ನೀನು ಎಷ್ಟು ಜನರ ಜೊತೆ..? ಉರ್ಫಿ ಜಾವೇದ್​ಗೆ ತಾಯಿ ಎದುರಲ್ಲಿ ಬಾಲಕನ ಅಶ್ಲೀಲ ಪ್ರಶ್ನೆ

ಉರ್ಫಿ ಜಾವೇದ್​ ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್​ ನೀಡುತ್ತಿದ್ದರು. ಆ ವೇಳೆ ಅಲ್ಲಿಯೇ ಇದ್ದ ಬಾಲಕನೊಬ್ಬ ಅಶ್ಲೀಲವಾದ ಪ್ರಶ್ನೆಯನ್ನು ಕೇಳಿದ್ದಾನೆ. ಸಾರ್ವಜನಿಕವಾಗಿ ಹಾಗೂ ಕುಟುಂಬದವರ ಎದುರಿನಲ್ಲೇ ಇಂಥ ಪ್ರಶ್ನೆ ಕೇಳಿದ್ದಕ್ಕೆ ಉರ್ಫಿ ಜಾವೇದ್​ ಅವರಿಗೆ ಶಾಕ್​ ಆಗಿದೆ. ಈ ಬಗ್ಗೆ ಅವರು ತೀವ್ರ ಬೇಸರ ತೋಡಿಕೊಂಡಿದ್ದಾರೆ.

ನೀನು ಎಷ್ಟು ಜನರ ಜೊತೆ..? ಉರ್ಫಿ ಜಾವೇದ್​ಗೆ ತಾಯಿ ಎದುರಲ್ಲಿ ಬಾಲಕನ ಅಶ್ಲೀಲ ಪ್ರಶ್ನೆ
ಉರ್ಫಿ ಜಾವೇದ್​
Follow us
ಮದನ್​ ಕುಮಾರ್​
|

Updated on: Sep 04, 2024 | 8:22 PM

ನಟಿ ಉರ್ಫಿ ಜಾವೇದ್​ ಅವರು ಬೋಲ್ಡ್​ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದಾರೆ. ಬಟ್ಟೆಗಳ ವಿಚಾರದಲ್ಲಿ ಅವರಿಗೆ ಯಾವುದೇ ಮುಲಾಜು ಇಲ್ಲ. ಆ ಕಾರಣಕ್ಕೆ ಅವರನ್ನು ಅನೇಕರು ಟ್ರೋಲ್​ ಮಾಡುತ್ತಾರೆ. ಹಾಗಂತ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ತೀರಾ ಕೀಳುಮಟ್ಟದ ಕಮೆಂಟ್​ ಮಾಡಿದರೆ ಅದನ್ನು ಉರ್ಫಿ ಜಾವೇದ್​ ಸಹಿಸುವುದಿಲ್ಲ. ಇತ್ತೀಚೆಗೆ ಅಂಥದ್ದೊಂದು ಘಟನೆ ನಡೆದಿದೆ. ಫ್ಯಾನ್ಸ್​ ಮತ್ತು ಫ್ಯಾಮಿಲಿ ಎದುರಿನಲ್ಲೇ ಉರ್ಫಿ ಜಾವೇದ್​ಗೆ ಅಶ್ಲೀಲವಾದ ಪ್ರಶ್ನೆ ಕೇಳಿದ್ದಾನೆ. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಉರ್ಫಿ ಜಾವೇದ್​ ಅವರು ಅಸಮಾಧಾನ ತೋಡಿಕೊಂಡಿದ್ದಾರೆ.

‘ನಿನ್ನೆ ನನ್ನ ಕುಟುಂಬದವರ ಎದುರಿನಲ್ಲಿ ತುಂಬ ಕಿರಿಕಿರಿ ಆಗುವಂತಹ ಘಟನೆ ನಡೆಯಿತು. ಪಾಪರಾಜಿಗಳು ನನ್ನ ಫೋಟೋ ತೆಗೆಯುತ್ತಿರುವಾಗ ಒಂದು ಹುಡುಗರ ಗುಂಪು ಪಾಸ್​ ಆಯಿತು. ಎಲ್ಲರ ಎದುರಿನಲ್ಲೂ ‘ನೀನು ಎಷ್ಟು ಜನರ ಜೊತೆ ಮಲಗಿದ್ದೀಯಾ’ ಅಂತ ಕೂಗಿ ಕೇಳಿದ. ಆ ಹುಡುಗನಿಗೆ ಅಂದಾಜು 15 ವರ್ಷ ಇರಬಹುದು. ನನ್ನ ಕುಟುಂಬ ಮತ್ತು ತಾಯಿ ಎದುರಿನಲ್ಲೇ ಅವನು ಹಾಗೆ ಕೇಳಿದ’ ಎಂದು ಉರ್ಫಿ ಜಾವೇದ್​ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಉರ್ಫಿ ಮೂರು ವರ್ಷಗಳಿಂದ ದೈಹಿಕ ಸಂಪರ್ಕ ನಡೆಸಿಲ್ಲ; ಕಾರಣ ಮಾತ್ರ ವಿಚಿತ್ರ

‘ಆ ಪ್ರಶ್ನೆ ಕೇಳಿಸಿಕೊಂಡು ನನಗೆ ಶಾಕ್​ ಆಯಿತು. ಪಾಪರಾಜಿಗಳ ಎದುರಿನಲ್ಲೇ ನಾನು ಆ ಹುಡುಗನಿಗೆ ಬಾರಿಸಬೇಕು ಎಂದುಕೊಂಡೆ. ಮಹಿಳೆಯರಿಗೆ ಮತ್ತು ಎಲ್ಲ ಜನರಿಗೆ ಗೌರವ ಕೊಡುವುದನ್ನು ನಿಮ್ಮ ಹುಡುಗರಿಗೆ ಕಲಿಸಿಕೊಡಿ. ಆ ಹುಡುಗನ ತಂದೆ-ತಾಯಿ ಬಗ್ಗೆ ನನಗೆ ಪಾಪ ಎನಿಸಿತು’ ಎಂದು ಉರ್ಫಿ ಜಾವೇದ್​ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

View this post on Instagram

A post shared by Uorfi (@urf7i)

ಉರ್ಫಿ ಜಾವೇದ್​ ಅವರ ಪರ್ಸನಲ್​ ಲೈಫ್​ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತಹ ವೆಬ್​ ಶೋ ಬಿಡುಗಡೆ ಆಗಿದೆ. ‘ಫಾಲೋ ಕಲ್​ ಲೋ ಯಾರ್​’ ಎಂಬ ಶೀರ್ಷಿಕೆಯ ಈ ಶೋ ಒಟಿಟಿಯಲ್ಲಿ (ಅಮೇಜಾನ್​ ಪ್ರೈಂ ವಿಡಿಯೋ) ಪ್ರಸಾರ ಆಗುತ್ತಿದೆ. ಇದರ ಪ್ರಚಾರ ಕಾರ್ಯದಲ್ಲಿ ಉರ್ಫಿ ಜಾವೇದ್​ ಅವರು ಬ್ಯುಸಿ ಆಗಿದ್ದಾರೆ. ಪ್ರಮೋಷನ್​ ವೇಳೆಯೇ ಅವರಿಗೆ ಬಾಲಕನಿಂದ ಅಶ್ಲೀಲ ಪ್ರಶ್ನೆ ಎದುರಾಗಿದೆ. ಉರ್ಫಿ ಪರವಾಗಿ ಅನೇಕರು ಧ್ವನಿ ಎತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ