ಬಟ್ಟೆ ಬಗ್ಗೆ ಕಮೆಂಟ್ ಮಾಡಿದ ರಣಬೀರ್ ಕಪೂರ್​ಗೆ ತಿರುಗೇಟು ಕೊಟ್ಟ ಉರ್ಫಿ ಜಾವೇದ್

|

Updated on: Apr 11, 2023 | 6:30 AM

ಉರ್ಫಿ ಜಾವೇದ್ ಅವರು ಇಷ್ಟು ದಿನ ಈ ವಿಚಾರದಲ್ಲಿ ಸೈಲೆಂಟ್ ಆಗಿದ್ದರು. ಹೋದಲ್ಲಿ ಬಂದಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇತ್ತು. ಕೊನೆಗೂ ಈ ವಿಚಾರದಲ್ಲಿ ಅವರು ಮೌನ ಮುರಿದಿದ್ದಾರೆ.

ಬಟ್ಟೆ ಬಗ್ಗೆ ಕಮೆಂಟ್ ಮಾಡಿದ ರಣಬೀರ್ ಕಪೂರ್​ಗೆ ತಿರುಗೇಟು ಕೊಟ್ಟ ಉರ್ಫಿ ಜಾವೇದ್
ಉರ್ಫಿ-ರಣಬೀರ್
Follow us on

ಉರ್ಫಿ ಜಾವೇದ್ (Urfi Javed) ಅವರು ಹಾಕುವ ಬಟ್ಟೆ ಅನೇಕರಿಗೆ ಇಷ್ಟ ಆಗುವುದಿಲ್ಲ. ಅವರನ್ನು ಸಾಕಷ್ಟು ಮಂದಿ ಟೀಕೆ ಮಾಡುತ್ತಾರೆ. ಡ್ರೆಸ್ ವಿಚಾರಕ್ಕೆ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತದೆ. ಅನೇಕ ಸೆಲೆಬ್ರಿಟಿಗಳು ಕೂಡ ಉರ್ಫಿ ಅವರನ್ನು ಟೀಕೆ ಮಾಡಿದ್ದಾರೆ. ಈ ಪೈಕಿ ರಣಬೀರ್ ಕಪೂರ್ ಕೂಡ ಒಬ್ಬರು. ‘ಉರ್ಫಿ ಅವರದ್ದು ಕೆಟ್ಟ ಟೇಸ್ಟ್​’ ಎಂದು ರಣಬೀರ್ (Ranbir Kapoor)  ಟೀಕಿಸಿದ್ದರು. ಇದನ್ನು ಉರ್ಫಿಗೆ ಅರಗಿಸಿಕೊಳ್ಳೋಕೆ ಆಗಿಲ್ಲ. ಇಷ್ಟು ದಿನ ಈ ವಿಚಾರದಲ್ಲಿ ಸೈಲೆಂಟ್ ಆಗಿದ್ದ ಅವರು ಈಗ ಮಾತನಾಡಿದ್ದಾರೆ. ರಣಬೀರ್​ಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

ರಣಬೀರ್ ಕಪೂರ್ ಹೇಳಿದ್ದೇನು?

ರಣಬೀರ್ ಕಪೂರ್ ಅವರು ಕರೀನಾ ಕಪೂರ್ ಶೋಗೆ ಬಂದಿದ್ದರು. ಈ ವೇಳೆ ಅವರಿಗೆ ಫನ್​ಗೇಮ್ ನೀಡಲಾಯಿತು. ಕೆಲ ಸೆಲೆಬ್ರಿಟಿಗಳ ಫೋಟೋನ ತೋರಿಸಲಾಗುತ್ತದೆ. ಅಲ್ಲಿ ಸೆಲೆಬ್ರಿಟಿ ಮುಖನ ಮರೆ ಮಾಡಿರಲಾಗುತ್ತದೆ. ಅವರ ದೇಹ ಹಾಗೂ ಬಟ್ಟೆ ನೋಡಿ ಆ ಸೆಲೆಬ್ರಿಟಿ ಯಾರು ಎಂದು ಗುರುತಿಸಬೇಕು. ರಣಬೀರ್ ಕಪೂರ್ ಅವರು ಉರ್ಫಿನ ಗುರುತಿಸಿದರು. ‘ನಾನು ಉರ್ಫಿ ಜಾವೇದ್ ಅವರ ಅಭಿಮಾನಿ ಅಲ್ಲ’ ಎಂದು ರಣಬೀರ್ ಹೇಳಿದ್ದಾರೆ. ಅವರ ಬಗ್ಗೆ ಒಂದು ಮಾತಿನಲ್ಲಿ ಉತ್ತರ ನೀಡುವಂತೆ ಕೇಳಲಾಯಿತು. ಇದಕ್ಕೆ ‘ಬ್ಯಾಡ್ ಟೇಸ್ಟ್​’ ಎಂದು ಕರೆದರು ರಣಬೀರ್. ಇದೇ ಶೋನಲ್ಲಿದ್ದ ಕರೀನಾ ಅವರು ಉರ್ಫಿ ಅವರನ್ನು ಹೊಗಳಿದ್ದರು.

ಸಿಟ್ಟಾದ ಉರ್ಫಿ

ಉರ್ಫಿ ಜಾವೇದ್ ಅವರು ಇಷ್ಟು ದಿನ ಈ ವಿಚಾರದಲ್ಲಿ ಸೈಲೆಂಟ್ ಆಗಿದ್ದರು. ಹೋದಲ್ಲಿ ಬಂದಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇತ್ತು. ಕೊನೆಗೂ ಈ ವಿಚಾರದಲ್ಲಿ ಅವರು ಮೌನ ಮುರಿದಿದ್ದಾರೆ. ‘ರಣಬೀರ್ ಕಪೂರ್ ನರಕಕ್ಕೆ ಹೋಗಲಿ. ಕರೀನಾ ಅವರು ನನ್ನನ್ನು ಹೊಗಳಿದ್ದಾರೆ. ನನಗೆ ಬೇರೆ ಯಾರ ತೀರ್ಪು ಬೇಕಾಗಿಲ್ಲ ಎಂದಿದ್ದಾರೆ ಉರ್ಫಿ.

ಇದನ್ನೂ ಓದಿ:Urfi Javed: ‘ಇಂಥ ಬಟ್ಟೆ ಹಾಕಿದ್ದಕ್ಕೆ ಮುಸ್ಲಿಮರು ಮನೆ ಕೊಡ್ತಿಲ್ಲ, ನಾನು ಮುಸ್ಲಿಂ ಅಂತ ಹಿಂದೂಗಳು ಮನೆ ಕೊಡಲ್ಲ’: ಉರ್ಫಿ

ಈ ವಿಚಾರದಲ್ಲಿ ರಣಬೀರ್ ಕಪೂರ್ ಅಭಿಮಾನಿಗಳಿಗೆ ಸಿಟ್ಟು ಬಂದಿದೆ. ಅವರು ಉರ್ಫಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ರಣಬೀರ್ ಪರ ತಾವು ಇರುವುದಾಗಿ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ‘ಉರ್ಫಿ ಇದೆಲ್ಲ ಪಬ್ಲಿಸಿಟಿ ಪಡೆಯಲು ಮಾಡುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಮಲ್ಲಿಗೆ ಮಾಲೆಯಿಂದ ದೇಹ ಮುಚ್ಚಿ ಬಂದ ನಟಿ

ಉರ್ಫಿ ಹೂವನ್ನೇ ಬಟ್ಟೆ ಮಾಡಿಕೊಂಡಿದ್ದಾರೆ. ಎದೆ ಭಾಗವನ್ನು ಕೈಯಲ್ಲಿ ಮುಚ್ಚಿಟ್ಟುಕೊಂಡಿದ್ದಾರೆ. ಸೊಂಟಕ್ಕೆ ಹಾಗೂ ತಲೆಗೆ ಮಲ್ಲಿಗೆ ಹೂವಿನ ಮಾಲೆ ಸುತ್ತುಕೊಂಡಿದ್ದಾರೆ. ಅವರ ಉಡುಗೆ ನೋಡಿದ ಅನೇಕರು ಕಣ್ಣರಳಿಸಿದ್ದಾರೆ. ‘ರಂಜಾನ್ ತಿಂಗಳಲ್ಲಾದರೂ ಸರಿಯಾದ ಬಟ್ಟೆ ಹಾಕಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಇನ್ನೂ ಕೆಲವರು ಮಲ್ಲಿಗೆ ಹೂವಿನ ಅಂದ ಹಾಳುಮಾಡಬೇಡಿ’ ಎಂದು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ