167 ಕೋಟಿ ರೂ. ಒಡೆಯ, ಧುರಂಧರ್ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?

‘ಧುರಂಧರ್’ ಸಿನಿಮಾದಲ್ಲಿ ರೆಹಮಾನ್ ಡಕಾಯಿತ್ ಆಗಿ ಕಾಣಿಸಿಕೊಂಡ ಅಕ್ಷಯ್ ಖನ್ನಾ ಅವರಿಗೆ ಈಗ 50 ವರ್ಷ ವಯಸ್ಸು. ಅಂದಾಜು 167 ಕೋಟಿ ರೂಪಾಯಿ ಆಸ್ತಿಯನ್ನು ಅವರು ಹೊಂದಿದ್ದಾರೆ. ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಅಕ್ಷಯ್ ಖನ್ನಾ ಅವರು ಮದುವೆ ಆಗುವ ಮನಸ್ಸು ಮಾಡಿಲ್ಲ. ಆ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ.

167 ಕೋಟಿ ರೂ. ಒಡೆಯ, ಧುರಂಧರ್ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?
Akshaye Khanna

Updated on: Dec 17, 2025 | 4:43 PM

ಸೂಪರ್ ಹಿಟ್ ‘ಧುರಂಧರ್’ (Dhurandhar) ಸಿನಿಮಾದಿಂದಾಗಿ ನಟ ಅಕ್ಷಯ್ ಖನ್ನಾ ಅವರ ಖ್ಯಾತಿ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಅವರು ನೆಗೆಟಿವ್ ರೋಲ್ ಮಾಡಿದ್ದಾರೆ. ಖಳನಟ ಆದರೂ ಕೂಡ ಅವರು ಹೀರೋಗಿಂತಲೂ ಹೆಚ್ಚಾಗಿ ಮಿಂಚುತ್ತಿದ್ದಾರೆ. ರಣವೀರ್ ಸಿಂಗ್ ಮುಖ್ಯ ಭೂಮಿಕೆ ನಿಭಾಯಿಸಿದ ಈ ಚಿತ್ರದಲ್ಲಿ ಅಕ್ಷಯ್ ಖನ್ನಾ (Akshaye Khanna) ಅವರು ರೆಹಮಾನ್ ಡಕಾಯಿತ್ ಎಂಬ ವಿಲನ್ ಪಾತ್ರವನ್ನು ಮಾಡಿ ಫೇಮಸ್ ಆಗಿದ್ದಾರೆ. ಅಂದಹಾಗೆ, ಅವರಿಗೆ ಈಗ 50 ವರ್ಷ ವಯಸ್ಸು. ಆದರೂ ಕೂಡ ಅವರು ಮದುವೆ ಆಗಿಲ್ಲ. ಅದಕ್ಕೆ ಕಾರಣ ಕೂಡ ಇದೆ.

ಈ ಮೊದಲು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಕ್ಷಯ್ ಖನ್ನಾ ಅವರು ಈ ಬಗ್ಗೆ ಮಾತನಾಡಿದ್ದರು. ‘ನನಗೆ ಜವಾಬ್ದಾರಿಗಳು ಬೇಕಿಲ್ಲ. ನಾನು ಒಂಟಿಯಾಗಿ ಇರಲು ಇಷ್ಟಪಡುತ್ತೇನೆ. ಯಾರ ಬಗ್ಗೆಯೂ ನಾನು ಕಾಳಜಿ ಮಾಡಬೇಕಾಗಿಲ್ಲ. ಯಾರ ಬಗ್ಗೆಯೂ ಚಿಂತೆ ಮಾಡಬೇಕಾಗಿಲ್ಲ. ನನ್ನ ಬಗ್ಗೆ ನಾನು ಚಿಂತೆ ಮಾಡಿದರೆ ಸಾಕು. ನನಗೆ ಈ ಅದ್ಭುತ ಜೀವನ ಸಿಕ್ಕಿದೆ. ಅದನ್ನು ನಾನು ಯಾಕೆ ಹಾಳುಮಾಡಿಕೊಳ್ಳಲಿ?’ ಎಂದಿದ್ದರು ಅಕ್ಷಯ್ ಖನ್ನಾ.

‘ಮದುವೆ ಆಗುವ ನಿರ್ಧಾರಕ್ಕೆ ಬರುವ ಮುನ್ನ ನೀವು ನಿಮಗೆ ಸೂಕ್ತ ಎನಿಸುವ ಹುಡುಗಿಯನ್ನು ಹುಡುಕಬೇಕು. ಮದುವೆ ಆಗಬೇಕಲ್ಲ ಎಂಬ ಕಾರಣಕ್ಕೆ ಮದುವೆ ಆದರೆ ಅದು ಸರಿಯಲ್ಲ. ಕುಟುಂಬದವರು ನಿಮ್ಮ ಮೇಲೆ ಒತ್ತಾಯ ಹೇರುತ್ತಿದ್ದಾರೆ ಎಂಬ ಕಾರಣಕ್ಕೆ ಮದುವೆ ಆದರೆ ಅದು ತಪ್ಪು’ ಎಂದು ಅಕ್ಷಯ್ ಖನ್ನಾ ಅವರು ಸಂದರ್ಶನದಲ್ಲಿ ಹೇಳಿದ್ದರು.

‘ನಾನು ಮದುವೆ ಆಗುವಂತೆ ಕಾಣುತ್ತಿಲ್ಲ. ಮದುವೆಗೆ ಸೂಕ್ತವಾದ ವ್ಯಕ್ತಿ ನಾನಲ್ಲ. ಮದುವೆ ಎಂಬುದು ಒಂದು ಬದ್ಧತೆ. ಅಲ್ಲದೇ ಅದರಿಂದ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ನಿಮ್ಮ ಬದುಕನ್ನು ಬೇರೆಯವರ ಜೊತೆ ಹಂಚಿಕೊಂಡಾಗ ನಿಮಗೆ ಪೂರ್ತಿ ನಿಯಂತ್ರಣ ಇರುವುದಿಲ್ಲ. ನನಗೆ ನನ್ನ ಬದುಕಿನ ಮೇಲೆ ಪೂರ್ತಿ ನಿಯಂತ್ರಣ ಬೇಕು’ ಎಂದು ಅಕ್ಷಯ್ ಖನ್ನ ಅವರು ಹೇಳಿದ್ದರು.

ಇದನ್ನೂ ಓದಿ: ಧುರಂಧರ್: ಅಕ್ಷಯ್ ಖನ್ನಾ ಕೆನ್ನೆಗೆ 7 ಬಾರಿ ಹೊಡೆದ ನಟಿ ಸೌಮ್ಯ ಟಂಡನ್

ಬಾಲಿವುಡ್​ನ ಖ್ಯಾತ ನಟ ವಿನೋದ್ ಖನ್ನಾ ಅವರ ಪುತ್ರ ಅಕ್ಷಯ್ ಖನ್ನಾ. 2025ರ ವೇಳೆಗೆ ಅವರ ಒಟ್ಟು ಆಸ್ತಿ 167 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹಲವು ಕಡೆಗಳಲ್ಲಿ ಅವರು ಆಸ್ತಿ ಹೊಂದಿದ್ದಾರೆ. ಅನೇಕ ಬಂಗಲೆಗಳು ಅವರ ಹೆಸರಿನಲ್ಲಿ ಇವೆ. ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದಾರೆ. ಸಿನಿಮಾದಲ್ಲಿ ನಟಿಸಿ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ರಿಯಲ್ ಎಸ್ಟೇಟ್​ ಹೂಡಿಕೆ ಮೂಲಕವೂ ಅಕ್ಷಯ್ ಖನ್ನಾ ಹಣ ಗಳಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.