ಕರಣ್ ಜೋಹರ್ (Karan Johar) ಬಾಲಿವುಡ್ನಲ್ಲಿ (Bollywood) ಬಹುತೇಕ ಎಲ್ಲರಿಗೂ ಅತ್ಯಂತ ಖಾಸಾ ವ್ಯಕ್ತಿ. ಬಾಲಿವುಡ್ನ ಯಾವುದೇ ಸೆಲೆಬ್ರಿಟಿಗಳ ವಿವಾಹವಾದರು ಕರಣ್ ಜೋಹರ್ಗೆ ಆಹ್ವಾನವಿದ್ದೇ ಇರುತ್ತದೆ. ಕರಣ್ ಜೋಹರ್ ಮದುವೆಗೆ ಹಾಜರಾಗುವುದು ಸಹ ಖಾಯಂ. ಕರಣ್ ಜೋಹರ್-ಮನೀಷ್ ಮಲ್ಹೋತ್ರಾ ಬಾಲಿವುಡ್ ಮದುವೆಗಳ ಖಾಯಂ ಅತಿಥಿಗಳೆಂದು ಮೀಮ್ ಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಆದರೆ ಇಡೀ ಬಾಲಿವುಡ್ ಹಾಜರಿ ಹಾಕಿದ್ದ ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಕರಣ್ ಜೋಹರ್ ಗೈರಾಗಿದ್ದು ಹಲವರಿಗೆ ಆಶ್ಚರ್ಯ ತರಿಸಿದೆ. ಆದರೆ ಕರಣ್ ಗೈರಾಗಿದ್ದಕ್ಕೆ ಕಾರಣವಿದೆ.
ಕರಣ್ ಜೋಹರ್ಗೆ ಸಹ ಅನಂತ್-ರಾಧಿಕಾರ ಪ್ರೀ ವೆಡ್ಡಿಂಗ್ಗೆ ಆಹ್ವಾನ ನೀಡಲಾಗಿತ್ತು. ಕರಣ್ ಜೋಹರ್ ಸಹ ಉತ್ಸುಕತೆಯಿಂದ ಪ್ರೀ ವೆಡ್ಡಿಂಗ್ಗೆ ಹಾಜರಾಗಲು ತಯಾರಿ ಆರಂಭಿಸಿದ್ದರು. ಪ್ರೀ ವೆಡ್ಡಿಂಗ್ಗಾಗಿ ವಿಶೇಷ ಧಿರಿಸುಗಳನ್ನು ಗೆಳೆಯ ಮನೀಷ್ ಮಲ್ಹೋತ್ರಾ ಇಂದ ಡಿಸೈನ್ ಸಹ ಮಾಡಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕರಣ್ ಜೋಹರ್ಗೆ ಅನಾರೋಗ್ಯ ಉಂಟಾದ ಕಾರಣ ಅವರು ಪ್ರೀ ವೆಡ್ಡಿಂಗ್ ಕಾರ್ಯಕ್ರಮದಿಂದ ದೂರ ಉಳಿದರು.
ಇದನ್ನೂ ಓದಿ:ದೀಪಿಕಾ ಪಡುಕೋಣೆಗಾಗಿ ಬಿಗ್ ಬಜೆಟ್ ಚಿತ್ರ ಹೋಲ್ಡ್ ಮಾಡಿದ ಕರಣ್ ಜೋಹರ್
ಕರಣ್ ಜೋಹರ್ಗೆ ವೈರಲ್ ಜ್ವರ, ನೆಗಡಿ ಮತ್ತು ಗಂಟಲು ನೋವುಗಳು ಕಾಣಿಸಿಕೊಂಡ ಕಾರಣ, ಇತರೆ ಅತಿಥಿಗಳಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಕರಣ್ ಜೋಹರ್ ಪ್ರೀ ವೆಡ್ಡಿಂಗ್ಗೆ ಹೋಗದಿರಲು ನಿರ್ಧರಿಸಿ ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆದುಕೊಂಡರು. ತಮ್ಮ ಗೆಳೆಯರಿಂದ ಪ್ರೀ ವೆಡ್ಡಿಂಗ್ ಸಂಭ್ರಮದ ಬಗ್ಗೆ ಕೇಳಿ ತಿಳಿದುಕೊಂಡರಂತೆ. ಅಲ್ಲದೆ, ಅನಂತ್ ಹಾಗೂ ರಾಧಿಕಾರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾವಪೂರ್ಣ ಸಂದೇಶವನ್ನು ಸಹ ಕರಣ್ ಬರೆದುಕೊಂಡಿದ್ದಾರೆ.
ಆದರೆ ಕರಣ್ ಜೋಹರ್ರ ಆಪ್ತ ಗೆಳೆಯ, ಬಾಲಿವುಡ್ ಮದುವೆಗಳ ಖಾಯಂ ಅತಿಥಿ, ಜನಪ್ರಿಯ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಪ್ರೀ ವೆಡ್ಡಿಂಗ್ಗೆ ಹಾಜರಾಗಿದ್ದರು. ವೇದಿಕೆ ಏರಿ ಕರೀನಾ ಕಪೂರ್, ಸಾರಾ ಅಲಿ ಖಾನ್ ಇನ್ನಿತರೆ ನಟಿಯರೊಡನೆ ಸಖತ್ ಸ್ಟೆಪ್ ಸಹ ಹಾಕಿದರು. ಅನಂತ್ ಹಾಗೂ ರಾಧಿಕಾರ ಮದುವೆ ಕಾರ್ಯಕ್ರಮ ಜೂನ್ ತಿಂಗಳಲ್ಲಿ ನಡೆಯಲಿದ್ದು, ಆಗ ಬಾಲಿವುಡ್ನ ಅತಿಥಿಗಳ ಜೊತೆಗೆ ದೇಶದ ಅಗ್ರಗಣ್ಯ ರಾಜಕಾರಣಿಗಳು, ಉದ್ಯಮಿಗಳು ಇನ್ನೂ ಹಲವರು ಭಾಗಿಯಾಗಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ