Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್​ನ ಜನಪ್ರಿಯ ಆಕ್ಷನ್ ನಿರ್ದೇಶಕನ ಭೇಟಿಯಾದ ಯಶ್: ಕಾರಣ?

Yash: ನಟ ಯಶ್ ಕೆಲವೇ ದಿನಗಳಲ್ಲಿ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಲಿದ್ದು, ಸಿನಿಮಾ ಚಿತ್ರೀಕರಣ ಆರಂಭಿಸಲು ತೆರೆ ಮರೆಯಲ್ಲಿ ತಯಾರಿ ಆರಂಭಿಸಿದ್ದಾರೆ. ಇದೀಗ ಹಾಲಿವುಡ್​ನ ಜನಪ್ರಿಯ ಸ್ಟಂಟ್ ಕೊರಿಯೋಗ್ರಾಫರ್ ಅನ್ನು ಯಶ್ ಭೇಟಿ ಆಗಿದ್ದಾರೆ.

ಹಾಲಿವುಡ್​ನ ಜನಪ್ರಿಯ ಆಕ್ಷನ್ ನಿರ್ದೇಶಕನ ಭೇಟಿಯಾದ ಯಶ್: ಕಾರಣ?
ಯಶ್-ಜೆಜೆ ಪೆರ್ರಿ
Follow us
ಮಂಜುನಾಥ ಸಿ.
|

Updated on:Sep 26, 2023 | 10:53 PM

ಕೆಜಿಎಫ್‘ (KGF) ಸಿನಿಮಾ ಸರಣಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ (Yash), ತಮ್ಮ ಮುಂದಿನ ಸಿನಿಮಾ ಮೂಲಕ ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ಇನ್ನೊಂದು ಹಂತ ಮೇಲಕ್ಕೆ ಎತ್ತೊಯ್ಯಲು ಸಜ್ಜಾಗಿರುವಂತಿದೆ. ಯಶ್ 19 ಅನ್ನು ಭಾರತದ ಅದ್ಧೂರಿ ಸಿನಿಮಾ ಮಾಡಲು ಸಕಲ ತಯಾರಿಯನ್ನು ತೆರೆ ಮರೆಯಲ್ಲಿ ಆರಂಭಿಸಿರುವ ನಟ ಯಶ್, ಹಾಲಿವುಡ್​ನ ಜನಪ್ರಿಯ ಸ್ಟಂಟ್ ಕೊರಿಯೋಗ್ರಫರ್ ಅನ್ನು ಕನ್ನಡಕ್ಕೆ ಕರೆತರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಸಾಕ್ಷಿಯಾಗಿ ಯಶ್​ರ ಚಿತ್ರವೊಂದು ವೈರಲ್ ಆಗಿದೆ.

ಹಲವು ಸೂಪರ್-ಡೂಪರ್ ಹಿಟ್ ಹಾಲಿವುಡ್ ಆಕ್ಷನ್ ಥ್ರಿಲ್ಲರ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಜನಪ್ರಿಯ ಸ್ಟಂಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯನ್ನು ನಟ ಯಶ್ ಲಂಡನ್​ನಲ್ಲಿ ಭೇಟಿ ಆಗಿದ್ದಾರೆ. ಇಬ್ಬರೂ ಒಟ್ಟಿಗೆ ಫೋಟೊಕ್ಕೆ ಫೋಸು ನೀಡಿದ್ದು, ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಶ್​ರ ಮುಂದಿನ ಸಿನಿಮಾಕ್ಕೆ ಜೆಜೆ ಪೆರ್ರಿ ಆಕ್ಷನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಗೆ ಈ ಫೋಟೊ ಇನ್ನಷ್ಟು ಪುಷ್ಠಿ ನೀಡಿದೆ.

ಜೆಜೆ ಪೆರ್ರಿಯನ್ನು ಯಶ್ ಭೇಟಿ ಆಗಿರುವುದು ಇದು ಮೊದಲೇನೂ ಅಲ್ಲ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಯಶ್, ಜೆಜೆ ಪೆರ್ರಿಯವರ ಗನ್ ಶೂಟಿಂಗ್ ಯಾರ್ಡ್​ಗೆ ಭೇಟಿ ನೀಡಿ ಗನ್​ ಶೂಟಿಂಗ್ ಅಭ್ಯಾಸ ಮಾಡಿದ್ದರು. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ವೈರಲ್ ಆದಾಗಲೇ, ಯಶ್ 19 ಸಿನಿಮಾದಲ್ಲಿ ಜೆಜೆ ಪೆರ್ರಿ ಸ್ಟಂಟ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ ಎಂದು ಊಹಿಸಲಾಗಿತ್ತು.

ಇದನ್ನೂ ಓದಿ:ಯಶ್ ಬಗ್ಗೆ ರಕ್ಷಿತ್ ಶೆಟ್ಟಿಗೆ ಯಾವ ರೀತಿಯ ಅಭಿಪ್ರಾಯ ಇದೆ? ‘SSE’ ಸ್ಟಾರ್ ವಿವರಿಸಿದ್ದು ಹೀಗೆ

ಆದರೆ ಈಗ ಮತ್ತೆ ಯಶ್ ಹಾಗೂ ಜೆಜೆ ಪೆರ್ರಿ ಪರಸ್ಪರ ಭೇಟಿ ಮಾಡಿರುವುದು ಸುದ್ದಿಯನ್ನು ಇನ್ನಷ್ಟು ಖಾತ್ರಿ ಗೊಳಿಸಿದೆ. ‘ಅವತಾರ್’, ‘ಎಕ್ಸ್​ಎಕ್ಸ್​ಎಕ್ಸ್’, ಫಾಸ್ಟ್ ಆಂಡ್ ಫ್ಯೂರಿಯಸ್, ‘ಜಾನ್ ವಿಕ್’, ‘ಜಾಂಗೋ ಅನ್​ಚೇನ್ಡ್’, ಆಸ್ಕರ್ ವಿಜೇತ ‘ಎರ್ಗೋ’, ‘ಸ್ಕೈಕ್ರೀಪರ್’, ‘ಸ್ಪೈ’, ‘ದಿ ಎಕ್ಸ್​ಪ್ಯಾಂಡೆಬಲ್ಸ್ 3’ ಇನ್ನೂ ಹಲವು ಹಾಲಿವುಡ್ ಆಕ್ಷನ್ ಸಿನಿಮಾಗಳಿಗೆ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ.

ಯಶ್ 19 ಸಿನಿಮಾ ಶೂಟಿಂಗ್ ಪ್ರಾರಂಭಿಸಲು ತಯಾರಿಯನ್ನು ಯಶ್ ತಿಂಗಳುಗಳ ಹಿಂದೆಯೇ ಆರಂಭಿಸಿದ್ದಾರೆ. ಲೊಕೇಶನ್, ತಂತ್ರಜ್ಞರು, ನಟರು ಎಲ್ಲವನ್ನೂ ಅಂತಿಮಗೊಳಿಸಿದ್ದಾರೆ ಯಶ್. ಸಿನಿಮಾದ ಚಿತ್ರೀಕರಣ ಆರಂಭವನ್ನು ಡಿಸೆಂಬರ್ ತಿಂಗಳಲ್ಲಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಯಶ್ ಕೆಲವು ತಿಂಗಳ ಹಿಂದೆ ಶ್ರೀಲಂಕಾಕ್ಕೆ ಭೇಟಿ ನೀಡಿ ಅಲ್ಲಿನ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಟ್ಟಿಗೆ ಮಾತುಕತೆ ನಡೆಸಿದ್ದರು. ಯಶ್ ತಮ್ಮ ಮುಂದಿನ ಸಿನಿಮಾವನ್ನು ಶ್ರೀಲಂಕಾನಲ್ಲಿ ಚಿತ್ರೀಕರಣ ಮಾಡಲು ನಿಶ್ಚಯಿಸಿ ಈ ಭೇಟಿ ಮಾಡಿದ್ದಾರೆ ಎನ್ನಲಾಗಿತ್ತು. ಡಿಸೆಂಬರ್ ತಿಂಗಳಲ್ಲಿ ಯಶ್​ರ ಮುಂದಿನ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:53 pm, Tue, 26 September 23

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..