ಸೋನಾಕ್ಷಿ ಜೊತೆಗಿನ ಲವ್ ವಿಚಾರ ಖಚಿತಪಡಿಸಿದ ಜಹೀರ್ ಇಕ್ಬಾಲ್; ಹುಟ್ಟುಹಬ್ಬದ ದಿನ ಪ್ರಪೋಸ್

|

Updated on: Jun 03, 2023 | 7:31 AM

Sonakshi Sinha: ನಟಿಯ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಜಹೀರ್. ಈ ಫೋಟೋಗೆ ಕ್ಯಾಪ್ಶನ್ ನೀಡಿರುವ ಅವರು ಸಾಕಷ್ಟು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ಕ್ಯಾಪ್ಶನ್​ನ ಕೊನೆಯಲ್ಲಿ ಅವರು ಐ ಲವ್​ ಯೂ ಎಂದಿದ್ದಾರೆ.

ಸೋನಾಕ್ಷಿ ಜೊತೆಗಿನ ಲವ್ ವಿಚಾರ ಖಚಿತಪಡಿಸಿದ ಜಹೀರ್ ಇಕ್ಬಾಲ್; ಹುಟ್ಟುಹಬ್ಬದ ದಿನ ಪ್ರಪೋಸ್
ಸೋನಾಕ್ಷಿ-ಜಹೀರ್
Follow us on

ಬಾಲಿವುಡ್​ನಲ್ಲಿ ಸೋನಾಕ್ಷಿ ಸಿನ್ಹಾಗೆ (Sonakshi Sinha) ಮೊದಲಿನಷ್ಟು ಬೇಡಿಕೆ ಇಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿಕೊಂಡು ಅವರಿದ್ದಾರೆ. ವೆಬ್ ಸೀರಿಸ್​ನಲ್ಲಿ ನಟಿಸುವ ಮೂಲಕ ಅವರ ಖ್ಯಾತಿ ಹೆಚ್ಚಿದೆ. ಸ್ಟಾರ್​ ಕಿಡ್​ ಆದ ಹೊರತಾಗಿಯೂ ಸೋನಾಕ್ಷಿಗೆ ದೊಡ್ಡ ಆಫರ್​ಗಳು ಬರುತ್ತಿಲ್ಲ. ಇದರ ಜೊತೆಗೆ ಸೋನಾಕ್ಷಿ ಅವರು ಪ್ರೀತಿ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಾರೆ. ನಟ ಜಹೀರ್ ಇಕ್ಬಾಲ್ (Zaheer Iqbal) ಜತೆ ಅವರು ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಈಗ ಸೋನಾಕ್ಷಿ ಜನ್ಮದಿನದಂದು (ಜೂನ್ 2) ಜಹೀರ್ ಅವರು ಪೋಸ್ಟ್ ಒಂದನ್ನು ಹಾಕಿದ್ದು, ನಟಿಗೆ ಐ ಲವ್​ ಯೂ ಎಂದಿದ್ದಾರೆ.

ನಟಿಯ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಜಹೀರ್. ಈ ಫೋಟೋಗೆ ಕ್ಯಾಪ್ಶನ್ ನೀಡಿರುವ ಅವರು ಸಾಕಷ್ಟು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ಕ್ಯಾಪ್ಶನ್​ನ ಕೊನೆಯಲ್ಲಿ ಅವರು ಐ ಲವ್​ ಯೂ ಎಂದಿದ್ದಾರೆ. ಈ ಮೂಲಕ ಅವರು ಪ್ರೀತಿ ವಿಚಾರವನ್ನು ಖಚಿತಪಡಿಸಿದ್ದಾರೆ.

ಜಹೀರ್​ ಜನ್ಮದಿನಕ್ಕೂ ಸೋನಾಕ್ಷಿ ಈ ಮೊದಲು ವಿಶ್ ಮಾಡಿದ್ದರು. ಈ ವೇಳೆ ಸೋನಾಕ್ಷಿ ಉದ್ದನೆಯ ಸಾಲುಗಳನ್ನು ಬರೆದು ಬರ್ತ್​ಡೇ ವಿಶ್​ ಮಾಡಿದ್ದರು. ಅಲ್ಲದೆ, ಬೆಸ್ಟ್​ ಫ್ರೆಂಡ್​ ಎನ್ನುವ ವಿಚಾರವನ್ನು ಒತ್ತಿ ಹೇಳಿದ್ದರು. ಇದಕ್ಕೆ ಕಮೆಂಟ್​ ಮಾಡಿದ್ದ ಜಹೀರ್, ‘ನಿಮ್ಮನ್ನು ನನ್ನ ನಾಯಕಿ ಎಂದು ಅಧಿಕೃತವಾಗಿ ಕರೆಯಬಹುದೇ’ ಎಂದಿದ್ದರು. ಇದು ಕೂಡ ಚರ್ಚೆ ಹುಟ್ಟುಹಾಕಿತ್ತು.

ಇದನ್ನೂ ಓದಿ: ‘ನನ್ನ ಕನ್ಯತ್ವ ಮಾರಾಟ ಮಾಡಿ ಸೋನಾಕ್ಷಿ ಸ್ಟಾರ್ ಆಗಿದ್ದಾರೆ’; ಶತ್ರುಘ್ನ ಸಿನ್ಹಾ ಕುಟುಂಬದ ಮೇಲೆ ಮಾಜಿ ಬಿಗ್​ಬಾಸ್ ಸ್ಪರ್ಧಿಯ ಗಂಭೀರ ಆರೋಪ

ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್​ ಸಿನ್ಹಾ ಮಗಳು ಸೋನಾಕ್ಷಿ. ಸಲ್ಮಾನ್​ ಖಾನ್​ ನಟನೆಯ ‘ದಬಾಂಗ್’​ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್​ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಾಲುಸಾಲು ಸಿನಿಮಾಗಳು ಫ್ಲಾಪ್​ ಆಗುತ್ತಿರುವುದಕ್ಕೆ ವೃತ್ತಿ ಜೀವನಕ್ಕೆ ಹಿನ್ನಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ