Urfi Javed: ಟೊಮ್ಯಾಟೋವನ್ನೇ ಆಭರಣವಾಗಿ ಧರಿಸಿದ ಉರ್ಫಿ ಜಾವೇದ್​; ಇದೇ ಈಗ ಬಂಗಾರ

|

Updated on: Jul 19, 2023 | 10:58 AM

Tomato Price: ನಟಿ ಉರ್ಫಿ ಜಾವೇದ್​ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಸಾವಿರಾರು ಜನರು ಇದಕ್ಕೆ ಕಮೆಂಟ್​ ಮಾಡಿದ್ದಾರೆ. ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ.

Urfi Javed: ಟೊಮ್ಯಾಟೋವನ್ನೇ ಆಭರಣವಾಗಿ ಧರಿಸಿದ ಉರ್ಫಿ ಜಾವೇದ್​; ಇದೇ ಈಗ ಬಂಗಾರ
ಉರ್ಫಿ ಜಾವೇದ್​
Follow us on

ಈಗ ಎಲ್ಲ ಕಡೆಗಳಲ್ಲೂ ಟೊಮ್ಯಾಟೋ (Tomato) ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಇದರ ಬೆಲೆ ದುಬಾರಿ ಆಗಿರುವುದೇ ಈ ಚರ್ಚೆಗೆ ಕಾರಣ. 5-10 ರೂಪಾಯಿಗೆ ಕೆಜಿಗಟ್ಟಲೆ ಸಿಗುತ್ತಿದ್ದ ಟೊಮ್ಯಾಟೋ ಈಗ ಕೈಗೆಟುಕದಂತೆ ಆಗಿದೆ. ಒಂದು ಕೆಜಿಗೆ 130 ರೂಪಾಯಿ ದರ (Tomato Price) ಇದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಎಲ್ಲರೂ ಟೊಮ್ಯಾಟೋ ಕುರಿತು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈ ಟ್ರೆಂಡ್​ನಲ್ಲಿ ನಟಿ ಉರ್ಫಿ ಜಾವೇದ್​ (Urfi Javed) ಕೂಡ ಸೇರಿಕೊಂಡಿದ್ದಾರೆ. ಅವರು ಯಾವಾಗಲೂ ಡಿಫರೆಂಟ್​. ಹಾಗಾಗಿ ಟೊಮ್ಯಾಟೋ ಹಣ್ಣುಗಳನ್ನೇ ಆಭರಣದ ರೀತಿ ಧರಿಸಿದ್ದಾರೆ. ಈ ಫೋಟೋಗಳು ವೈರಲ್​ ಆಗಿವೆ.

ಬಿಗ್​ ಬಾಸ್​ ಒಟಿಟಿಯಲ್ಲಿ ಸ್ಪರ್ಧಿಸುವ ಮೂಲಕ ಉರ್ಫಿ ಜಾವೇದ್​ ಅವರು ಸಖತ್ ಜನಪ್ರಿಯತೆ ಪಡೆದರು. ಅಲ್ಲಿ ಅವರು ಹೈಲೈಟ್​ ಆಗಿದ್ದೇ ಉಡುಗೆ ತೊಡುಗೆಯ ಕಾರಣದಿಂದ. ಬಿಗ್​ ಬಾಸ್​ ಮನೆಯಿಂದ ಹೊರಬಂದ ಬಳಿಕವೂ ಅವರು ಅದೇ ಅಭ್ಯಾಸ ಮುಂದುವರಿಸಿದರು. ಚಿತ್ರ-ವಿಚಿತ್ರವಾದ ಬಟ್ಟೆಗಳನ್ನು ಧರಿಸುವ ಮೂಲಕ ಅವರು ಸುದ್ದಿ ಆಗಿದ್ದೇ ಹೆಚ್ಚು. ಈಗ ಅವರು ಟೊಮ್ಯಾಟೋ ಹಣ್ಣುಗಳನ್ನು ಆಭರಣದ ರೀತಿ ಧರಿಸಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

ಯಾವುದೇ ವಸ್ತುವಿನ ಬೆಲೆ ದುಬಾರಿ ಆದಾಗ ಅದನ್ನು ಚಿನ್ನಕ್ಕೆ ಹೋಲಿಸಿ ಮಾತನಾಡುತ್ತಾರೆ. ಈಗ ಟೊಮ್ಯಾಟೋಗೂ ಅದೇ ರೀತಿ ಆಗಿದೆ. ಹಾಗಾಗಿ, ‘ಟ್ಯೊಮ್ಯಾಟೋನೇ ಈಗಿನ ಹೊಸ ಬಂಗಾರ’ ಎಂಬ ಕ್ಯಾಪ್ಷನ್​ ಮೂಲಕ ನಟಿ ಉರ್ಫಿ ಜಾವೇದ್​ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಕ್ರಿಯೇಟಿವಿಟಿಗೆ ಅಭಿಮಾನಿಗಳು ಭೇಷ್​ ಎಂದಿದ್ದಾರೆ. ಸಾವಿರಾರು ಜನರು ಇದಕ್ಕೆ ಕಮೆಂಟ್​ ಮಾಡಿದ್ದಾರೆ. ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ. ಕೆಲವರು ಎಂದಿನಂತೆ ಟ್ರೋಲ್​ ಮಾಡಿದ್ದಾರೆ.

ಇದನ್ನೂ ಓದಿ: ‘ಒಟಿಟಿಯಲ್ಲಿ ಬರೀ ಸಲಿಂಗ ಕಾಮವೇ ತುಂಬಿಕೊಂಡಿದೆ’ ಎಂದ ಅಮೀಶಾ ಪಟೇಲ್​ಗೆ ಉರ್ಫಿ ಜಾವೇದ್​ ತಿರುಗೇಟು

ಕಿರುತೆರೆಯಲ್ಲಿ ಮಿಂಚಬೇಕು ಎಂಬುದು ಉರ್ಫಿ ಜಾವೇದ್​ ಅವರ ಆಸೆ ಆಗಿತ್ತು. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಅವಕಾಶಗಳು ಸಿಗಲಿಲ್ಲ. ಬಳಿಕ ಅವರು ಜನಪ್ರಿಯತೆಗಾಗಿ ಬೇರೆ ಮಾರ್ಗ ಕಂಡುಕೊಂಡರು. ಡಿಫರೆಂಟ್​ ಆದ ರೀತಿಯಲ್ಲಿ ಬಟ್ಟೆ ಧರಿಸುವುದನ್ನೇ ಅವರು ಫುಲ್​ ಟೈಮ್​ ಕಾಯಕ ಮಾಡಿಕೊಂಡರು. ತುಂಬ ಗ್ಲಾಮರಸ್​ ಆದಂತಹ ಕಾಸ್ಟ್ಯೂಮ್​ ಧರಿಸಿದ ಕಾರಣಕ್ಕೆ ಅವರು ಅನೇಕ ಬಾರಿ ಟ್ರೋಲ್​ ಆಗಿದ್ದೂ ಉಂಟು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.