AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ-ರಣವೀರ್ ದಂಪತಿಯ ಟ್ರೋಲ್ ಮಾಡಿದವರಿಗೆ ಮಧ್ಯ ಬೆರಳು ತೋರಿಸಿದ ಕರಣ್ ಜೋಹರ್

‘ಕಾಫಿ ವಿತ್ ಕರಣ್‘ ಶೋನಲ್ಲಿ ದೀಪಿಕಾ ಓಪನ್ ಆಗಿ ಮಾತನಾಡಿ ಟ್ರೋಲ್​ಗೆ ಒಳಗಾದರು. ಈ ಬಗ್ಗೆ ಕರಣ್ ಜೋಹರ್ ಇತ್ತೀಚಿಗಿನ ಎಪಿಸೋಡ್​ನಲ್ಲಿ ಮಾತನಾಡಿದ್ದಾರೆ.

ದೀಪಿಕಾ-ರಣವೀರ್ ದಂಪತಿಯ ಟ್ರೋಲ್ ಮಾಡಿದವರಿಗೆ ಮಧ್ಯ ಬೆರಳು ತೋರಿಸಿದ ಕರಣ್ ಜೋಹರ್
ಕರಣ್-ದೀಪಿಕಾ, ರಣವೀರ್
Follow us
ರಾಜೇಶ್ ದುಗ್ಗುಮನೆ
|

Updated on:Dec 14, 2023 | 11:11 AM

ನಿರ್ಮಾಪಕ, ನಿರೂಪಕ ಕರಣ್ ಜೋಹರ್ (Karan Johar) ಅವರು ‘ಕಾಫಿ ವಿತ್ ಕರಣ್’ ಶೋ ನಡೆಸಿಕೊಡುತ್ತಾರೆ. ವಿವಾದಗಳಿಂದಲೇ ಈ ಶೋ ಎಲ್ಲರ ಗಮನ ಸೆಳೆದಿದೆ. ಈ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ಇಲ್ಲಿಗೆ ಬರೋಕೆ ಹಿಂದೇಟು ಹಾಕುತ್ತಾರೆ. ಇನ್ನೂ ಕೆಲ ಸೆಲೆಬ್ರಿಟಿಗಳು ಟ್ರೋಲ್ ಆದರೂ ಹೆದರುವುದಿಲ್ಲ. ಈ ಸಾಲಿನಲ್ಲಿ ದೀಪಿಕಾ ಹಾಗೂ ರಣವೀರ್ ಸಿಂಗ್ ಇದ್ದಾರೆ. ಇವರನ್ನು ಟ್ರೋಲ್ ಮಾಡಿದ್ದಕ್ಕೆ ಕರಣ್ ಜೋಹರ್ ಸಿಟ್ಟಾಗಿದ್ದಾರೆ.

‘ಕಾಫಿ ವಿತ್ ಕರಣ್’ ಈಗಾಗಲೇ ಏಳು ಸೀಸನ್​ಗಳನ್ನು ಯಶಸ್ವಿ ಆಗಿ ಪೂರೈಸಿದೆ. ಇತ್ತೀಚೆಗೆ ಎಂಟನೇ ಸೀಸನ್​ ಆರಂಭ ಆಯಿತು. ಇದರ ಮೊದಲ ಎಪಿಸೋಡ್​ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಹಲವು ವಿಚಾರಗಳ ಕುರಿತು ಮಾತನಾಡಿದ್ದರು. ದೀಪಿಕಾ ಓಪನ್ ಆಗಿ ಮಾತನಾಡಿ ಟ್ರೋಲ್​ಗೆ ಒಳಗಾದರು. ಈ ಬಗ್ಗೆ ಕರಣ್ ಜೋಹರ್ ಇತ್ತೀಚಿಗಿನ ಎಪಿಸೋಡ್​ನಲ್ಲಿ ಮಾತನಾಡಿದ್ದಾರೆ.

ಕರಣ್ ಜೋಹರ್ ಶೋಗೆ ಆದಿತ್ಯ ರಾಯ್ ಕಪೂರ್ ಹಾಗೂ ಅರ್ಜುನ್ ಕಪೂರ್ ಆಗಮಿಸಿದ್ದರು. ಈ ವೇಳೆ ಕರಣ್ ಟ್ರೋಲ್ ವಿಚಾರ ಮಾತನಾಡಿದ್ದಾರೆ. ‘ಅದು ನಮ್ಮ ಅತ್ಯುತ್ತಮ ಎಪಿಸೋಡ್​ಗಳಲ್ಲಿ ಒಂದಾಗಿದೆ. ಅವರು (ರಣವೀರ್, ದೀಪಿಕಾ) ಪ್ರಾಮಾಣಿಕರಾಗಿದ್ದರು, ಶ್ರದ್ಧೆಯಿಂದ ಇದ್ದರು ಮತ್ತು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಆದರೆ, ಅವರ ಬಗ್ಗೆ ನೀವು ಅಸಂಬದ್ಧವಾಗಿ ಮಾತನಾಡಿದಿರಿ. ವ್ಯಕ್ತಿಯ ವೈಯಕ್ತಿಕ ಜೀವನ ಮತ್ತು ಮದುವೆಯ ಬಗ್ಗೆ ನಿಮಗೆ ಏನು ತಿಳಿದಿದೆ? ನಿಮ್ಮ ಮನೆಯನ್ನು ನೀವು ನೋಡಿಕೊಳ್ಳಿ. ಇಂಥವರಿಗೆ ನಾನು ಮಧ್ಯ ಬೆರಳು ತೋರಿಸುತ್ತೇನೆ’ ಎಂದಿದ್ದಾರೆ ಕರಣ್​.

ಇದನ್ನೂ ಓದಿ: ‘ಫೈಟರ್’ ಮಾತ್ರವಲ್ಲ ಈ ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ದೀಪಿಕಾ ಪಡುಕೋಣೆ..

ದೀಪಿಕಾ ಮಾತನಾಡಿದ್ದೇನು?

ದೀಪಿಕಾ ಪಡುಕೋಣೆ ಅವರು ‘ಕಾಫಿ ವಿತ್ ಕರಣ್’ ಶೋನಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದರು. ರಣವೀರ್ ಸಿಂಗ್ ಕಮಿಟ್ ಆಗಿದ್ದಾಗ ಅವರು ಕೆಲವರ ಜೊತೆ ಸುತ್ತಾಡಿದ್ದ ವಿಚಾರವನ್ನು ಒಪ್ಪಿಕೊಂಡರು. ರಣವೀರ್ ಸಿಂಗ್ ಅವರು ಈ ವಿಚಾರದಲ್ಲಿ ಸಿಟ್ಟಾಗಿದ್ದರು. ಇದನ್ನು ಅನೇಕರು ಟ್ರೋಲ್ ಮಾಡಿದ್ದರು. ರಣವೀರ್​ ಅವರು ದೀಪಿಕಾನ ಮದುವೆ ಆಗಬಾರದಿತ್ತು ಎಂದು ಅನೇಕರು ಹೇಳಿದ್ದರು. ಆದರೆ, ಈ ಟ್ರೋಲ್​ಗಳು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೀವನದಲ್ಲಿ ಅಂಥ ದೊಡ್ಡ ಬದಲಾವಣೆ ಮಾಡಿಲ್ಲ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:10 am, Thu, 14 December 23