‘ದಿ ಕಾಶ್ಮೀರ್ ಫೈಲ್ಸ್’ (The Kashmir Files Movie) ಚಿತ್ರದ ಮೂಲಕ ವಿವೇಕ್ ಅಗ್ನಿಹೋತ್ರಿ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಕಡಿಮೆ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಅಷ್ಟೇ ಅಲ್ಲ, ಸಣ್ಣ ಬಜೆಟ್ ಚಿತ್ರಗಳು ದೊಡ್ಡ ಮೊತ್ತದ ಕಲೆಕ್ಷನ್ ಮಾಡಲು ಸಾಧ್ಯವಿಲ್ಲ ಎಂಬ ಮೂಢನಂಬಿಕೆಯನ್ನು ಈ ಚಿತ್ರ ತೊಡೆದು ಹಾಕಿತ್ತು. ‘ದಿ ಕಾಶ್ಮೀರ್ ಫೈಲ್ಸ್’ ಸೂಪರ್ ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಯಾವುದು ಎನ್ನುವು ಕುತೂಹಲ ಮೂಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ‘ದಿ ವ್ಯಾಕ್ಸಿನ್ ವಾರ್’ ಹೆಸರಿನ ಚಿತ್ರವನ್ನು ವಿವೇಕ್ ನಿರ್ದೇಶನ ಮಾಡುತ್ತಿದ್ದಾರೆ.
ಮಾರ್ಚ್ 11ರಂದು ‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಆರಂಭದ ವಾರಗಳಲ್ಲಿ ಸಾಧಾರಣ ಗಳಿಕೆ ಮಾಡಿದ್ದ ಈ ಚಿತ್ರ ಎರಡು, ಮೂರು ಹಾಗೂ ನಾಲ್ಕನೇ ವಾರದಲ್ಲಿ ಭರಪೂರ ಕಲೆಕ್ಷನ್ ಮಾಡಿತು. 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರಕ್ಕೆ ರಾಜಕಾರಣಿಗಳಿಂದಲೂ ಮೆಚ್ಚುಗೆ ಸಿಕ್ಕಿತು.
ಈಗ ವಿವೇಕ್ ಅವರು ‘ದಿ ವ್ಯಾಕ್ಸಿನ್ ವಾರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ರಿವೀಲ್ ಮಾಡಲು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ವ್ಯಾಕ್ಸಿನ್ ಬಾಟಲಿ ಮೇಲೆ ಚಿತ್ರದ ಟೈಟಲ್ ಬರೆಯಲಾಗಿದೆ. ಕೊವಿಡ್ ಟೈಮ್ನಲ್ಲಿ ವ್ಯಾಕ್ಸಿನ್ಗಾಗಿ ಹಾಹಾಕಾರ ಎದ್ದಿತ್ತು. ಈ ವಿಚಾರ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
VIVEK AGNIHOTRI’S NEXT TITLED ‘THE VACCINE WAR’… WILL RELEASE IN 11 LANGUAGES… After the #Blockbuster run of #TheKashmirFiles, #VivekRanjanAgnihotri‘s next film is titled #TheVaccineWar… Will release on 15 Aug 2023 [#IndependenceDay] in 11 languages. @vivekagnihotri pic.twitter.com/4OUkJRbEcq
— taran adarsh (@taran_adarsh) November 10, 2022
ಈ ಚಿತ್ರದ ರಿಲೀಸ್ ಡೇಟ್ ಕೂಡ ಘೋಷಣೆ ಮಾಡಲಾಗಿದೆ. ಸ್ವಾತಂತ್ರ್ಯ ದಿನದ ಪ್ರಯುಕ್ತ ಈ ಚಿತ್ರ 2023ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ವಿಶೇಷ ಎಂದರೆ ಈ ಚಿತ್ರ 11 ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಂ, ಮರಾಠಿ ಮೊದಲಾದ ಭಾಷೆಗಳಲ್ಲಿ ಚಿತ್ರ ಸಿದ್ಧಗೊಳ್ಳುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ಮಾಣ ಮಾಡಿದ್ದ ಪಲ್ಲವಿ ಜೋಶಿ ಹಾಗೂ ಅಭಿಷೇಕ್ ಅಗರ್ವಾಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಅನ್ನೋದು ಇನ್ನಷ್ಟೇ ರಿವೀಲ್ ಆಗಬೇಕಿದೆ.