
ಬ್ರೆಜಿಲಿಯನ್ ಮಾಡೆಲ್ ಮತ್ತು ನಟಿ ಲಾರಿಸಾ ಬೋನೆಸಿ ಈಗ ಸುದ್ದಿಯಲ್ಲಿದ್ದಾರೆ. ಆರ್ಯನ್ ಖಾನ್ ಜೊತೆಗಿನ ಡೇಟಿಂಗ್ ವದಂತಿಗಳಿಂದ ಅವರು ಗಮನ ಸೆಳೆದಿದ್ದಾರೆ. ಶಾರುಖ್ ಖಾನ್ ಅವರನ್ನೂ ಲಾರಿಸಾ ಕೊಂಡಾಡಿದ್ದಾರೆ. ಭಾರತದ ಮೇಲಿನ ಪ್ರೀತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಅವರು ಸಕ್ರಿಯರಾಗಿದ್ದಾರೆ. ಅವರ ಬದುಕು ಮತ್ತು ವೃತ್ತಿಜೀವನದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಸುಮಾರು ಹದಿನಾರು ವರ್ಷಗಳ ಹಿಂದೆ ಲಾರಿಸಾ ಕೆಲಸಕ್ಕಾಗಿ ಭಾರತಕ್ಕೆ ಬಂದರು. ನಂತರ ಮುಂಬೈನಲ್ಲಿ ನೆಲೆಸಿದರು. ಮಾಡೆಲಿಂಗ್, ಸಿನಿಮಾ ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಇಲ್ಲಿನ ಜನರು ತಮ್ಮನ್ನು ಆತ್ಮೀಯವಾಗಿ ಕಂಡರು. ಅದೇ ಕಾರಣಕ್ಕೆ ಭಾರತದಲ್ಲಿ ಉಳಿಯಲು ನಿರ್ಧರಿಸಿದೆ ಎಂದಿದ್ದಾರೆ. ತಾನು ಬ್ರೆಜಿಲಿಯನ್ಗಿಂತ ಹೆಚ್ಚು ಭಾರತೀಯಳಂತೆ ಭಾವಿಸುತ್ತೇನೆ ಎಂದಿದ್ದಾರೆ. ರಿಕ್ಷಾ ಚಾಲಕರ ಜೊತೆ ಮಾತನಾಡುತ್ತಲೇ ಹಿಂದಿ ಕಲಿತಿದ್ದಾಗಿ ತಮಾಷೆ ಮಾಡಿದ್ದಾರೆ. ಈಗ ಆರು ಭಾಷೆಗಳನ್ನು ಮಾತನಾಡಬಲ್ಲರು.
‘ದೇಸಿ ಬಾಯ್ಸ್’ ಚಿತ್ರದ ಹಾಡಿನ ಮೂಲಕ ಲಾರಿಸಾ ಸಿನಿಮಾ ರಂಗಕ್ಕೆ ಬಂದರು. ಗೋ ಗೋವಾ ಗೋನ್ ಚಿತ್ರದಲ್ಲೂ ನಟಿಸಿದರು. ತೆಲುಗಿನ ‘ನೆಕ್ಸ್ಟ್ ಏಂಟಿ’ ಚಿತ್ರಗಳಲ್ಲೂ ಕಾಣಿಸಿಕೊಂಡರು. ಹಲವು ಜನಪ್ರಿಯ ಮ್ಯೂಸಿಕ್ ವಿಡಿಯೋಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಹೃತಿಕ್ ರೋಷನ್ ಜೊತೆ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದರು. ಈಗ ವಿಕ್ರಮ್ ಭಟ್ ನಿರ್ದೇಶನದ 1920: ಕೋಲ್ಡ್ ವಿಂಟರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಹಾನ್ ಶೆಟ್ಟಿ ಮತ್ತು ಅನನ್ಯ ಸಿಂಗ್ ಕೂಡ ಈ ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ: ‘ದಿ ಬ್ಯಾಡ್ಸ್ ಆಫ್ ಬಾಲಿವುಡ್ ಸೀಸನ್ 2’ ಮೂಲಕ ಮತ್ತೆ ಬರಲು ರೆಡಿ ಆದ ಆರ್ಯನ್ ಖಾನ್
ಆರ್ಯನ್ ಖಾನ್ ಹೆಸರಿನೊಂದಿಗೆ ಲಾರಿಸಾ ಹೆಸರು ಆಗಾಗ ತಳುಕು ಹಾಕಿಕೊಳ್ಳುತ್ತಿದೆ. ಖಾನ್ ಕುಟುಂಬದ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಸೆಪ್ಟೆಂಬರ್ 2025ರಲ್ಲಿ ಆರ್ಯನ್ ನಿರ್ದೇಶನದ ಮೊದಲ ಚಿತ್ರದ ಪ್ರೀಮಿಯರ್‌ಗೂ ಬಂದಿದ್ದರು. ಆದರೆ ಡೇಟಿಂಗ್ ಬಗ್ಗೆ ಇಬ್ಬರೂ ಇದುವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಈ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿವೆ.
ನಟ ಶಾರುಖ್ ಖಾನ್ ಬಗ್ಗೆ ಲಾರಿಸಾ ತುಂಬಾ ಗೌರವದಿಂದ ಮಾತನಾಡಿದ್ದಾರೆ. ‘ಶಾರುಖ್ ನಿಜವಾದ ದಂತಕಥೆ. ಶಾರುಖ್ ಖಾನ್ ಎಂದೆಂದಿಗೂ ನಂಬರ್ ಒನ್ . ಅವರಿಂದ ಜನರು ಕಲಿಯುವಂತಹ ಅನೇಕ ವಿಷಯಗಳಿವೆ’ ಎಂದಿದ್ದಾರೆ. ತಮ್ಮ ವೃತ್ತಿ ಮತ್ತು ಬದುಕಿನ ಬಗ್ಗೆ ಲಾರಿಸಾ ಹಂಚಿಕೊಂಡ ಈ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.