ಜನಪ್ರಿಯ ವೆಬ್ ಸರಣಿಗಳನ್ನು ಸಿನಿಮಾ ಮಾಡುವ ಪದ್ಧತಿ ಹಾಲಿವುಡ್ನಲ್ಲಿದೆ. ಆದರೆ ಭಾರತದಲ್ಲಿ ಈ ಅಭ್ಯಾಸ ತುಸು ಕಡಿಮೆ. ಈ ಹಿಂದೆ ಸೋನಿ ಲಿವ್ನಲ್ಲಿ ಬಿಡುಗಡೆ ಆಗಿದ್ದ ‘ಸ್ಕ್ಯಾಮ್ 1992’ ವೆಬ್ ಸರಣಿ ದೊಡ್ಡ ಹಿಟ್ ಆಗಿತ್ತು. ಬಳಿಕ ಅದೇ ವಿಷಯ ಆಧಾರವಾಗಿಟ್ಟುಕೊಂಡು ‘ಬಿಗ್ ಬುಲ್’ ಹೆಸರಿನ ಸಿನಿಮಾ ಬಿಡುಗಡೆ ಆಯ್ತು. ಆದರೆ ವೆಬ್ ಸರಣಿ ಹಿಟ್ ಆದಷ್ಟು ಸಿನಿಮಾ ಹಿಟ್ ಆಗಲಿಲ್ಲ. ಅಲ್ಲದೆ ಅದು ನಿಜ ವ್ಯಕ್ತಿಯ ಜೀವನ ಆಧರಿಸಿದ ಸಿನಿಮಾ. ವೆಬ್ ಸರಣಿಯನ್ನು ಆಧಾರವಾಗಿಟ್ಟುಕೊಂಡು ಮಾಡಿದ್ದ ಸಿನಿಮಾ ಅಲ್ಲ. ಆದರೆ ಈಗ ಜನಪ್ರಿಯ ವೆಬ್ ಸರಣಿಯನ್ನು ಸಿನಿಮಾ ಮಾಡಲಾಗುತ್ತಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಹೃತಿಕ್ ರೋಷನ್ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
‘ಮಿರ್ಜಾಪುರ್’ ವೆಬ್ ಸರಣಿ ಮೊದಲ ಬಾರಿಗೆ 2018 ರಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ಆದ ಮೊದಲ ಸೀಸನ್ ಉತ್ತಮ ಪ್ರತಿಕ್ರಿಯೆ ಗಳಿಸಿತು. ಕೋವಿಡ್ ಸಮಯದಲ್ಲಂತೂ ಈ ವೆಬ್ ಸರಣಿ ದೊಡ್ಡ ಹಿಟ್ ಎನಿಸಿಕೊಂಡಿತು. ಅದಾದ ಬಳಿಕ 2020ರಲ್ಲಿ ಇದರ ಎರಡನೇ ಸೀಸನ್ ಬಿಡುಗಡೆ ಆಯ್ತು. ಅದೂ ಸಹ ಮೊದಲ ಸರಣಿಯಂತೆಯೇ ದೊಡ್ಡ ಹಿಟ್ ಆಯ್ತು. ಈ ಸರಣಿಯ ಮೂರನೇ ಭಾಗ ಇದೇ ವರ್ಷ ಜೂನ್ 5 ರಂದು ಬಿಡುಗಡೆ ಆಗಿದೆ. ಇದೀಗ ಈ ಯಶಸ್ವಿ ವೆಬ್ ಸರಣಿಯ ಸಿನಿಮಾ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ:Pankaj Tripathi: ಆ ಒಂದು ಘಟನೆ ನಡೆದಿದ್ದರೆ ಪಂಕಜ್ ತ್ರಿಪಾಠಿ ರೈತನಾಗಿರುತ್ತಿದ್ದರು
‘ಮಿರ್ಜಾಪುರ್’ ಸಿನಿಮಾ ಆಗುತ್ತಿರುವ ಬಗ್ಗೆ ಮಾತನಾಡಿರುವ ನಿರ್ದೇಶಕ ಗುರುಮೀತ್ ಸಿಂಗ್, ‘ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಸಿನಿಮಾ ಮಾಡುವ ವಿಚಾರ ಇನ್ನೂ ಚರ್ಚೆಯಲ್ಲಿದೆ. ಕೊನೆಯದಾಗಿ ವೆಬ್ ಸರಣಿ ಹಕ್ಕು ಹೊಂದಿರುವ ನಿರ್ಮಾಪಕರು ಮತ್ತು ಸ್ಟುಡಿಯೋ ನಿರ್ಧಾರ ಮಾಡಲಿದೆ’ ಎಂದಿದ್ದಾರೆ. ಪಾತ್ರಗಳ ಬದಲಾವಣೆ ಬಗ್ಗೆ ಮಾತನಾಡಿರುವ ಅವರು, ಅಧಿಕೃತ ಮಾಹಿತಿ ಬಿಟ್ಟುಕೊಡಲು ಹಿಂಜರಿದಿದ್ದಾರೆ.
ಆದರೆ ಕೆಲ ಬಾಲಿವುಡ್ ಮ್ಯಾಗಜೀನ್ಗಳ ವರದಿಯಂತೆ ‘ಮಿರ್ಜಾಪುರ್’ ವೆಬ್ ಸರಣಿಯ ಪ್ರಮುಖ ಪಾತ್ರವಾಗಿರುವ ಕಾಲೀನ್ ಭಯ್ಯಾ ಪಾತ್ರದಲ್ಲಿ ಹೃತಿಕ್ ರೋಷನ್ ನಟಿಸಲಿದ್ದಾರಂತೆ. ವೆಬ್ ಸರಣಿಯಲ್ಲಿ ಈ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಈ ಪಾತ್ರದಿಂದ ಪಂಕಜ್ಗೆ ದೊಡ್ಡ ಮಟ್ಟದ ಜನಪ್ರಿಯತೆ ದೊರಕಿತು. ಈ ವೆಬ್ ಸರಣಿಯ ಬಳಿಕ ಪಂಕಜ್ ಅವರಿಗೆ ಅವಕಾಶಗಳು ಸಹ ಹೆಚ್ಚಾದವು. ‘ಕಾಲೀನ್ ಭಯ್ಯ’ ಪಾತ್ರದಲ್ಲಿ ಪಂಕಜ್ ಫಿಟ್ ಆಗಿದ್ದು, ಈಗ ಈ ಪಾತ್ರದಲ್ಲಿ ಹೃತಿಕ್ ಅವರನ್ನು ಕಲ್ಪಿಸಿಕೊಳ್ಳಲು ಪ್ರೇಕ್ಷಕರಿಗೆ ಕಷ್ಟವಾಗಲಿದೆ. ಇದೇ ಕಾರಣಕ್ಕೆ ಈಗಾಗಲೇ ನೆಟ್ಟಿಗರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ