ಮೃತಪಟ್ಟವರು ಮಲೈಕಾ ನಿಜವಾದ ತಂದೆ ಅಲ್ಲ: ಇಲ್ಲಿದೆ ಅಸಲಿ ಕಥೆ
Malaika Arora: ಇತ್ತೀಚೆಗೆ ನಿಧನರಾದ ಅನಿಲ್ ಕುಲ್ದೀಪ್ ಮೆಹ್ರಾ, ಮಲೈಕಾ ಅರೋರಾ ಅವರ ನಿಜವಾದ ತಂದೆಯಲ್ಲ. ಹಾಗಿದ್ದರೆ ಅವರು ಯಾರು? ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ.
ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಮೆಹ್ತಾ ತಮ್ಮ ಮನೆಯ ಆರನೇ ಮಹಡಿಯಿಂದ ಜಿಗಿದು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ. ಇದರಿಂದ ನಟಿಯ ಕುಟುಂಬದಲ್ಲಿ ದುಃಖದ ಮಡುಗಟ್ಟಿದೆ. ಸದ್ಯ ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಮಲೈಕಾ ತಂದೆಯ ಮರಣದ ನಂತರ, ನಟಿಯ ನಿಜವಾದ ತಂದೆ ಮತ್ತು ಮಲತಂದೆ ಯಾರು? ಈ ಕುರಿತು ಚರ್ಚೆ ನಡೆಯುತ್ತಿದೆ. ನಿಜ ಹೇಳಬೇಕೆಂದರೆ ಅನಿಲ್ ಮೆಹ್ತಾ ಸಾವಿನ ನಂತರ ದೊಡ್ಡ ಸತ್ಯವೊಂದು ಹೊರಬಿದ್ದಿದೆ.
ಅನಿಲ್ ಮೆಹ್ತಾ ಮಲೈಕಾ ಅವರ ನಿಜವಾದ ತಂದೆ ಅಲ್ಲವೇ?
ಅನಿಲ್ ಮೆಹ್ತಾ ನಿಧನದ ನಂತರ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಮಲೈಕಾ ಅವರ ನಿಜವಾದ ತಂದೆ ಯಾರು ಎಂದು ತಿಳಿಯಲು ಜನರು ಬಯಸುತ್ತಿದ್ದಾರೆ. ಮಲೈಕಾ ತಾಯಿ ಮತ್ತು ಅನಿಲ್ ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಇಬ್ಬರೂ ಗಂಡ-ಹೆಂಡತಿಯಂತೆ ಏಕೆ ಒಟ್ಟಿಗೆ ವಾಸಿಸುತ್ತಿದ್ದರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಮಲೈಕಾ ಅವರ ನಿಜವಾದ ತಂದೆ ಅನಿಲ್ ಮೆಹ್ತಾ ಎಂದು ಹಲವರು ನಂಬಿದ್ದರು. ಆದರೆ ಹಾಗೆ ಏನೂ ಇಲ್ಲ.
ಇದನ್ನೂ ಓದಿ:ಮಲೈಕಾ ಅರೋರಾ ತಂದೆ ಆತ್ಮಹತ್ಯೆ: ಅಂತಿಮ ನಮನ ಸಲ್ಲಿಸಲು ಬಂದ ಅರ್ಜುನ್ ಕಪೂರ್
ಮಲೈಕಾ ಅವರ ನಿಜವಾದ ತಂದೆಯ ಹೆಸರು ಅನಿಲ್ ಅರೋರಾ. ಅನಿಲ್ ಅರೋರಾ ಪಂಜಾಬಿ ಕುಟುಂಬಕ್ಕೆ ಸೇರಿದವರು ಮತ್ತು ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಈ ಮಧ್ಯೆ, ಮಲೈಕಾ ತನ್ನ ತಂದೆಯ ಸಾವಿನ ದುಃಖವನ್ನು ವ್ಯಕ್ತಪಡಿಸಿ ‘ಅನಿಲ್ ಕುಲದೀಪ್ ಮೆಹ್ತಾ’ ಎಂದು ಬರೆದಿದ್ದಾರೆ. ಅಲ್ಲದೆ ಅನಿಲ್ ಮೆಹ್ತಾ 1962ರಲ್ಲಿ ಮತ್ತು ಮಲೈಕಾ 1973 ರಲ್ಲಿ ಜನಿಸಿದ್ದರು. ಇಬ್ಬರ ನಡುವಿನ ವಯಸ್ಸಿನ ಅಂತರದಿಂದಾಗಿ ಹಲವು ಚರ್ಚೆಗಳು ಬಂದಿದ್ದವು.
ಮಲೈಕಾ ಅರೋರಾ ಅವರ ತಾಯಿ ಮತ್ತು ವಿಚ್ಛೇದನ
ಮಲೈಕಾ ಅವರ ತಾಯಿ ಜಾಯ್ಸ್ ಮೊದಲು ಅನಿಲ್ ಅರೋರಾ ಅವರನ್ನು ಮದುವೆಯಾಗಿದ್ದರು. ನಂತರ ಅನಿಲ್ ಕುಲದೀಪ್ ಮೆಹ್ತಾ ಅವರೊಂದಿಗೆ ವಿವಾಹ ಆದರು. ಜಾಯ್ಸ್ ಇಬ್ಬರಿಗೂ ವಿಚ್ಛೇದನ ನೀಡಿದ್ದರು. ವರದಿಗಳ ಪ್ರಕಾರ, ಜಾಯ್ಸ್ ಮತ್ತು ಅನಿಲ್ ಮೆಹ್ತಾ ಬಹಳ ಹಿಂದೆಯೇ ವಿಚ್ಛೇದನ ಪಡೆದರು. ಆದರೆ ಇಬ್ಬರ ನಡುವೆ ಸ್ನೇಹ ಉಳಿಯಿತು. ಅನಿಲ್ ಮೆಹ್ತಾ ಅವರ ನಿಧನದ ನಂತರ, ಜಾಯ್ಸ್ ಕೂಡ ಸಾಕಷ್ಟು ನೊಂದಿದ್ದಾರೆ. ಇತ್ತೀಚೆಗೆ ಅನಿಲ್ ಮೆಹ್ತಾ ಅವರು ಕಟ್ಟಡದಿಂದ ಹಾರಿ ನಿಧನ ಹೊಂದಿದ್ದರು. ಅವರಿಗೆ ಅನಾರೋಗ್ಯ ಬಹುವಾಗಿ ಕಾಡಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ