ಶಾರುಖ್ ಖಾನ್, ಅತಿ ಹೆಚ್ಚು ತೆರಿಗೆ ಪಾವತಿಸುವ ನಟ: ಟಾಪ್ ಐದು ನಟರು ಯಾರ್ಯಾರು?

ಭಾರತದಲ್ಲಿ ಉದ್ಯಮಿಗಳ ಬಳಿಕ ಅತಿ ಹೆಚ್ಚು ಶ್ರೀಮಂತರದೆಂದರೆ ಅದು ನಟರು. ಅಂದಹಾಗೆ ಶಾರುಖ್ ಖಾನ್ ಭಾರತದ ಅತ್ಯಂತ ಶ್ರೀಮಂತ ನಟ ಅಲ್ಲದೆ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟ ಸಹ ಹೌದು. ಅತಿ ಹೆಚ್ಚು ತೆರಿಗೆ ಪಾವತಿಸುವ ಟಾಪ್ ಐದು ನಟರು ಯಾರು? ಇಲ್ಲಿದೆ ಪಟ್ಟಿ.

ಶಾರುಖ್ ಖಾನ್, ಅತಿ ಹೆಚ್ಚು ತೆರಿಗೆ ಪಾವತಿಸುವ ನಟ: ಟಾಪ್ ಐದು ನಟರು ಯಾರ್ಯಾರು?
ಶಾರುಖ್ ಖಾನ್
Follow us
ಮಂಜುನಾಥ ಸಿ.
|

Updated on: Sep 05, 2024 | 5:07 PM

ಭಾರತದಲ್ಲಿ ಅತಿ ದೊಡ್ಡ ಮಾರುಕಟ್ಟೆ ಉಳ್ಳ ಕ್ಷೇತ್ರಗಳೆಂದರೆ ಒಂದು ಕ್ರೀಡೆ ಅದರಲ್ಲೂ ಕ್ರಿಕೆಟ್ ಪ್ರಮುಖವಾದುದು. ಅಸಲಿಗೆ ಕ್ರೀಡೆಗಿಂತಲೂ ದೊಡ್ಡ ಮಾರುಕಟ್ಟೆ ಸಿನಿಮಾದ್ದು. ಭಾರತೀಯ ಚಿತ್ರರಂಗದ ಒಟ್ಟು ಮಾರುಕಟ್ಟೆ ಗಾತ್ರ ಬಹಳ ದೊಡ್ಡದು, ವರ್ಷಕ್ಕೆ 20 ಸಾವಿರ ಕೋಟಿ ವ್ಯವಹಾರ ಭಾರತೀಯ ಚಿತ್ರರಂಗದಲ್ಲಾಗುತ್ತದೆ. ಹಾಗಾಗಿಯೇ ಭಾರತದಲ್ಲಿ ಉದ್ಯಮಿಗಳನ್ನು ಬಿಟ್ಟರೆ ಸಿನಿಮಾದವರೇ ಹೆಚ್ಚು ಶ್ರೀಮಂತರು. ಶ್ರೀಮಂತರು ಮಾತ್ರವೇ ಅಲ್ಲ, ತೆರಿಗೆ ಪಾವತಿಯಲ್ಲಿಯೂ ಸಹ ನಟ-ನಟಿಯರು ಮುಂದಿದ್ದಾರೆ. ಕ್ರೀಡಾಪಟುಗಳಿಗೆ ಹೋಲಿಸಿದರೆ ನಟರಿಗೆ ತುಸು ತೆರಿಗೆ ವಿನಾಯಿತಿ ಇದೆ ಎನ್ನಲಾಗುತ್ತದೆ. ಹಾಗಿದ್ದರೂ ಸಹ ನಟರು ಭಾರತದ ದೊಡ್ಡ ಹೆಸರಿನ ಕ್ರೀಡಾಪಟುಗಳಿಗಿಂತಲೂ ಬಹಳ ಹೆಚ್ಚು ತೆರಿಗೆ ಪಾವತಿಸುತ್ತಾರೆ.

ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟ ಶಾರುಖ್ ಖಾನ್. ಪ್ರತಿ ಸಿನಿಮಾಕ್ಕೆ ಭಾರಿ ದೊಡ್ಡ ಸಂಭಾವನೆ ಪಡೆಯುವುದು ಮಾತ್ರವೇ ಅಲ್ಲದೆ, ಮನೊರಂಜನಾ ಕ್ಷೇತ್ರದಲ್ಲಿಯೇ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆ ಸೇರಿದಂತೆ ವಿಎಫ್​ಎಕ್ಸ್ ಸ್ಟುಡಿಯೋ, ಟ್ಯಾಲೆಂಟ್ ಮ್ಯಾಜೇಜ್​ಮೆಂಟ್ ಸಂಸ್ಥೆ, ಆಡಿಯೋ ಸಂಸ್ಥೆ, ಹಲವು ಸಿನಿಮಾಗಳ ಡಿಜಿಟಲ್ ಹಕ್ಕುಗಳ ಖರೀದಿ ಹೀಗೆ ಹಲವು ಉದ್ಯಮವನ್ನು ಹೊಂದಿರುವ ಶಾರುಖ್ ಖಾನ್ 2023-24ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 92 ಕೋಟಿ ರೂಪಾಯಿ ತೆರಿಗೆಯನ್ನು ಭಾರತ ಸರ್ಕಾರಕ್ಕೆ ಪಾವತಿ ಮಾಡಿದ್ದಾರೆ.

ಶಾರುಖ್ ಖಾನ್ ಬಳಿಕ ಎರಡನೇ ಸ್ಥಾನದಲ್ಲಿರುವುದು ಯಾವುದೇ ಬಾಲಿವುಡ್ ನಟರಲ್ಲ ಬದಲಿಗೆ ದಕ್ಷಿಣ ಭಾರತದ ನಟ ದಳಪತಿ ವಿಜಯ್, ತಮಿಳಿನ ಈ ಸ್ಟಾರ್ ನಟ ಈ ಹಣಕಾಸು ವಾರ್ಷದಲ್ಲಿ 80 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಸಲ್ಮಾನ್ ಖಾನ್ ಈ ವರ್ಷ 72 ಕೋಟಿ ತೆರಿಗೆ ಪಾವತಿ ಮಾಡಿದ್ದಾರೆ.

ಇದನ್ನೂ ಓದಿ:‘ಚಾರ್ ಬೋಟಲ್ ವೋಡ್ಕಾ‘ ಹಾಡು ಬರೆದಾಗ ಹನಿ ಸಿಂಗ್‌ಗೆ ಎಚ್ಚರಿಕೆ ನೀಡಿದ್ದ ಶಾರುಖ್ ಖಾನ್

ನಾಲ್ಕನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್ ಇದ್ದಾರೆ. ಹಿರಿಯ ನಟ ಈ ವರ್ಷ 71 ಕೋಟಿ ತೆರಿಗೆ ಪಾವತಿ ಮಾಡಿದ್ದಾರೆ. ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರಾದರೂ ಇವರನ್ನು ನಟರ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗದು, ನಟರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಅಚ್ಚರಿಯ ರೀತಿಯಲ್ಲಿ ನಟ ಅಜಯ್ ದೇವಗನ್ ಇದ್ದಾರೆ. ದೊಡ್ಡ ಹಿಟ್ ಸಿನಿಮಾಗಳನ್ನು ಅಜಯ್ ನೀಡಿಲ್ಲವಾದರೂ ಸಾಕಷ್ಟು ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ಅಜಯ್​ ಹಣಕಾಸು ವರ್ಷದಲ್ಲಿ 42 ಕೋಟಿ ತೆರಿಗೆ ಪಾವತಿ ಮಾಡಿದ್ದಾರೆ. ಇನ್ನು ಬಾಲಿವುಡ್ ನಟ ರಣ್​ಬೀರ್ ಕಪೂರ್ 36 ಕೋಟಿ ತೆರಿಗೆ ಪಾವತಿ ಮಾಡಿದ್ದಾರೆ.

ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟರು ಎಂದು ಕರೆಸಿಕೊಳ್ಳುವ ಪ್ರಭಾಸ್, ರಜನೀಕಾಂತ್, ವರ್ಷಕ್ಕೆ ಐದಾರು ಸಿನಿಮಾಗಳಲ್ಲಿ ನಟಿಸುವ ಅಕ್ಷಯ್ ಕುಮಾರ್ ಅವರುಗಳ ಹೆಸರು ಟಾಪ್ ಹತ್ತರಲ್ಲಿ ಇಲ್ಲ. ಅಂದಹಾಗೆ ಮಲಯಾಳಂ ಸ್ಟಾರ್ ನಟ ಮೋಹನ್​ಲಾಲ್ 14 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ