ಕಂಗನಾ-ಹೃತಿಕ್ ಮಧ್ಯೆ ನಡೆದಿತ್ತು ಕೀಳು ಮಟ್ಟದ ಫೈಟ್; ಕಾರಣವಾಗಿದ್ದು ಆ ಒಂದು ಪದ

Kangana Ranaut: ನಟಿ ಕಂಗನಾ ರನೌತ್ ಹುಟ್ಟುಹಬ್ಬ ಇಂದು. ನಟಯ ವೃತ್ತಿ ಜೀವನ ಬಹಳ ಏಳು-ಬೀಳುಗಳನ್ನು ಕಂಡಿದೆ. ಖಾಸಗಿ ಬದುಕು ಸಹ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಕಂಗನಾ ಹಾಗೂ ಹೃತಿಕ್ ರೋಷನ್ ನಡುವೆ ದೊಡ್ಡ ಮಟ್ಟದ ವಿವಾದವೇ ಆಗಿತ್ತು. ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ. ಅಷ್ಟಕ್ಕೂ ಇಬ್ಬರ ನಡುವೆ ಜಗಳಕ್ಕೆ ಕಾರಣವಾದ ಅಂಶವೇನು?

ಕಂಗನಾ-ಹೃತಿಕ್ ಮಧ್ಯೆ ನಡೆದಿತ್ತು ಕೀಳು ಮಟ್ಟದ ಫೈಟ್; ಕಾರಣವಾಗಿದ್ದು ಆ ಒಂದು ಪದ
Kangana Ranaut Hrithik
Edited By:

Updated on: Mar 23, 2025 | 4:02 PM

ಕಂಗನಾ ರಣಾವತ್ ಹಾಗೂ ಹೃತಿಕ್ ರೋಷನ್ ಅವರು ಬಾಲಿವುಡ್​ನಲ್ಲಿ ಫೇಮಸ್ ಆಗಿದ್ದಾರೆ. ಇಬ್ಬರೂ ‘ಕೈಟ್’, ‘ಕ್ರಿಶ್ 3’ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಶೂಟ್ ವೇಳೆ ಪ್ರೀತಿ ಮೂಡಿತ್ತು ಎಂದು ಹೇಳಲಾಗಿತ್ತು. ಆ ಬಳಿಕ ಬ್ರೇಕಪ್ ಕೂಡ ಆಯಿತು. ಸಂದರ್ಶನ ಒಂದರಲ್ಲಿ ಕಂಗನಾ ಅವರು ಹೃತಿಕ್​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಇದರಿಂದ ಪರಿಸ್ಥಿತಿ ಗಂಭೀರವಾಯಿತು. ಚರ್ಚೆಗಳು ಜೋರಾಗಿ ಕೀಳು ಮಟ್ಟದ ಫೈಟ್ ಕೂಡ ಆಯಿತು. ಕಂಗನಾಗೆ ಇಂದು (ಮಾರ್ಚ್​ 23) ಜನ್ಮದಿನ. ಈ ವೇಳೆ ಆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಅದು 2016ರ ಸಮಯ. ಕಂಗನಾ ರಣಾವತ್ ಅವರು ‘ಆಶಿಕಿ 3’ ಸಿನಿಮಾದಲ್ಲಿ ಹೃತಿಕ್​ಗೆ ಜೊತೆಯಾಗಿ ನಟಿಸಬೇಕಿತ್ತು. ಹೃತಿಕ್ ಇದ್ದಾರೆ ಎಂಬ ಕಾರಣದಿಂದಲೇ ಕಂಗನಾ ಅವರು ಈ ಪ್ರಾಜೆಕ್ಟ್​ನಿಂದ ದೂರ ಹೋದರೇ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ್ದ ಕಂಗನಾ, ‘ಮಾಜಿಗಳು (Ex) ಎಲ್ಲರ ಗಮನ ಸೆಳೆಯಲು ಸಿಲ್ಲಿ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ’ ಎಂದು ಹೇಳಿದ್ದರು. ಈ ಮೂಲಕ ಹೃತಿಕ್​ನ ಎಕ್ಸ್ ಎಂದು ಕರೆದರು.

ಇದರಿಂದ ಸಿಟ್ಟಾದ ಹೃತಿಕ್ ರೋಷನ್ ಅವರು ಟ್ವಿಟರ್ ಮೂಲಕ ಕಂಗನಾ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟರು. ಆ ಬಳಿಕ ಕಂಗನಾ ರಣಾವತ್​ಗೆ ನೋಟಿಸ್ ಕಳುಹಿಸಿ, ಬಹಿರಂಗವಾಗಿ ಕ್ಷಮೆ ಕೇಳುವಂತೆ ಕೋರಿದರು. ಅಲ್ಲದೆ, 2014ರಲ್ಲಿ ಕಂಗನಾ ಅವರು 1,439 ಮೇಲ್​ಗಳನ್ನು ಕಳುಹಿಸಿದ್ದು, ಇವೆಲ್ಲವೂ ಬೇಸ್​ಲೆಸ್ ಆಗಿವೆ ಎಂದು ಹೃತಿಕ್ ಆರೋಪ ಮಾಡಿದ್ದರು. ಆದರೆ, ಇದನ್ನು ಕಂಗನಾ ಅಲ್ಲಗಳೆದರು.

ಇದನ್ನೂ ಓದಿ:ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ ಕಂಗನಾ ರನೌತ್, ಸಿನಿಮಾದಲ್ಲಿ ಲಾಸ್ ಕಾರಣವೇ?

ಕಂಗನಾ ಅವರು ಹೇಳುವ ಪ್ರಕಾರ ಹೃತಿಕ್ ಜೊತೆ ಅವರು ಡೇಟಿಂಗ್ ಮಾಡಿದ್ದರು. ವಿವಾಹ ವಿಚಾರ ಬಂದಾಗ ಹೃತಿಕ್ ಹೆದರಿದ್ದೂ ಅಲ್ಲದೆ, ಇದು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದರಂತೆ. ಈ ವಿಚಾರದಲ್ಲಿ ಕಂಗನಾ ತಾವು ಸಂತ್ರಸ್ತೆ ಎಂದು ಹೇಳಿಕೊಂಡಿದ್ದರು. ಕಂಗನಾಗೆ ಈಗಲೂ ಹೃತಿಕ್ ರೋಷನ್ ಅವರನ್ನು ಕಂಡರೆ ಆಗುವುದಿಲ್ಲ. ಅವರ ವಿಚಾರ ಮಾತನಾಡಲು ಹೋಗುವುದಿಲ್ಲ. ಆ ವಿಚಾರ ಬಂದಾಗ ಅವರು ಮೌನ ತಾಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us