AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಿಗನ ಮೊದಲ ಬಾಲಿವುಡ್ ಸಿನಿಮಾಕ್ಕೆ 23 ಕಟ್

Baaghi 4 movie: ಶಾರುಖ್ ಖಾನ್, ಸಲ್ಮಾನ್ ಖಾನ್ ಅವರುಗಳು ದಕ್ಷಿಣದ ನಿರ್ದೇಶಕರ ಮೊರೆ ಹೋಗಿದ್ದಾರೆ. ಆಮಿರ್ ಖಾನ್​ಗೂ ಸಹ ಲೋಕೇಶ್ ಕನಗರಾಜ್ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಆದರೆ ಹೀಗೆ ಬಾಲಿವುಡ್​ಗೆ ಹೋದವರಲ್ಲಿ ತಮಿಳು, ತೆಲುಗಿನ ನಿರ್ದೇಶಕರೇ ಹೆಚ್ಚು. ಆದರೆ ಇದೀಗ ಕನ್ನಡದ ಸಿನಿಮಾ ನಿರ್ದೇಶಕರೊಬ್ಬರು ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಅವರ ಮೊದಲ ಸಿನಿಮಾಕ್ಕೆ ಸಿಬಿಎಫ್​ಸಿ ಬರೋಬ್ಬರಿ 23 ಕಟ್​​ಗಳನ್ನು ಸೂಚಿಸಿದೆ.

ಕನ್ನಡಿಗನ ಮೊದಲ ಬಾಲಿವುಡ್ ಸಿನಿಮಾಕ್ಕೆ 23 ಕಟ್
Baaghi
ಮಂಜುನಾಥ ಸಿ.
|

Updated on: Sep 05, 2025 | 10:44 AM

Share

ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರು ಬಾಲಿವುಡ್ ಸ್ಟಾರ್ ನಟರುಗಳಿಗೆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಇದೀಗ ಆಮಿರ್ ಖಾನ್​ಗೂ ಸಹ ಲೋಕೇಶ್ ಕನಗರಾಜ್ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಆದರೆ ಹೀಗೆ ಬಾಲಿವುಡ್​ಗೆ ಹೋದವರಲ್ಲಿ ತಮಿಳು, ತೆಲುಗಿನ ನಿರ್ದೇಶಕರೇ ಹೆಚ್ಚು. ಆದರೆ ಇದೀಗ ಕನ್ನಡದ ಸಿನಿಮಾ ನಿರ್ದೇಶಕರೊಬ್ಬರು ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಅವರ ಮೊದಲ ಸಿನಿಮಾಕ್ಕೆ ಸಿಬಿಎಫ್​ಸಿ ಬರೋಬ್ಬರಿ 23 ಕಟ್​​ಗಳನ್ನು ಸೂಚಿಸಿದೆ.

‘ಭಜರಂಗಿ’, ‘ಗೆಳೆಯ’, ‘ವಜ್ರಕಾಯ’, ‘ವೇದ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿರುವ ಎ ಹರ್ಷ ಇದೀಗ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಬಾಲಿವುಡ್​ನ ಸ್ಟಾರ್ ಯುವ ನಟ ಟೈಗರ್ ಶ್ರಾಫ್ ನಟನೆಯ ‘ಭಾಗಿ 4’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಸಂಜಯ್ ದತ್ ವಿಲನ್. ಸೋನಮ್ ಭಾಜ್ವಾ, ಹರ್ನಾಜ್ ಸಂಧು ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಇಂದು (ಸೆಪ್ಟೆಂಬರ್ 5) ಬಿಡುಗಡೆ ಆಗಿದ್ದು ಮೊದಲ ಶೋಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ.

ಆದರೆ ಈ ಸಿನಿಮಾಕ್ಕೆ ಸಿಬಿಎಫ್​​ಸಿ ಬರೋಬ್ಬರಿ 23 ಕಟ್​​ಗಳನ್ನು ಸೂಚಿಸಿದೆ. ಪಕ್ಕಾ ಆಕ್ಷನ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ನಾಯಕ ಪ್ರೇಮವೈಫಲ್ಯದಿಂದಾಗಿ ಕುಡಿತದ ದಾಸನಾಗಿರುತ್ತಾನೆ. ಹಾಗಾಗಿ ಸಿನಿಮಾನಲ್ಲಿ ಕುಡಿತದ ದೃಶ್ಯಗಳು, ಸಿಗರೇಟು, ಗಾಂಜಾ ಸೇದುವ ದೃಶ್ಯಗಳು ಸಹ ಹೆಚ್ಚಿಗೆ ಇವೆ. ಆಕ್ಷನ್ ಸಿನಿಮಾ ಆಗಿರುವ ಕಾರಣದಿಂದಾಗಿ ಸಹಜವಾಗಿಯೇ ಸಿನಿಮಾನಲ್ಲಿ ಹಿಂಸೆಯೂ ಸಹ ಹೆಚ್ಚಾಗಿಯೇ ಇದೆ. ಹೀಗಾಗಿ ಸಿಬಿಎಫ್​​ಸಿ 23 ದೃಶ್ಯಗಳಿಗೆ ಕತ್ತರಿ ಹಾಕಿದೆ. ಹಲವು ಸಂಭಾಷಣೆಗಳ್ನು ಮ್ಯೂಟ್ ಮಾಡಿದೆ, ಬದಲಾವಣೆ ಮಾಡಿಸಲಾಗಿದೆ. ಇದೆಲ್ಲದರ ಹೊರತಾಗಿಯೂ ಸಹ ಸಿನಿಮಾಕ್ಕೆ ಎ ಪ್ರಮಾಣ ಪತ್ರ ನೀಡಲಾಗಿದೆ.

ಇದನ್ನೂ ಓದಿ:ಸಂಕಷ್ಟದಲ್ಲಿ ಯೋಗಿ ಆದಿತ್ಯನಾಥ ಕುರಿತ ಸಿನಿಮಾ, ಸಿಬಿಎಫ್​ಸಿಗೆ ಕೋರ್ಟ್ ನೊಟೀಸ್

ದೀಪದಲ್ಲಿ ಸಿಗರೇಟು ಹೊತ್ತಿಸುವ ದೃಶ್ಯವನ್ನು ತೆಗೆದು ಹಾಕಲಾಗಿದೆ. ಜೊತೆಗೆ ಕೆಲವು ಅಶ್ಲೀಲ ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದ್ದು, ಕೆಲವನ್ನು ತೆಗೆದು ಹಾಕಲಾಗಿದೆ. ಸಾಕಷ್ಟು ಬದಲಾವಣೆಗಳ ಬಳಿಕವೂ ಸಹ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ದೊರೆತಿದ್ದು, ‘ಭಾಗಿ 4’ ಸಿನಿಮಾ ಇಂದು (ಸೆಪ್ಟೆಂಬರ್ 5) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಮೊದಲ ಶೋಕ್ಕೆ ವೀಕ್ಷಕರು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ.

‘ಭಾಗಿ’ ಸಿನಿಮಾ ಸರಣಿ ಹಲವು ವರ್ಷಗಳಿಂದಲೂ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಟೈಗರ್ ಶ್ರಾಫ್ ವರೇ ‘ಭಾಗಿ’ ಸರಣಿಯ ನಾಯಕರಾಗಿ ನಟಿಸುತ್ತಾ ಬಂದಿದ್ದಾರೆ. ಆಕ್ಷನ್ ಸಿನಿಮಾ ಆಗಿದ್ದ ‘ಭಾಗಿ’ ಅನ್ನು ಈ ಬಾರಿ ಆಕ್ಷನ್ ಜೊತೆಗೆ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿಯೂ ಬದಲಾಯಿಸಿದ್ದಾರೆ ಎ ಹರ್ಷ. ಈ ಸಿನಿಮಾದ ಯಶಸ್ಸಿನ ಮೂಲಕ ಹರ್ಷ ಬಾಲಿವುಡ್​​ನಲ್ಲಿ ಇನ್ನಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ