YRF ಸ್ಪೈ ಯೂನಿವರ್ಸ್​ಗೆ ಹೊಸ ಸಿನಿಮಾ ಸೇರ್ಪಡೆ; ಆ್ಯಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ ಆಲಿಯಾ ಭಟ್

|

Updated on: Jul 14, 2023 | 11:32 AM

ಇಷ್ಟು ವರ್ಷ ರಿಲೀಸ್ ಆದ ಯಶ್ ರಾಜ್ ಫಿಲ್ಮ್ಸ್​ ಸ್ಪೈ ಯೂನಿವರ್ಸ್​​ನಲ್ಲಿ ಹೀರೋಗಳೇ ಹೆಚ್ಚು ಹೈಲೈಟ್​ ಆಗಿದ್ದರು. ಈ ಕಾರಣಕ್ಕೆ ಆಲಿಯಾ ಅವರೇ ಮುಖ್ಯಭೂಮಿಕೆಯಲ್ಲಿರುವ ಹೊಸ ಸಿನಿಮಾನ ಸಿದ್ಧಪಡಿಸಲು ಯಶ್​ ರಾಜ್ ಫಿಲ್ಮ್ಸ್ ರೆಡಿ ಆಗಿದೆ.

YRF ಸ್ಪೈ ಯೂನಿವರ್ಸ್​ಗೆ ಹೊಸ ಸಿನಿಮಾ ಸೇರ್ಪಡೆ; ಆ್ಯಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ ಆಲಿಯಾ ಭಟ್
ಆಲಿಯಾ ಭಟ್
Follow us on

ಯಶ್ ರಾಜ್ ಫಿಲ್ಮ್ಸ್ (Yash Raj Films) ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಇದರ ಜೊತೆಗೆ ಭಾರತದ ಅತಿ ದೊಡ್ಡ ಸ್ಪೈ ಯೂನಿವರ್ಸ್​ನ ಸೃಷ್ಟಿ ಮಾಡಿದೆ. ಈ ಯೂನಿವರ್ಸ್​ ಅಡಿಯಲ್ಲಿ 2012ರಲ್ಲಿ ಮೊದಲ ಸಿನಿಮಾ ರಿಲೀಸ್ ಆಯಿತು. ಈಗ 11 ವರ್ಷಗಳು ಕಳೆದಿವೆ. ಈ ವೇಳೆ ಒಂದು ಭರ್ಜರಿ ಸುದ್ದಿ ಸಿಕ್ಕಿದೆ. ಯಶ್ ರಾಜ್ ಫಿಲ್ಮ್ಸ್​​ ನಿರ್ಮಾಣದ ಸ್ಪೈ ಯೂನಿವರ್ಸ್​​ನಲ್ಲಿ 8ನೇ ಸಿನಿಮಾ ಘೋಷಣೆಗೆ ರೆಡಿ ಆಗಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ಅವರು ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಅವರು ಭರ್ಜರಿ ಆ್ಯಕ್ಷನ್ ಮೆರೆಯಲಿದ್ದಾರೆ ಅನ್ನೋದು ವಿಶೇಷ.

ಯಶ್ ರಾಜ್ ಫಿಲ್ಮ್ಸ್​ನ ಆದಿತ್ಯ ಚೋಪ್ರಾ ಅವರು ಮುನ್ನಡೆಸುತ್ತಿದ್ದಾರೆ. ‘ಏಕ್​ ಥಾ ಟೈಗರ್’, ‘ಟೈಗರ್​ ಜಿಂದಾ ಹೈ’, ‘ವಾರ್’, ‘ಪಠಾಣ್’ ಸಿನಿಮಾಗಳು ಈ ಯೂನಿವರ್ಸ್ ಅಡಿಯಲ್ಲಿ ಸಿದ್ಧವಾಗಿದೆ. ‘ಟೈಗರ್ 3’, ‘ವಾರ್ 2’ ಹಾಗೂ ಟೈಗರ್​ vs ಪಠಾಣ್​ ಸಿನಿಮಾ ಕೂಡ ಇದೇ ಬ್ಯಾನರ್​ನಲ್ಲಿ ಸಿದ್ಧವಾಗುತ್ತಿದ್ದು, ಇದು ಕೂಡ ಸ್ಪೈ ಯೂನಿವರ್ಸ್​​ ಅಡಿಯಲ್ಲೇ ಬರಲಿದೆ. ಈಗ ಆದಿತ್ಯ ಚೋಪ್ರಾ ಅವರು ದೊಡ್ಡ ಪ್ಲ್ಯಾನ್ ರೂಪಿಸಿದ್ದಾರೆ.

ಇಷ್ಟು ವರ್ಷ ರಿಲೀಸ್ ಆದ ಯಶ್ ರಾಜ್ ಫಿಲ್ಮ್ಸ್​ ಸ್ಪೈ ಯೂನಿವರ್ಸ್​​ನಲ್ಲಿ ಹೀರೋಗಳೇ ಹೆಚ್ಚು ಹೈಲೈಟ್​ ಆಗಿದ್ದರು. ‘ಪಠಾಣ್’ ಸಿನಿಮಾದಲ್ಲಿ ದೀಪಿಕಾ ಪಾತ್ರ ಹೈಲೈಟ್ ಆಗಿತ್ತಾದರೂ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಅವರ ಪಾತ್ರಕ್ಕೆ ಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾದವು. ಈ ಕಾರಣಕ್ಕೆ ಆಲಿಯಾ ಅವರೇ ಮುಖ್ಯಭೂಮಿಕೆಯಲ್ಲಿರುವ ಹೊಸ ಸಿನಿಮಾನ ಸಿದ್ಧಪಡಿಸಲು ಯಶ್​ ರಾಜ್ ಫಿಲ್ಮ್ಸ್ ರೆಡಿ ಆಗಿದೆ.

ಇದನ್ನೂ ಓದಿ: ‘ರಣಬೀರ್​ ಕಪೂರ್​ ಬೇಡ, ನೀವು ಮಾತ್ರ ಪೋಸ್​ ನೀಡಿ’: ಪಾಪರಾಜಿ ಮನವಿಗೆ ಆಲಿಯಾ ಪ್ರತಿಕ್ರಿಯೆ ಏನು?

ಆಲಿಯಾ ಕೇವಲ ಗ್ಲಾಮರ್​ಗೆ ಸೀಮಿತರಾದವರಲ್ಲ. ಅವರು ವಿಭಿನ್ನ ಪಾತ್ರ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಈ ಪಾತ್ರಕ್ಕೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಅಂದಹಾಗೆ, 2024ರ ಅಂತ್ಯಕ್ಕೆ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ