- Kannada News Photo gallery Cricket photos Indian actress Urvashi Rautela wishes pakistani cricketer Naseem Shah on his birthday
ಪಾಕ್ ಯುವ ಕ್ರಿಕೆಟಿಗನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಊರ್ವಶಿ; ರಿಪ್ಲೆ ಏನಿತ್ತು ಗೊತ್ತಾ?
Urvashi Rautela: ವಾಸ್ತವವಾಗಿ ಫೆ. 15 ರಂದು ಪಾಕ್ ಕ್ರಿಕೆಟಿಗ ನಸೀಮ್ ಶಾ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಈ ಪಾಕ್ ಕ್ರಿಕೆಟಿಗನ ಜನ್ಮದಿನಕ್ಕೆ ನಟಿ ಊರ್ವಶಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಶುಭಹಾರೈಸಿದ್ದಾರೆ.
Updated on:Feb 16, 2023 | 1:26 PM

ಬಾಲಿವುಡ್ ನಟಿ ಊರ್ವಶಿ ರೌಟೇಲಾ ತನ್ನ ಸಿನಿಮಾಗಳಿಂದ ಚರ್ಚೆಯಾದಕ್ಕಿಂತ ಹೆಚ್ಚಾಗಿ ಇತರ ವಿಚಾರಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು. ಈ ಹಿಂದೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ವಿಚಾರದಲ್ಲಿ ಸಖತ್ ಸದ್ದು ಮಾಡಿದ್ದ ಊರ್ವಶಿ ಇದೀಗ ಪಾಕಿಸ್ತಾನಿ ಕ್ರಿಕೆಟಿಗನ ವಿಚಾರದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ.

ವಾಸ್ತವವಾಗಿ ಫೆ. 15 ರಂದು ಪಾಕ್ ಕ್ರಿಕೆಟಿಗ ನಸೀಮ್ ಶಾ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಈ ಪಾಕ್ ಕ್ರಿಕೆಟಿಗನ ಜನ್ಮದಿನಕ್ಕೆ ನಟಿ ಊರ್ವಶಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಶುಭಹಾರೈಸಿದ್ದಾರೆ. ನಸೀಮ್ ಫೋಟೋಗೆ ಪ್ರತಿಕ್ರಿಯಿಸಿದ ಊರ್ವಶಿ, 'ಹುಟ್ಟುಹಬ್ಬದ ಶುಭಾಶಯಗಳು ನಸೀಮ್ ಶಾ' ಎಂದು ಬರೆದಿದ್ದಾರೆ.

ಅಲ್ಲದೆ ನಸೀಮ್ ಶಾ ಡಿಎಸ್‌ಪಿ ಗೌರವ ರ್ಯಾಂಕ್ ಪಡೆದಿದ್ದಕ್ಕೂ ಊರ್ವಶಿ ಅಭಿನಂದಿಸಿದ್ದಾರೆ. ಊರ್ವಶಿ ಅವರ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ನಸೀಮ್ ಶಾ, ‘ಧನ್ಯವಾದಗಳು' ಎಂದು ಬರೆದಿದ್ದಾರೆ.

ಇದೀಗ ನಸೀಮ್ ಶಾ ಊರ್ವಶಿ ಟ್ವೀಟ್ಗೆ ಪ್ರತಿಕ್ರಿಯಿಸಿರುವುದು ಅಭಿಮಾನಿಗಳಿಗೆ ಸ್ವಲ್ಪ ಆಶ್ಚರ್ಯ ತಂದಿದೆ. ಏಕೆಂದರೆ ಕೆಲ ದಿನಗಳ ಹಿಂದೆ, ಊರ್ವಶಿ ರೌಟೇಲಾ ಬಗ್ಗೆ ನಸೀಮ್ ಶಾ ಅವರನ್ನು ಪ್ರಶ್ನಿಸಿದಾಗ, ಅವರು ಯಾರೆಂಬುದೆ ನನಗೆ ತಿಳಿದಿಲ್ಲ ಎಂದು ಉತ್ತರಿಸಿದ್ದರು. ಅಂದಿನಿಂದ, ಅಭಿಮಾನಿಗಳು ಇಬ್ಬರ ಹೆಸರನ್ನು ಆಗಾಗ್ಗೆ ಮುನ್ನೆಲೆಗೆ ತರಲು ಆರಂಭಿಸಿದ್ದರು.

ನಸೀಮ್ ಶಾಗೂ ಮೊದಲು, ಊರ್ವಶಿ ರೌಟೇಲಾ ಅವರ ಹೆಸರು ರಿಷಬ್ ಪಂತ್ ಜೊತೆ ತಳುಕು ಹಾಕಿಕೊಂಡಿತ್ತು. ಪಂತ್ ಬಗ್ಗೆ ಊರ್ವಶಿ ನೀಡಿದ ಅದೊಂದು ಹೇಳಿಕೆಯಿಂದ ಈ ಇಬ್ಬರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಶೀತಲ ಸಮರವೇ ನಡೆದು ಹೋಗಿತ್ತು.
Published On - 1:24 pm, Thu, 16 February 23




