ಭಾರತದ ಅತಿದೊಡ್ಡ ಸಿನಿಮಾ ಪ್ರಾಜೆಕ್ಟ್ ಸೇರಿಕೊಳ್ಳಲಿರುವ ಯಶ್? ಪ್ರಾರಂಭ ಯಾವಾಗ?

|

Updated on: Oct 03, 2023 | 9:04 PM

Yash: ನಟ ಯಶ್ ತಮ್ಮ 19ನೇ ಸಿನಿಮಾದ ಚಿತ್ರೀಕರಣ ಆರಂಭಿಸಲು ತಯಾರಿಯಲ್ಲಿರುವಾಗಲೇ ಅವರ 20ನೇ ಸಿನಿಮಾದ ಕುರಿತು ಸುದ್ದಿಯೊಂದು ಜೋರಾಗಿಯೇ ಹರಿದಾಡುತ್ತಿದೆ.

ಭಾರತದ ಅತಿದೊಡ್ಡ ಸಿನಿಮಾ ಪ್ರಾಜೆಕ್ಟ್ ಸೇರಿಕೊಳ್ಳಲಿರುವ ಯಶ್? ಪ್ರಾರಂಭ ಯಾವಾಗ?
ಯಶ್
Follow us on

ಕೆಜಿಎಫ್‘ (KGF) ಸಿನಿಮಾ ಸರಣಿ ಬಳಿಕ, ಮಾಡಿದರೆ ದೊಡ್ಡದಾಗಿಯೇ ಮಾಡಬೇಕು ಎಂದು ನಿಶ್ಚಯ ಮಾಡಿಕೊಂಡಂತಿರುವ ಯಶ್ (Yash), ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ನಿರತರಾಗಿದ್ದಾರೆ. ಯಶ್ 19 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಸಿನಿಮಾಕ್ಕಾಗಿ ತೆರೆ ಮರೆಯಲ್ಲಿ ಭರ್ಜರಿ ತಯಾರಿ ಚಾಲ್ತಿಯಲ್ಲಿದೆ. ಈ ನಡುವೆ ಯಶ್​ ಮತ್ತೊಂದು ಬೃಹತ್ ಸಿನಿಮಾ ಪ್ರಾಜೆಕ್ಟ್​ನ ಭಾಗವಾಗಲಿದ್ದಾರೆ ಎನ್ನಲಾಗುತ್ತಿದೆ.

ಹೌದು, ಕಳೆದ ಕೆಲ ತಿಂಗಳಿನಿಂದಲೂ ಮತ್ತೊಮ್ಮೆ ರಾಮಾಯಣ ಕತೆಯನ್ನು ಸಿನಿಮಾ ಆಗಿ ತೆರೆಗೆ ತರುವ ಸಾಹಸದ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇವೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾಕ್ಕೆ ತೀವ್ರ ಟೀಕೆಗಳು ವ್ಯಕ್ತವಾದರೂ ಸಹ ರಾಮಾಯಣವನ್ನು ಮತ್ತೊಮ್ಮೆ ಮಗದೊಮ್ಮೆ ತೆರೆಗೆ ತರುವ ಪ್ರಯತ್ನಕ್ಕೆ ಅಡ್ಡಿಯಾಗಿಲ್ಲ. ಈ ಬಾರಿ ರಣ್​ಬೀರ್ ಕಪೂರ್ ರಾಮನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದೇ ಸಿನಿಮಾದಲ್ಲಿ ಯಶ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ರಾಮಾಯಣ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ರಣ್​ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸಲಿದ್ದಾರೆ. ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ 2024ರ ಆರಂಭದಲ್ಲಿ ಪ್ರಾರಂಭವಾಗಲಿದ್ದು, ಜೂನ್ ತಿಂಗಳ ವೇಳೆಗೆ ನಟ ಯಶ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಹಾಲಿವುಡ್​ನ ಜನಪ್ರಿಯ ಆಕ್ಷನ್ ನಿರ್ದೇಶಕನ ಭೇಟಿಯಾದ ಯಶ್: ಕಾರಣ?

‘ಆದಿಪುರುಷ್’ ಮಾದರಿಯಲ್ಲಿ ಅಲ್ಲದೆ ಬಜೆಟ್ ಮಾತ್ರವೇ ಅಲ್ಲದೆ, ಹಲವು ದೊಡ್ಡ ದೊಡ್ಡ ತಂತ್ರಜ್ಞರನ್ನು ಈ ಸಿನಿಮಾಕ್ಕಾಗಿ ನಿತೇಶ್ ತಿವಾರಿ ಆರಿಸಿ ತರಲಿದ್ದಾರೆ. ಸಿನಿಮಾದ ಎಲ್ಲ ವಿಎಫ್​ಎಕ್ಸ್ ಅನ್ನು ಹಲವು ಆಸ್ಕರ್ ವಿಜೇತ ಸಿನಿಮಾಗಳಿಗೆ ವಿಎಫ್​ಎಕ್ಸ್ ಮಾಡಿರುವ ಡಿಎನ್​ಇಜಿ ಸಂಸ್ಥೆ ಮಾಡಲಿದೆ. ಸಂಗೀತ, ಸಿನಿಮಾಟೊಗ್ರಫಿಗೆ ಸಹ ಭಾರತದ ಅತ್ಯುತ್ತಮ ತಂತ್ರಜ್ಞರನ್ನು ನಿತೇಶ್ ತಿವಾರಿ ಒಪ್ಪಿಸಿದ್ದಾರಂತೆ.

ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ರಾಮಾಯಣ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗದಲ್ಲಿ ಯಶ್​ರ ಹೆಚ್ಚು ಸೀನ್​ಗಳು ಇರುವುದಿಲ್ಲವಾದ್ದರಿಂದ ಕೇವಲ 15 ದಿನಗಳ ಕಾಲವಷ್ಟೆ ಯಶ್, ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಯಶ್​ರ ಭಾಗದ ಚಿತ್ರೀಕರಣ 2024ರ ಜೂನ್ ತಿಂಗಳಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಸಿನಿಮಾವನ್ನು ಮಧು ಮಂಟಾನಾ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ಯಶ್​ರ 19ನೇ ಸಿನಿಮಾಕ್ಕೆ ತಯಾರಿ ಜೋರಾಗಿಯೇ ಆರಂಭವಾಗಿದ್ದು, ಇತ್ತೀಚೆಗಷ್ಟೆ ನಟ ಯಶ್, ಲಂಡನ್​ನಲ್ಲಿ ಹಾಲಿವುಡ್​ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಿನಿಮಾದ ಚಿತ್ರೀಕರಣಕ್ಕೆ ಲೊಕೇಶನ್ ಅನ್ನೂ ಯಶ್ ಅಂತಿಮಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಕತೆ, ಚಿತ್ರಕತೆ, ನಿರ್ದೇಶಕರೂ ಅಂತಿಮವಾಗಿದ್ದು, ಶೀಘ್ರದಲ್ಲಿಯೇ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ