Pankaj Tripathi: ಆ ಒಂದು ಘಟನೆ ನಡೆದಿದ್ದರೆ ಪಂಕಜ್ ತ್ರಿಪಾಠಿ ರೈತನಾಗಿರುತ್ತಿದ್ದರು
ಪಂಕಜ್ ಅವರ ತಂದೆ ರೈತ ವೃತ್ತಿಯವರು. ಈ ಬಗ್ಗೆ ಅವರು ಮಾತನಾಡಿದ್ದರು. ನಟ ಆಗದೇ ಇದ್ದಿದ್ದರೆ ಏನಾಗುತ್ತಿದ್ದಿರಿ ಎಂದು ಅವರಿಗೆ ಕೇಳಲಾಯಿತು. ಆಗ ಅವರು ರೈತ ಎಂದು ಉತ್ತರಿಸಿದ್ದರು. ಈ ಮೊದಲು ಪಂಕಜ್ ತ್ರಿಪಾಠಿ ಈ ಬಗ್ಗೆ ಮಾತನಾಡಿದ್ದರು. ಆ ಒಂದು ಘಟನೆ ನಡೆದಿದ್ದರೆ ಅವರು ರೈತನಾಗಿ ಇರುತ್ತಿದ್ದರು.
ಪಂಕಜ್ ತ್ರಿಪಾಠಿ ಅವರು ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಮಾಡುವ ಪಾತ್ರಗಳು ಎಲ್ಲರಿಗೂ ಇಷ್ಟ ಆಗುತ್ತವೆ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಅವರು ಅನೇಕ ಸೂಪರ್ ಹಿಟ್ ಸಿನಿಮಾ ಹಾಗೂ ವೆಬ್ ಸೀರಿಸ್ಗಳನ್ನು ನೀಡಿರುವುದು ಗೊತ್ತೇ ಇದೆ. ಇತ್ತೀಚೆಗೆ ರಿಲೀಸ್ ಆದ ‘ಸ್ತ್ರೀ 2’ ಚಿತ್ರದಲ್ಲಿ ಅವರು ಕೂಡ ನಟಿಸಿದ್ದರು. ಅವರ ಪಾತ್ರಕ್ಕೆ ತೂಕ ಇದ್ದು, ಸಿನಿಮಾ ಹಿಟ್ ಆಗಿದೆ. ಪಂಕಜ್ ಅವರು ಈ ಹಂತಕ್ಕೆ ಬರಲು ಸಾಕಷ್ಟು ಶ್ರಮ ಹಾಕಿದ್ದಾರೆ. ಆ ಒಂದು ಘಟನೆ ನಡೆದಿದ್ದರೆ ಅವರು ರೈತನಾಗಿ ಇರುತ್ತಿದ್ದರು.
‘ನಾನು ಸಣ್ಣವನಿದ್ದಾಗ ಟ್ರ್ಯಾಕ್ಟರ್ ಹೊಂದಬೇಕು ಎಂಬ ಆಸೆ ಹೊಂದಿದ್ದೆ. ನನ್ನ ತಂದೆ ಬಳಿ ಒಂದೇ ಒಂದು ಟ್ರ್ಯಾಕ್ಟರ್ ಇಲ್ಲವಲ್ಲ ಎಂದು ಬೇಸರವಾಗುತ್ತಿತ್ತು. ಆದರೆ, ಈಗ ಅನಿಸುತ್ತದೆ, ಬಹುಶಃ ಟ್ರ್ಯಾಕ್ಟರ್ ಇದ್ದಿದ್ದೆ ನಾನು ರೈತನಾಗಿಯೇ ಇರುತ್ತಿದ್ದೆ. ಚೆನ್ನಾಗಿ ಓದಿ ಡಾಕ್ಟರ್ ಆದರೆ ಹಣ ಮಾಡಬಹುದು, ಅದರಿಂದ ಟ್ರ್ಯಾಕ್ಟರ್ ಖರೀದಿಸಬಹುದು ಎಂದುಕೊಂಡಿದ್ದೆ. ನಾನು ಡಾಕ್ಟರ್ ಓದಲು ಪಾಟ್ನಾ ಹೋದೆ. ಆದರೆ, ವೈದ್ಯನಾಗಿಲ್ಲ’ ಎಂದು ಅವರು ಹೇಳಿದ್ದರು.
ಪಂಕಜ್ ಅವರ ತಂದೆ ರೈತ ವೃತ್ತಿಯವರು. ಈ ಬಗ್ಗೆ ಅವರು ಮಾತನಾಡಿದ್ದರು. ನಟ ಆಗದೇ ಇದ್ದಿದ್ದರೆ ಏನಾಗುತ್ತಿದ್ದಿರಿ ಎಂದು ಅವರಿಗೆ ಕೇಳಲಾಯಿತು. ‘ರೈತ.. ನನ್ನ ತಂದೆ ರೈತ. ಅದು ನಮ್ಮ ಕುಟುಂಬದ ಕೆಲಸ. ನಟನಾಗದೇ ಇದ್ದಿದ್ದರೆ ಬಹುಶಃ ರೈತನಾಗುತ್ತಿದ್ದೆನೇನೋ. ನಾನು ಕಾಲೇಜು ದಿನಗಳಲ್ಲಿ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದೆ. ನಟನಾಗದೆ ಇದ್ದಿದ್ದರೆ ಬಹುಶಃ ರಾಜಕಾರಣಿ ಆದರೂ ಆಗುತ್ತಿದ್ದೆ’ ಎಂದು ಅವರು ಹೇಳಿದ್ದರು.
2003ರಲ್ಲಿ ರಿಲೀಸ್ ಆದ ಕನ್ನಡದ ‘ಚಿಗುರಿದ ಕನಸು’ ಚಿತ್ರದಲ್ಲಿ ಅವರು ಸಣ್ಣ ಪಾತ್ರ ಮಾಡಿದ್ದರು. ಆ ಬಳಿಕ ‘ರನ್’, ‘ಓಂಕಾರ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದರು. 2012ರಲ್ಲಿ ಆದ ‘ಗ್ಯಾಂಗ್ಸ್ ಆಫ್ ವಸೇಪುರ್’ ಚಿತ್ರದಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ‘ಫಕ್ರೆ’, ‘ಮಸಾನ್’, ‘ಬರೇಲಿ ಕಿ ಬರ್ಫಿ’, ‘ನ್ಯೂಟನ್’, ‘ಸ್ತ್ರೀ’, ‘ಮಿಮಿ’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ: ನಟ ಪಂಕಜ್ ತ್ರಿಪಾಠಿ ಬಾವ ನಿಧನ; ಸಹೋದರಿ ಸ್ಥಿತಿ ಗಂಭೀರ
‘ಮಿರ್ಜಾಪುರ್’ ಸರಣಿಯ ಮೂಲಕ ವೆಬ್ ಸೀರಿಸ್ ಲೋಕದಲ್ಲಿ ಹೆಸರು ಮಾಡಿದರು. ಇದಲ್ಲದೆ, ‘ಕ್ರಿಮಿನಲ್ ಜಸ್ಟಿಸ್’, ‘ಯುವರ್ಸ್ ಟ್ರ್ಯೂಲಿ’, ‘ಕ್ರಿಮಿನಲ್ ಜಸ್ಟೀಸ್: ಬಿಹೈಂಡ್ ಕ್ಲೋಸ್ಡ್ ಡೋರ್ಸ್’ ಸೀರಿಸ್ಗಳಲ್ಲಿ ಅವರು ನಟಿಸಿದ್ದಾರೆ. ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ದಲ್ಲಿ ಪಂಕಜ್ ತ್ರಿಪಾಠಿ ನಟನಾ ತರಬೇತಿ ಪಡೆದರು. ನಂತರ ಅವರು ನಟನೆಯಲ್ಲಿ ಪಳಗಿದರು. ಬಿಹಾರ ಮೂಲದ ಅವರು ಈಗ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.