AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉರ್ಫಿ ಮೂರು ವರ್ಷಗಳಿಂದ ದೈಹಿಕ ಸಂಪರ್ಕ ನಡೆಸಿಲ್ಲ; ಕಾರಣ ಮಾತ್ರ ವಿಚಿತ್ರ

ಉರ್ಫಿ ಜಾವೇದ್ ಅವರು ಆಗಾಗ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಈಗ ಅವರು ಕಳೆದ ಮೂರು ವರ್ಷದಿಂದ ದೈಹಿಕ ಸಂಪರ್ಕ ನಡೆಸಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. ಈ ಕಾರಣ ಅನೇಕರಿಗೆ ವಿಚಿತ್ರ ಎನಿಸಿದೆ.

ಉರ್ಫಿ ಮೂರು ವರ್ಷಗಳಿಂದ ದೈಹಿಕ ಸಂಪರ್ಕ ನಡೆಸಿಲ್ಲ; ಕಾರಣ ಮಾತ್ರ ವಿಚಿತ್ರ
ಉರ್ಫಿ
ರಾಜೇಶ್ ದುಗ್ಗುಮನೆ
|

Updated on:Aug 27, 2024 | 3:03 PM

Share

ನಟಿ ಉರ್ಫಿ ಜಾವೇದ್ ಅವರು ಯಾವಾಗಲೂ ಸುದ್ದಿಯಲ್ಲಿ ಇರಲು ಬಯಸುತ್ತಾರೆ. ಅವರು ‘ಫಾಲೋ ಕರ್ ಲೋ ಯಾರ್’ ಹೆಸರಿನ ಶೋ ಮಾಡಿದ್ದಾರೆ. ಇದರಲ್ಲಿ ಹಲವು ವಿಚಾರಗಳನ್ನು ಅವರು ರಿವೀಲ್ ಮಾಡಿದ್ದಾರೆ. ಅವರು ಖಾಸಗಿ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಅವರು ಕಳೆದ ಮೂರು ವರ್ಷಗಳಿಂದ ದೈಹಿಕ ಸಂಪರ್ಕ ಮಾಡಿಲ್ಲಂವಂತೆ. ಇದಕ್ಕೆ ಅವರು ನೀಡಿದ ಕಾರಣ ಮಾತ್ರ ವಿಚಿತ್ರವಾಗಿದೆ.

‘ನಾನು ಕಳೆದ ಮೂರು ವರ್ಷಗಳಿಂದ ಸೆ* ಮಾಡಿಲ್ಲ. ನಾನು ಈ ಮೂರು ವರ್ಷಗಳಲ್ಲಿ ಯಾರಿಗೂ ಕಿಸ್ ಕೂಡ ಮಾಡಿಲ್ಲ. ಯಾವುದೇ ಪುರುಷನ ಜೊತೆ ರೊಮ್ಯಾಂಟಿಕ್ ಆಗಿ ಮಾತನಾಡಿಲ್ಲ’ ಎಂದಿದ್ದಾರೆ ಅವರು. ಹಾಗಾದರೆ ಇದಕ್ಕೆ ಒಂದು ಕಾರಣ ಇರಬೇಕಲ್ಲ. ಇದನ್ನು ಕೂಡ ಅವರು ವಿವರಿಸಿದ್ದಾರೆ. ‘ನಾನೇಕೆ ದೈಹಿಕ ಸಂಪರ್ಕ ನಡೆಸಿಲ್ಲ ಎಂಬುದಕ್ಕೂ ಒಂದು ಕಾರಣ ಇದೆ. ನನ್ನ ಬಳಿ ಎಲ್ಲಿಯವರೆಗೆ ಪ್ರೈವೆಟ್ ಜೆಟ್ ಇರುವುದಿಲ್ಲವೋ ಅಲ್ಲಿಯವರೆಗೆ ನಾನು ಟೆಂಪ್ಟ್ ಆಗುವುದಿಲ್ಲ ಎಂದು ನಾನು ಮೂರು ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದೆ’ ಎಂದಿದ್ದಾರೆ ಅವರು.

‘ನಾನು ಸ್ವಾಭಿಮಾನಿ. ನಾನು ನನ್ನ ಜೀವನದಲ್ಲಿ ಎಲ್ಲವನ್ನು ನಾನೇ ಮಾಡಿಕೊಂಡಿದ್ದೇನೆ. ನನ್ನ ಪಾರ್ಟ್ನರ್ ಜೊತೆ ದುರ್ಬಲನಾಗಿ ಕಾಣಿಸಿಕೊಳ್ಳಲು ಇಷ್ಟಪಡಲ್ಲ’ ಎಂದಿದ್ದಾರೆ ಉರ್ಫಿ. ಈ ಮೂಲಕ ತಾವು ಎಷ್ಟು ಸ್ವಾಭಿಮಾನಿ ಎಂಬುದನ್ನು ಅವರು ತೋರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೀರೆಯ ಅವತಾರವನ್ನೇ ಬದಲಾಯಿಸಿದ ಉರ್ಫಿ ಜಾವೇದ್​; ಇನ್ನೇನು ಕಾದಿದೆಯೋ..

ಈ ಮೊದಲು ಉರ್ಫಿ ಜಾವೇದ್ ಅವರು ಪರಾಸ್ ಕಲ್ನಾವತ್ ಜೊತೆ ಸಂಬಂಧ ಹೊಂದಿದ್ದರು. 2017ರಿಂದ 2022ರವರೆಗೆ ಸುತ್ತಾಟ ನಡೆಸಿದ್ದರು. ಆ ಬಳಿಕ ಇವರದ್ದು ಬ್ರೇಕಪ್ ಆಯಿತು. ಬಿಗ್ ಬಾಸ್​ ಒಟಿಟಿಗೆ ಕಾಲಿಟ್ಟ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಅಲ್ಲಿಂದ ಅವರು ಚಿತ್ರ ವಿಚಿತ್ರ ಬಟ್ಟೆ ಹಾಕೋಕೆ ಆರಂಭಿಸಿದರು. ಅವರು ತಮ್ಮ ಖಾಸಗಿ ಭಾಗಗಳನ್ನು ತೋರಿಸಲು ಯಾವುದೇ ಮುಜುಗರ ಮಾಡಿಕೊಳ್ಳುವುದಿಲ್ಲ. ಇತ್ತೀಚೆಗೆ ಒಳ ಉಡುಪು ಹಾಕದೆ ಡ್ರೆಸ್ ಹಾಕಿ ರಸ್ತೆಗೆ ಇಳಿದಿದ್ದ ವಿಡಿಯೋ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:45 am, Tue, 27 August 24

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ