
ಕಪೂರ್ ಕುಟುಂಬ (Kapoor Family) ಭಾರತೀಯ ಚಿತ್ರರಂಗದ ಅತ್ಯಂತ ಪ್ರಮುಖ ಕುಟುಂಬ. ಭಾರತೀಯ ಚಿತ್ರರಂಗ ಇಂದು ಇಷ್ಟು ದೊಡ್ಡ ಹಂತಕ್ಕೆ ಬೆಳೆದು ನಿಲ್ಲುವಲ್ಲಿ ಕಪೂರ್ ಕುಟುಂಬದ ಹಿರಿಯರ ಶ್ರಮ, ದುಡಿಮೆ, ತ್ಯಾಗ ಸಾಕಷ್ಟಿದೆ. ಕಪೂರ್ ಕುಟುಂಬದ ಐದನೇ ತಲೆಮಾರು ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಕಪೂರ್ ಕುಟುಂಬದ ನಾಲ್ಕನೇ ತಲೆಮಾರಾದ ರಣ್ಬೀರ್ ಕಪೂರ್, ಕರೀನಾ ಕಪೂರ್ ಇನ್ನಿತರೆಯವರುಗಳು ಚಿತ್ರರಂಗದಲ್ಲಿ ಸ್ಟಾರ್ಗಳಾಗಿ ಮಿಂಚುತ್ತಿದ್ದಾರೆ. ಕಪೂರ್ ಕುಟುಂಬ ಬಾಲಿವುಡ್ನ ಬಲು ದೊಡ್ಡ ಕುಟುಂಬ. ಆದರೆ ಈ ಕಪೂರ್ ಕುಟುಂಬ, ಕುಟುಂಬದ ಸೊಸೆ ಆಲಿಯಾ ಭಟ್ ಅನ್ನು ದೂರ ಇಟ್ಟಿದೆಯೇ? ಹೀಗೊಂದು ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಅನುಮಾನ ಮೂಡಲು ಕಾರಣವೂ ಇದೆ.
ಇತ್ತೀಚೆಗಷ್ಟೆ ನೆಟ್ಫ್ಲಿಕ್ಸ್ನಲ್ಲಿ ಒಂದು ಹೊಸ ಪ್ರೋಮೊ ಬಿಡುಗಡೆ ಆಗಿದೆ. ‘ಡೈನ್ ವಿತ್ ಕಪೂರ್’ ಹೆಸರಿನ ಕಾರ್ಯಕ್ರಮ ನೆಟ್ಫ್ಲಿಕ್ಸ್ನಲ್ಲಿ ಇಂದಿನಿಂದ ಪ್ರಸಾರ ಆಗಲಿದೆ. ಕೆಲ ದಿನಗಳ ಹಿಂದಷ್ಟೆ ಈ ಶೋನ ಟ್ರೈಲರ್ ಬಿಡುಗಡೆ ಆಗಿತ್ತು. ಕಪೂರ್ ಕುಟುಂಬಕ್ಕೆ ಸೇರಿದ ಅರ್ಮಾನ್ ಜೈನ್, ಕಪೂರ್ ಕುಟುಂಬದವರಿಗಾಗಿ ಅಡಿಗೆ ಮಾಡಿ ಎಲ್ಲರೂ ಒಟ್ಟಿಗೆ ಊಟ ಮಾಡುವ ಕಾರ್ಯಕ್ರಮ ಇದು. ಅದನ್ನು ಶೂಟ್ ಮಾಡಿ ಎಪಿಸೋಡ್ ಅನ್ನಾಗಿ ಮಾಡಿ ಪ್ರಸಾರ ಮಾಡಲಾಗುತ್ತಿದೆ.
‘ಡೈನಿಂಗ್ ವಿತ್ ಕಪೂರ್ಸ್’ನಲ್ಲಿ ಹಿರಿಯ ನಟ ರಣ್ಧೀರ್ ಕಪೂರ್, ರಣ್ಬೀರ್ ಕಪೂರ್, ಕರೀನಾ ಕಪೂರ್, ಕರಿಶ್ಮಾ ಕಪೂರ್, ರಣ್ಬೀರ್ ಕಪೂರ್ ಅವರ ತಾಯಿ ನೀತು ಸಿಂಗ್, ಕಪೂರ್ ಕುಟುಂಬದ ಅಳಿಯ ಸೈಫ್ ಅಲಿ ಖಾನ್ ಇನ್ನೂ ಕೆಲವರು ಭಾಗಿ ಆಗಿದ್ದರು. ಎಲ್ಲರೂ ಒಟ್ಟಿಗೆ ಮಾತನಾಡುತ್ತಾ, ಹರಟುತ್ತಾ ಊಟ ಸವಿಯುವ ಕೆಲವು ದೃಶ್ಯಗಳು ಟ್ರೈಲರ್ನಲ್ಲಿ ಇದ್ದವು. ಆದರೆ ಈ ಶೋನಲ್ಲಿ ಕಪೂರ್ ಕುಟುಂಬದ ಸೊಸೆ ಆಲಿಯಾ ಭಟ್ ಕಾಣಲಿಲ್ಲ. ಇದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ.
ಇದನ್ನೂ ಓದಿ:ಕಪೂರ್ ಕುಟುಂಬದಲ್ಲಿ ಮದುವೆ ಸಂಭ್ರಮ; ಗೋವಾದ ಕಡಲ ತೀರದಲ್ಲಿ ನಡೆಯಿತು ಮದುವೆ
ಕಪೂರ್ ಕುಟುಂಬ ತಮ್ಮ ಕಿರಿಯ ಸೊಸೆ ಆಲಿಯಾ ಭಟ್ ಅನ್ನು ನಿರ್ಲಕ್ಷಿಸಿತೆ. ಅಥವಾ ಆಲಿಯಾ ಭಟ್ಗೂ ಕಪೂರ್ ಕುಟುಂಬಕ್ಕೂ ಏನಾದರೂ ಮನಸ್ಥಾಪ ಮೂಡಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಶೋನ ಆಯೋಜಕ ಹಾಗೂ ಕಪೂರ್ ಕುಟುಂಬದ ಸದಸ್ಯರೂ ಆಗಿರುವ ಅರ್ಮಾನ್ ಜೈನ್ ಸ್ಪಷ್ಟನೆ ನೀಡಿದ್ದು, ‘ರಾಜ್ ಕಪೂರ್ ಅವರು ಹೇಳಿರುವಂತೆ ‘ಕೆಲಸವೇ ದೇವರು’ ಅದನ್ನು ಕಪೂರ್ ಕುಟುಂಬದವರು ಬಹಳ ಗಂಭೀರವಾಗಿ ಪಾಲಿಸುತ್ತಾರೆ. ಆಲಿಯಾ ಭಟ್ ಅವರಿಗೆ ಅಂದು ಸಿನಿಮಾ ಕೆಲಸ ಇದ್ದಿದ್ದರಿಂದ ಅವರು ಶೋಗೆ ಬರಲಿಲ್ಲ. ಅದಕ್ಕೆ ಅನ್ಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದಿದ್ದಾರೆ.
‘ಡೈನಿಂಗ್ ವಿತ್ ಕಪೂರ್ಸ್’ ಕಾರ್ಯಕ್ರಮ ಇಂದಿನಿಂದ (ನವೆಂಬರ್ 21) ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಗಲಿದೆ. ಕಪೂರ್ ಕುಟುಂಬದ ಬಗ್ಗೆ ಹಲವು ವಿಷಯಗಳು ಈ ಶೋನಲ್ಲಿ ಚರ್ಚೆಗೆ ಬಂದಿವೆ. ಖಾಸಗಿ ಬದುಕು, ಹಲವು ಹಿಂದಿನ ಘಟನೆಗಳ ಮೆಲಕು ಇನ್ನೂ ಹಲವು ವಿಷಯಗಳನ್ನು ಕಪೂರ್ ಕುಟುಂಬ ಮಾತನಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ