AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1000 ಕೋಟಿ ಬಜೆಟ್, ‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಯಾರು ಗೊತ್ತೆ?

Ramayana movie producer: ರಣ್​ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾ, ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾಕ್ಕೆ ಒಟ್ಟು 1000 ಕೋಟಿ ಬಜೆಟ್ ಹಾಕಲಾಗಿದೆ. ಅಂದಹಾಗೆ ಇಷ್ಟು ದೊಡ್ಡ ಬಜೆಟ್ ಹಾಕಿ ಸಿನಿಮಾ ಮಾಡಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ ಯಾರು? ಅವರ ಹಿನ್ನೆಲೆ ಏನು?

1000 ಕೋಟಿ ಬಜೆಟ್, ‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಯಾರು ಗೊತ್ತೆ?
Namit Malhotra
ಮಂಜುನಾಥ ಸಿ.
|

Updated on: Jul 04, 2025 | 9:43 AM

Share

ರಣ್​ಬೀರ್ ಕಪೂರ್ (Ranbir Kapoor), ಯಶ್ (Yash) ಮತ್ತು ಸಾಯಿ ಪಲ್ಲವಿ (Sai Pallavi) ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಮುಗಿದಿದೆ. ಸಿನಿಮಾದ ಗ್ಲಿಂಪ್ಸ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಮೂರು ನಿಮಿಷದ ಗ್ಲಿಂಪ್ಸ್ ನೋಡಿದವರು ಇದು ಹಾಲಿವುಡ್ ಸಿನಿಮಾಗಳನ್ನೂ ಮೀರಿಸಬಹುದಾದ ವಿಷ್ಯುಲ್ ಎಫೆಕ್ಟ್ಸ್ ಇರುವ ಸಿನಿಮಾ ಎಂದು ಕೊಂಡಾಡಿದ್ದಾರೆ. ‘ರಾಮಾಯಣ’ ಸಿನಿಮಾ ವಿಶ್ವದರ್ಜೆಯ ಗುಣಮಟ್ಟದಲ್ಲಿ ಮೂಡಿ ಬರಬೇಕೆಂದು ಸಿನಿಮಾದ ಮೇಲೆ ಸುಮಾರು ನೂರು ಕೋಟಿ ಬಜೆಟ್ ಹಾಕಲಾಗುತ್ತಿದೆ. ಈ ಹುಚ್ಚು ಸಾಹಸಕ್ಕೆ ಕೈ ಹಾಕಿರುವ ವ್ಯಕ್ತಿಯ ಹೆಸರು ನಮಿತ್ ಮಲ್ಹೋತ್ರಾ.

‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿದ್ದಾರೆ. ನಟ ಯಶ್ ಅವರು ಈ ಸಿನಿಮಾದ ಸಹ ನಿರ್ಮಾಪಕ. ಆದರೂ ಪ್ರಧಾನ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೇ. ಸಿನಿಮಾದ ಮೇಲೆ ಅತಿ ದೊಡ್ಡ ಮೊತ್ತದ ಬಂಡವಾಳ ಹೂಡಿರುವುದು ಅವರೇ ಅಂತೆ. ಬಾಲಿವುಡ್​​ನ ನಿರ್ಮಾಣ ಸಂಸ್ಥೆಗಳೆಂದರೆ ಯಶ್ ರಾಜ್ ಫಿಲಮ್ಸ್, ಧರ್ಮಾ ಪ್ರೊಡಕ್ಷನ್, ಟಿ-ಸೀರೀಸ್ ಹೆಸರುಗಳ ಹೊರತಾಗಿ ಇನ್ಯಾವ ದೊಡ್ಡದಾಗಿ ಕೇಳಿ ಬರುತ್ತಿರಲಿಲ್ಲ. ಅಂಥಹದರಲ್ಲಿ ಇವರ್ಯಾರೂ ಮಾಡದ ಅತಿ ದೊಡ್ಡ ಸಾಹಸಕ್ಕೆ ಕೈ ಹಾಕಿರುವ ಈ ನಮಿತ್ ಮಲ್ಹೋತ್ರಾ ಯಾರು?

ಬರೋಬ್ಬರಿ ಎಂಟು ಆಸ್ಕರ್ ಅನ್ನು ಗೆದ್ದಿರುವ ಜಗದ್​ವಿಖ್ಯಾತ ಸ್ಟುಡಿಯೋನ ಸಹ ಮಾಲೀಕ ಹಾಗೂ ಹಾಲಿ ಸಿಇಓ ಈ ನಮಿತ್ ಮಲ್ಹೋತ್ರಾ. 1976 ರಲ್ಲಿ ಮುಂಬೈನಲ್ಲಿ ಜನಿಸಿದ ನಮಿತ್ ಮಲ್ಹೋತ್ರಾ ಅವರದ್ದು ಸಿನಿಮಾ ಹಿನ್ನೆಲೆಯೇ. ನಮಿತ್ ಅವರ ತಾತ ಎಂಎನ್ ಮಲ್ಹೋತ್ರಾ ಹಿಂದಿ ಸಿನಿಮಾಗಳಿಗೆ ಕ್ಯಾಮೆರಾಮ್ಯಾನ್ ಆಗಿದ್ದರು. ಮೊದಲ ಕಲರ್ ಸಿನಿಮಾ ‘ಝಾನ್ಸಿ ಕಿ ರಾಣಿ’ ಸಿನಿಮಾಕ್ಕೆ ಕೆಲಸ ಮಾಡಿದ್ದರು. ನಮಿತ್ ಮಲ್ಹೋತ್ರಾ ಅವರ ತಂದೆ ನರೇಶ್ ಮಲ್ಹೋತ್ರಾ ಹಿಂದಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಜೊತೆಗೆ ಸಿನಿಮಾಕ್ಕೆ ಬೇಕಿದ್ದ ವಸ್ತುಗಳನ್ನು ಬಾಡಿಗೆ ಕೊಡುವ ಉದ್ಯಮವನ್ನೂ ಹೊಂದಿದ್ದರು.

ನಮಿತ್ ಮಲ್ಹೋತ್ರಾಗೆ ಎಳವೆಯಿಂದಲೇ ತಂತ್ರಜ್ಞಾನ ವಿಶೇಷವಾಗಿ ಅನಿಮೇಷನ್​​ ಮೇಲೆ ಆಸಕ್ತಿ ಇತ್ತು. ಕಂಪ್ಯೂಟರ್ ಗ್ರಾಫಿಕ್ಸ್ ಕಲಿತು ತಮ್ಮ ತಂದೆಯ ಗ್ಯಾರೇಜಿನಲ್ಲಿ ಗ್ರಾಫಿಕ್ಸ್ ಸ್ಟುಡಿಯೋ ಪ್ರಾರಂಭ ಮಾಡಿದರು. ಆಗಷ್ಟೆ ಭಾರತದಲ್ಲಿ ಖಾಸಗಿ ಚಾನೆಲ್​ಗಳ ಭರಾಟೆ ಜೋರಾಗಿತ್ತು. ಅವುಗಳ ಕಾರ್ಯಕ್ರಮಗಳಿಗೆ ಗ್ರಾಫಿಕ್ಸ್ ಮಾಡಿಕೊಡುತ್ತಿದ್ದರು ನಮಿತ್ ಮಲ್ಹೋತ್ರಾ. ಸೋನಿಯ ‘ಬೂಗಿ ಊಗಿ’ ಸೇರಿದಂತೆ ಹಲವು ಶೋಗಳಿಗೆ ಗ್ರಾಫಿಕ್ಸ್ ಮಾಡಿಕೊಟ್ಟಿರುವುದು ನಮಿತ್ ಮಲ್ಹೋತ್ರಾ ಅದೂ ತಮ್ಮ ಗ್ಯಾರೇಜಿನಿಂದ. ವಿ ಚಾನೆಲ್​​ಗೆ ಪೋಸ್ಟ್ ಪ್ರೊಡಕ್ಷನ್ ಮಾಡುತ್ತಿದ್ದರು. ಆಗಿನ ಕಾಲದ ಮ್ಯೂಸಿಕ್ ವಿಡಿಯೋಗಳಿಗೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ರಾಮಾಯಣ ಗ್ಲಿಂಪ್ಸ್: ಯಶ್ ಕನ್ನಡ ಪ್ರೇಮಕ್ಕೆ ಜೈ ಎಂದ ಅಭಿಮಾನಿಗಳು

ಚಿತ್ರರಂಗದಲ್ಲಿ ಒಂದಷ್ಟು ಹಿಡಿತ ಬಂದ ಬಳಿಕ 1997 ರಲ್ಲಿ ತಮ್ಮ ಸಂಸ್ಥೆಗೆ ಪ್ರೈಂ ಫೋಕಸ್ ಎಂದು ಹೆಸರಿಟ್ಟು ಅದನ್ನು ತಮ್ಮ ತಂದೆಯ ಸಿನಿಮಾ ವಸ್ತುಗಳನ್ನು ಬಾಡಿಗೆ ನೀಡುವ ಕಂಪೆನಿ ಜೊತೆಗೆ ಒಂದು ಮಾಡಿದರು. ನಮಿತ್ ಬಹಳ ಬೇಗನೇ ತಮ್ಮ ಸಂಸ್ಥೆಯನ್ನು ತಂತ್ರಜ್ಞಾನದ ಮೂಲಕ ಬೆಳೆಸಿದರು. ಅದೆಷ್ಟು ವೇಗವಾಗಿ ನಮಿತ್ ಬೆಳೆದರೆಂದರೆ 2006 ರಲ್ಲಿ ಅಂದರೆ ಕೇವಲ ಒಂಬತ್ತು ವರ್ಷದಲ್ಲಿ ಪ್ರೈಂ ಫೋಕಸ್ ಅನ್ನು ಷೇರುಮಾರುಕಟ್ಟೆಗೆ ಪರಿಚಯಿಸಿದರು.

2006 ರ ಬಳಿಕ ಅಂತರಾಷ್ಟ್ರೀಯ ಮಟ್ಟಕ್ಕೆ ಸಂಸ್ಥೆಯನ್ನು ಕೊಂಡೊಯ್ಯುವ ನಿರ್ಧಾರ ಮಾಡಿದ ನಮಿತ್, ಲಂಡನ್, ಲಾಸ್ ಏಂಜಲ್ಸ್, ವ್ಯಾಂಕೋವರ್, ನ್ಯೂಯಾರ್ಕ್ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ಇದ್ದ ಜನಪ್ರಿಯ ಅನಿಮೇಷನ್ ಸ್ಟುಡಿಯೋಗಳನ್ನು ಟೇಕ್ ಓವರ್ ಮಾಡಿ, ತಮ್ಮ ಪ್ರೈಂ ಫೋಕಸ್ ಸಂಸ್ಥೆಯನ್ನು ದೊಡ್ಡದಾಗಿಸಿದರು. ಅದಾದ ಬಳಿಕ 2014 ರಲ್ಲಿ ವಿಶ್ವದ ಅತ್ಯುತ್ತಮ ವಿಎಫ್​ಎಕ್ಸ್ ಸಂಸ್ಥೆಯಾದ ಡಿಎನ್​ಇಜಿ ಸಂಸ್ಥೆಯೊಟ್ಟಿಗೆ ಪ್ರೈಂಫೋಕಸ್ ಅನ್ನು ಸೇರಿಸಿದರು. ಪ್ರೈಂ ಫೋಕಸ್ ಸಂಸ್ಥೆ ಡಿಎನ್​ಇಜಿಯ ಪೇರೆಂಟ್ ಸಂಸ್ಥೆಯಾಯ್ತು, ನಮಿತ್ ಅವರ ಬಳಿ ಈಗ ಸಂಸ್ಥೆಯ 75% ಷೇರು ಇದೆ. ಸಂಸ್ಥೆಯ ಸಿಇಓ ಸಹ ನಮಿತ್ ಅವರೇ ಆಗಿದ್ದಾರೆ.

ಡಿಎನ್​ಇಜಿ ಸಾಮಾನ್ಯ ಸಂಸ್ಥೆಯಲ್ಲ. ಆಸ್ಕರ್ ವಿಜೇತ ‘ಇಂಟರ್​​ಸ್ಟೆಲ್ಲರ್’, ‘ಇನ್​ಸೆಪ್ಷನ್’, ‘ಹ್ಯಾರಿ ಪಾಟರ್ 2’, ಬ್ಲೇಡ್ ರನ್ನರ್ 2049’, ‘ಮ್ಯಾಡ್ ಮ್ಯಾಕ್ಸ್’, ‘ಡಾರ್ಕ್ ನೈಟ್ ರೈಸಸ್’, ‘ಡಂಕಿರ್ಕ್’, ‘ಶೆರ್ಲಾಕ್ ಹೋಮ್ಸ್’, ‘ಚೆರ್ನೊಬೆಲ್’, ‘ಬ್ಲಾಕ್ ಮಿರರ್​’ ಇನ್ನೂ ಹಲವಾರು ಅತ್ಯುತ್ತಮ ಸಿನಿಮಾಗಳಿಗೆ ವಿಎಫ್​ಎಕ್ಸ್ ಮಾಡಿದೆ. ಈ ವರೆಗೆ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಿಗೆ ಡಿಎನ್​ಇಜಿ ಕೆಲಸ ಮಾಡಿದೆ. ಈ ವರೆಗೆ ಎಂಟು ಆಸ್ಕರ್ ಹಾಗೂ ಹಲವಾರು ಬಾಫ್ಟಾ ಪ್ರಶಸ್ತಿಗಳನ್ನು ಡಿಎನ್​ಇಜಿ ಸಂಸ್ಥೆ ಪಡೆದುಕೊಂಡಿದ್ದು, ಈ ಹೆಸರಾಂತ ಸಂಸ್ಥೆಯ ಸಿಇಓ ನಮಿತ್ ಮಲ್ಹೋತ್ರಾ.

ನಮಿತ್ ಮಲ್ಹೋತ್ರಾ ಅವರಿಗೆ ನಿರ್ಮಾಪಕನಾಗಿ ‘ರಾಮಾಯಣ’ ಮೊದಲ ಸಿನಿಮಾ ಅಲ್ಲ. ರಣ್​ಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾದ ಏಳು ಜನ ನಿರ್ಮಾಪಕರಲ್ಲಿ ನಮಿತ್ ಮಲ್ಹೋತ್ರಾ ಸಹ ಒಬ್ಬರು. ಆದರೆ ಆ ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳವನ್ನೇನೂ ಅವರು ಹೂಡಿರಲಿಲ್ಲ. ಆದರೆ ಅದಕ್ಕೆ ಮುಂದೆ ಕೆಲವು ಜನಪ್ರಿಯ ಹಾಲಿವುಡ್ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. 2018 ರಲ್ಲಿ ಬಿಡುಗಡೆ ಆದ ಆಕ್ಷನ್ ಸಿನಿಮಾ ‘ದಿ ಹರಿಕೇನ್ ಹೈಸ್ಟ್’, 2020 ರಲ್ಲಿ ‘ಹಾರಿಜನ್ ಲೈನ್’, 2024 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ದಿ ಗ್ಯಾರಿಫೀಲ್ಡ್ ಮೂವಿ’ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಈಗ ‘ರಾಮಾಯಣ’ ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹೂಡಿದ್ದು, ಈ ಸಿನಿಮಾಕ್ಕೆ ಕನ್ನಡದ ಸ್ಟಾರ್ ನಟ ಯಶ್ ಅವರು ತಮ್ಮ ಮಾನ್​ಸ್ಟರ್ ಮೈಂಡ್ ಕ್ರಿಯೇಷನ್ಸ್ ಕಡೆಯಿಂದ ಸಹ ನಿರ್ಮಾಪಕ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!