಇದೆ. ನನ್ನ ಹೆಂಡತಿಗೆ ಕಾರು ಇದೆ. ಆ ಕಾರನ್ನು ಮಕ್ಕಳನ್ನು ಡ್ರಾಪ್ ಮಾಡಲು ಮತ್ತು ಕರೆದುಕೊಂಡು ಹೋಗಲು ಬಳಸಲಾಗುತ್ತದೆ. ನನಗೆ ಸರಳ ಜೀವನ ನಡೆಸಲು ಇಷ್ಟ’ ಎಂದು ಅವರು ಹೇಳಿದರು.
ವಿಶಾಲ್ ಅವರ ಕೆಲಸದ ಬಗ್ಗೆ ಹೇಳುವುದಾದರೆ, ಅವರು ‘ಕಾನ್ಸ್‌ಟೇಬಲ್ ಗಿರ್ಪಡೆ’, ‘ಮೀಥಾ ಕಟ್ಟಾ ಪ್ಯಾರ್ ಹಮಾರಾ’ ಮತ್ತು ‘ಬಂದಾ ಯೇ ಬಿಂದಾಸ್ ಹೈ’ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ, ನಟ ‘ದಿ ವಿಶಾಲ್ ಅವರ್’ ಎಂಬ ತಮ್ಮದೇ ಆದ ಪಾಡ್‌ಕ್ಯಾಸ್ಟ್ ಅನ್ನು ಸಹ ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



