ತರಾತುರಿಯಲ್ಲಿ ಮದುವೆಯಾಗುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿರುವ ಅನೇಕ ಜೋಡಿಗಳು ಬಾಲಿವುಡ್‌ನಲ್ಲಿ ಇವೆ. ಅಂತಹ ಅನೇಕ ಜೋಡಿಗಳ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಮದುವೆಗೂ ಮುನ್ನವೇ ಗರ್ಭಿಣಿಯಾದ ಕಾರಣ ನಟಿಯ ಮನೆಯವರು ಆಕೆಯನ್ನು ಕೂಡಲೇ ಮದುವೆಯಾಗುವಂತೆ ಒತ್ತಾಯಿಸಿದ್ದರು. ತಾವು ಗರ್ಭಿಣಿ ಎಂದು ಮನೆಯವರಿಗೆ ತಿಳಿಸಿದ 72 ಗಂಟೆಗಳಲ್ಲಿ ಆಕೆಯ ಮದುವೆ ಮುಗಿದು ಹೋಗಿತ್ತು. ಈ ನಟಿ ಬೇರೆ ಯಾರೂ ಅಲ್ಲ ನೇಹಾ ಧೂಪಿಯಾ.
2018ರ ಮೇ 10ರಂದು ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಗುರುದ್ವಾರದಲ್ಲಿ ವಿವಾಹವಾದರು. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಕಾರಣ ನೇಹಾ ಅವರ ಮದುವೆಯನ್ನು ತರಾತುರಿಯಲ್ಲಿ ಮುಗಿಸಲಾಗಿತ್ತು. ತಾವು ಗರ್ಭಿಣಿ ಎಂದು ಮನೆಯವರಿಗೆ ಹೇಳಿದಾಗ ಮನೆಯವರು ಒಂದು ಕಂಡೀಷನ್ ಹಾಕಿದ್ದರು ಎಂದು ನೇಹಾ ಹೇಳಿದ್ದರು. ‘ನಾನು ಅಂಗದ್ ಮತ್ತು ನನ್ನ ಸಂಬಂಧದ ಬಗ್ಗೆ ನನ್ನ ಪೋಷಕರಿಗೆ ಹೇಳಿದಾಗ, ಅವರು ಆಘಾತಕ್ಕೊಳಗಾದರು. ಆ ನಂತರ ನಾನು ಗರ್ಭಿಣಿ ಎಂದು ಹೇಳಿದ್ದೆ. ಆಗ ಅವರು ನನಗೆ ಎರಡು ದಿನ ಸಮಯ ನೀಡಿ ಮದುವೆಯಾಗಲು ಹೇಳಿದರು. ನನಗೆ ಅಂಗದ್ ನಾಲ್ಕು ವರ್ಷಗಳಿಂದ ಗೊತ್ತಿತ್ತು. ಹಾಗಾಗಿ ಇಷ್ಟು ಬೇಗ ಮದುವೆಯಾಗಲು ನಿರ್ಧರಿಸುವುದು ನನಗೆ ಕಷ್ಟವಾಗಲಿಲ್ಲ’ ಎಂದಿದ್ದರು ಅವರು.
ಇದನ್ನೂ ಓದಿ:ಆಪಲ್ ಸ್ಟೋರ್ ಲಾಂಚ್‌ನಲ್ಲಿ ಟಿಮ್ ಕುಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬಾಲಿವುಡ್ ತಾರೆಯರು
ಮದುವೆ ಆದ ಐದು ತಿಂಗಳ ನಂತರ ಅವರು ನವೆಂಬರ್ 2018ರಲ್ಲಿ ಮಗಳಿಗೆ ಜನ್ಮ ನೀಡಿದರು. ನೇಹಾ ಮತ್ತು ಅಂಗದ್ ತಮ್ಮ ಮಗಳಿಗೆ ಮೆಹರ್ ಎಂದು ಹೆಸರಿಟ್ಟರು. ನಂತರ ಅಕ್ಟೋಬರ್ 3, 2021 ರಂದು ನೇಹಾ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದರು. ಅವರ ಹೆಸರು ಗುರಿಕ್ ಸಿಂಗ್ ಬೇಡಿ.
ನೇಹಾ 2003ರಲ್ಲಿ ‘ಕಯಾಮತ್’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ‘ಜೂಲಿ’, ‘ಶಿಖರ್’, ‘ಚುಪ್ ಚುಪ್ ಕೆ’, ‘ಶೀಶಾ’, ‘ಫ್ಯಾನ್ಸ್ ಗಯೇ ರೇ ಒಬಾಮಾ’, ‘ದೇ ದಾನಾ ದಾನ್’, ‘ರೇ ರಗಿಲೆ’, ‘ಬ್ಯಾಡ್ ನ್ಯೂಸ್’ ಚಿತ್ರಗಳಲ್ಲಿ ನಟಿಸಿದ್ದಾರೆ. ನೇಹಾ ಈಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅಂತೆಯೇ, ಅವರ ಪಾಡ್‌ಕಾಸ್ಟ್ ಕೂಡ ಬಹಳ ಜನಪ್ರಿಯವಾಗಿದೆ. ಈ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ವಿವಿಧ ಸೆಲೆಬ್ರಿಟಿಗಳನ್ನು ಸಂದರ್ಶಿಸುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ