Urvashi Rautela Birthday: ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಒಂದೊಳ್ಳೆಯ ಕಿವಿಮಾತು ಹೇಳಿದ ನಟಿ ಊರ್ವಶಿ ರೌಟೇಲಾ

|

Updated on: Feb 25, 2023 | 8:01 AM

ಊರ್ವಶಿಗಾಗಿ ಕ್ರಿಕೆಟರ್ ರಿಷಭ್ ಪಂತ್ ಹಲವು ಗಂಟೆ ಕಾದಿದ್ದರು ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಸ್ವತಃ ಊರ್ವಶಿ ಕೂಡ ಇದೇ ರೀತಿಯ ಹೇಳಿಕೆ ನೀಡಿದರು.

Urvashi Rautela Birthday: ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಒಂದೊಳ್ಳೆಯ ಕಿವಿಮಾತು ಹೇಳಿದ ನಟಿ ಊರ್ವಶಿ ರೌಟೇಲಾ
ಊರ್ವಶಿ
Follow us on

ನಟಿ ಊರ್ವಶಿ ರೌಟೇಲಾ (Urvashi Rautela) ಅವರಿಗೆ ಇಂದು (ಫೆಬ್ರವರಿ 25) ಬರ್ತ್​ಡೇ ಸಂಭ್ರಮ. ಹಲವು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರುವ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದಾರೆ. ಅವರು ನಡೆದುಕೊಳ್ಳುತ್ತಿರುವ ರೀತಿ ಒಂದು ವರ್ಗದ ಜನರಿಗೆ ಇಷ್ಟವಾಗುತ್ತಿಲ್ಲ. ಇದಕ್ಕೆಲ್ಲ ಊರ್ವಶಿ ತಲೆಕೆಡಿಸಿಕೊಂಡವರೇ ಅಲ್ಲ. ಬರ್ತ್​ಡೇ ದಿನ (Urvashi Birthday) ಹೊಸ ಪೋಸ್ಟ್​ ಹಾಕಿರುವ ಅವರು, ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ನಾವು ಬದುಕಿರುವುದೋ ದೊಡ್ಡ ಗಿಫ್ಟ್ ಎಂಬ ರೀತಿಯಲ್ಲಿ ಅವರ ಪೋಸ್ಟ್ ಇದೆ.

ರಿಷಭ್ ಪಂತ್​ನ ಕಾಡಿದ ಊರ್ವಶಿ

ಊರ್ವಶಿಗಾಗಿ ಕ್ರಿಕೆಟರ್ ರಿಷಭ್ ಪಂತ್ ಹಲವು ಗಂಟೆ ಕಾದಿದ್ದರು ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಸ್ವತಃ ಊರ್ವಶಿ ಕೂಡ ಇದೇ ರೀತಿಯ ಹೇಳಿಕೆ ನೀಡಿದರು. ಇದರಿಂದ ರಿಷಭ್ ಪಂತ್ ಸಿಟ್ಟಿಗೆ ಒಳಗಾದರು. ಇಬ್ಬರ ಮಧ್ಯೆ ಟ್ವಿಟರ್ ವಾರ ನಡೆಯಿತು. ನಂತರ ಈ ವಿಚಾರದಲ್ಲಿ ಪಂತ್ ಸುಮ್ಮನಾದರು. ಆದರೆ, ಊರ್ವಶಿ ಸೈಲೆಂಟ್ ಆಗಲೇ ಇಲ್ಲ. ರಿಷಭ್​ಗೆ ಅಪಘಾತ ಆದಾಗ ‘ಪ್ರಾರ್ಥನೆ’ ಎಂದು ಫೋಟೋ ಹಂಚಿಕೊಂಡರು. ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಿದ್ದಾಗ ಆಸ್ಪತ್ರೆಯ ಫೋಟೋನ ಹಂಚಿಕೊಂಡಿದ್ದರು. ಈ ಮೂಲಕ ಪ್ರಚಾರ ಪಡೆದುಕೊಳ್ಳಲು ಯತ್ನಿಸಿದ್ದರು.

ರಿಷಬ್ ಶೆಟ್ಟಿ ಜೊತೆಯೂ ಪೋಸ್

ರಿಷಬ್ ಶೆಟ್ಟಿ ಅವರನ್ನು ಊರ್ವಶಿ ಭೇಟಿ ಮಾಡಿದ್ದರು. ಇಷ್ಟಕ್ಕೆ ನಿಂತಿಲ್ಲ. ಈ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ‘ಕಾಂತಾರ 2 ಲೋಡಿಂಗ್​’ ಎಂದು ಬರೆದುಕೊಂಡಿದ್ದರು. ಇದು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದು ಕೂಡ ಪ್ರಚಾರದ ಗಿಮಿಕ್ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಇದನ್ನೂ ಓದಿ:‘ಕಾಂತಾರ 2’ ವಿಚಾರದಲ್ಲಿ ಹೊಸ ಅಪ್​ಡೇಟ್ ನೀಡಿದ ರಿಷಬ್ ಶೆಟ್ಟಿ

ಬರ್ತ್​ಡೇಗೆ ಹೊಸ ಪೋಸ್ಟ್​

ಬರ್ತ್​ಡೇ ದಿನ ಊರ್ವಶಿ ರೌಟೇಲಾ ಹೊಸ ಪೋಸ್ಟ್​ ಹಂಚಿಕೊಂಡಿದ್ದಾರೆ. ಸಾಹಸ ಕ್ರೀಡೆ ಆಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಅವರು, ‘ನನ್ನ ಹುಟ್ಟುಹಬ್ಬದ ದಿನ ಏನು ಕೋರಿಕೊಳ್ಳಲಿ? ಮತ್ತೊಂದು ಜನ್ಮದಿನ ಬರುವುದಕ್ಕಿಂತ ಉತ್ತಮ ಉಡುಗೊರೆ ಮತ್ತೊಂದಿಲ್ಲ. ಈ ದಿನ ನಾನು ಜೀವನ ಮತ್ತು ಅದರೊಂದಿಗೆ ಬರುವ ಎಲ್ಲವನ್ನೂ ಆಚರಿಸುತ್ತೇನೆ. ನನ್ನ ಕುಟುಂಬ, ಸ್ನೇಹಿತರು, ನನ್ನ ಪ್ರೀತಿಪಾತ್ರರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ಊರ್ವಶಿ ಮಾತನ್ನು ಅನೇಕರು ಬೆಂಬಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ