Year Ender 2023: ಈ ವರ್ಷ ದುಬಾರಿ ಕಾರು ಖರೀದಿಸಿದ ಭಾರತದ ಸೆಲೆಬ್ರಿಟಿಗಳು..

ಬಾಲಿವುಡ್​ನ ನಾಲ್ಕು ಸಿನಿಮಾಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿವೆ. ದಕ್ಷಿಣ ಭಾರತದಲ್ಲೂ ಹಲವು ಚಿತ್ರಗಳು ಹಿಟ್ ಆಗಿವೆ. ಸಿನಿಮಾ ಗೆದ್ದ ಖುಷಿಯಲ್ಲಿ ಅನೇಕ ಸೆಲೆಬ್ರಿಟಿಗಳು ಹೊಸ ಕಾರು ಖರೀದಿ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

Year Ender 2023: ಈ ವರ್ಷ ದುಬಾರಿ ಕಾರು ಖರೀದಿಸಿದ ಭಾರತದ ಸೆಲೆಬ್ರಿಟಿಗಳು..
ಈ ವರ್ಷ ದುಬಾರಿ ಕಾರು ಖರೀದಿಸಿದ ಭಾರತದ ಸೆಲೆಬ್ರಿಟಿಗಳು..
Edited By:

Updated on: Dec 20, 2023 | 3:34 PM

2023ನೇ ವರ್ಷ ಕೊನೆ ಆಗುತ್ತಾ ಬಂದಿದೆ. ಅನೇಕ ಸೆಲೆಬ್ರಿಟಿಗಳು ಈ ವರ್ಷ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಮಾಯಿ ಮಾಡಿವೆ. ಬಾಲಿವುಡ್​ನ (Bollywood News) ನಾಲ್ಕು ಸಿನಿಮಾಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿವೆ. ದಕ್ಷಿಣ ಭಾರತದಲ್ಲೂ ಹಲವು ಚಿತ್ರಗಳು ಹಿಟ್ ಆಗಿವೆ. ಸಿನಿಮಾ ಗೆದ್ದ ಖುಷಿಯಲ್ಲಿ ಅನೇಕ ಸೆಲೆಬ್ರಿಟಿಗಳು ಹೊಸ ಕಾರು ಖರೀದಿ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಯಶ್

ಯಶ್ ಅವರು ‘ಕೆಜಿಎಫ್ 2’ ಹಿಟ್ ಆದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರು ಇತ್ತೀಚೆಗಷ್ಟೇ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ‘ಟಾಕ್ಸಿಕ್’ ಎಂದು ಇಡಲಾಗಿದೆ. ಯಶ್ ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ. ಹೀಗಾಗಿ, ಯಶ್​ ಮನೆಗೆ ಈ ವರ್ಷ ಹೊಸ ಐಷಾರಾಮಿ ಕಾರು ಬಂದಿದೆ. ಜೂನ್​ ತಿಂಗಳಲ್ಲಿ ರೇಂಜ್​ ರೋವರ್ ಕಾರನ್ನು ಯಶ್ ಖರೀದಿ ಮಾಡಿದ್ದರು. ಈ ಹೊಸ ರೇಂಜ್​ ರೋವರ್​ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ.

ಆಲಿಯಾ ಭಟ್

ನಟಿ ಆಲಿಯಾ ಭಟ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಿಂದ ಗೆದ್ದು ಬೀಗಿದ್ದಾರೆ. ಅವರು ಈ ವರ್ಷ ಹಾಲಿವುಡ್​ಗೂ ಕಾಲಿಟ್ಟರು. ಅವರು ರೇಂಜ್ ರೋವರ್ ಆಟೋಬಯೋಗ್ರಫಿ ಎಲ್​ಡಬ್ಲ್ಯೂಬಿ ಲಕ್ಷುರಿ ಎಸ್​ಯುವಿ ಖರೀದಿ ಮಾಡಿದ್ದಾರೆ. ಅವರು ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.

ಶ್ರದ್ಧಾ ಕಪೂರ್

ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಶ್ರದ್ಧಾಗೆ ಇದೆ. ಅವರು ಗ್ಲಾಮರ್ ಬೆಡಗಿ ಕೂಡ ಹೌದು. ಅವರಿಗೆ ಈ ವರ್ಷ ಸಖತ್ ವಿಶೇಷ ಆಗಿತ್ತು. ಏಕೆಂದರೆ ಅವರು ಲ್ಯಾಂಬೋರ್ಗಿನಿ ಹುರಾಕೇನ್ ಕಾರನ್ನು ಖರೀದಿ ಮಾಡಿದ್ದಾರೆ. ಕೆಂಪು ಬಣ್ಣದ ಕಾರಲ್ಲಿ ಅವರು ಸುತ್ತಾಡಿದ ವಿಡಿಯೋ ವೈರಲ್ ಆಗಿತ್ತು.

ರೂಪಾಲಿ ಗಂಗೂಲಿ

ಕಿರುತೆರೆ ನಟಿ ರೂಪಾ ಗಂಗೂಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಧಾರಾವಾಹಿ ಲೋಕದಲ್ಲಿ ಫೇಮಸ್ ಆಗಿದ್ದು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅವರು ಈ ವರ್ಷ ಮರ್ಸಿಡೀಸ್ ಬೆಂಜ್ ಜಿಎಲ್​ಇ 300ಡಿ ಕಾರು ಖರೀದಿ ಮಾಡಿದ್ದರು. ಈ ಕಾರು ಲಕ್ಷುರಿ ಆಗಿದೆ.

ರಕುಲ್ ಪ್ರೀತ್ ಸಿಂಗ್

ರಕುಲ್ ಪ್ರೀತ್ ಸಿಂಗ್ ಅವರು ಸಖತ್ ಗ್ಲಾಮರಸ್ ಆಗಿದ್ದಾರೆ. ಇವರು ಮರ್ಸಿಡೀಸ್ ಮೇಬ್ಯಾಕ್ ಜಿಎಲ್​ಎಸ್ 600 ಎಸ್​ಯುವಿ ಖರೀದಿ ಮಾಡಿದ್ದಾರೆ. ರಕುಲ್ ಅವರು ಬಾಲಿವುಡ್​ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಸುತ್ತಾಡುತ್ತಿದ್ದಾರೆ. ಅವರು ಉಡುಗೊರೆ ನೀಡಿದ್ದರಬಹುದು ಎಂಬುದು ಅನೇಕರ ಊಹೆ.

ಜಾಕ್ವೆಲಿನ್ ಫರ್ನಾಂಡಿಸ್

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಈ ಪ್ರಕರಣದಿಂದ ಹೊರ ಬರಲು ಅವರು ಪ್ರಯತ್ನಿಸಿದ್ದಾರೆ. ಅವರು ಬಿಎಂಡಬ್ಲ್ಯೂ ಐ7 ಕಾರು ಖರೀದಿ ಮಾಡಿದ್ದರು. ಇದರ ಬೆಲೆ 2 ಕೋಟಿ ರೂಪಾಯಿ.

ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಆದರೆ, ಅವರಿಗೆ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಅವರು ರೇಂಜ್ ರೋವರ್ ಎಸ್​ಯುವಿ ಖರೀದಿ ಮಾಡಿದ್ದಾರೆ. ಇದರ ಬೆಲೆ 4 ಕೋಟಿ ರೂಪಾಯಿ.

ತಾಪ್ಸಿ ಪನ್ನು

‘ಡಂಕಿ’ ನಟಿ ತಾಪ್ಸೀ ಪನ್ನು ಅವರು ಮರ್ಸಿಡೀಸ್ ಬೆಂಜ್ ಕಾರನ್ನು 3.46 ಕೋಟಿ ರೂಪಾಯಿ ಬೆಲೆಗೆ  ಖರೀದಿ ಮಾಡಿದ್ದರು. ಗಣೇಶ ಚತುರ್ಥಿ ಸಂದರ್ಭದಲ್ಲಿ ಈ ಕಾರು ಖರೀದಿ ಮಾಡಿದ್ದರು.

ಇದನ್ನೂ ಓದಿ: ನಿಮ್ಮ ಸಿನಿಮಾಗಳಲ್ಲಿ ಕಪ್ಪು ಬಣ್ಣವೇ ಪ್ರಧಾನ ಏಕೆ? ಕಾರಣ ನೀಡಿದ ಪ್ರಶಾಂತ್ ನೀಲ್

ಯಾಮಿ ಗೌತಮ್

‘ಒಎಂಜಿ 2’ ಮೂಲಕ ಯಾಮಿ ಗೌತಮ್ ಗೆಲುವು ಕಂಡಿದ್ದಾರೆ. ಅವರು ಈ ವರ್ಷ ಬಿಎಂಡಬ್ಲ್ಯೂ ಎಕ್ಸ್​ 7 ಎಸ್​ಯುವಿ ಕಾರು ಖರೀದಿ ಮಾಡಿದ್ದಾರೆ. ಇದರ ಬೆಲೆ 1.25 ಕೋಟಿ ರೂಪಾಯಿ.

ಶಾಹಿದ್ ಕಪೂರ್

ಶಾಹಿದ್ ಕಪೂರ್ ಅವರು ಮರ್ಸಿಡೀಸ್ ಮೇಬ್ಯಾಕ್ ಜಿಎಲ್​ಎಸ್ 600 ಕಾರು ಖರೀದಿ ಮಾಡಿದ್ದಾರೆ. ಶಾಹಿದ್ ಕಪೂರ್ ಹಾಗೂ ಅವರ ಪತ್ನಿ ಮೀರಾ ಕಪೂರ್ ಒಟ್ಟಿಗೆ ಶೋರೂಂಗೆ ತೆರಳಿ ಕಾರು ಪಡೆದಿದ್ದಾರೆ. ಮರ್ಸಿಡೀಸ್​ ಬೆಂಜ್ ಇಂಡಿಯಾ ತನ್ನ ಸಾಮಾಜಿಕ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:31 am, Wed, 20 December 23