AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವರು ಹಿಟ್ ನಿರ್ದೇಶಕರ ಕತೆ ಕೇಳಿರುವ ಸಲ್ಮಾನ್ ಖಾನ್: ಯಾರ ಸಿನಿಮಾ ಮೊದಲು?

Salman Khan: ಸತತ ಫ್ಲಾಪ್ ಸಿನಿಮಾಗಳಿಂದ ಕಂಗೆಟ್ಟಿರುವ ಸಲ್ಮಾನ್ ಖಾನ್​ಗೆ ಪ್ರಸ್ತುತ ಬಾಲಿವುಡ್​ನ ಮೂವರು ಹಿಟ್ ನಿರ್ದೇಶಕರು ಕತೆ ಹೇಳಿದ್ದಾರೆ, ಯಾರ ಸಿನಿಮಾ ಮೊದಲು ಪ್ರಾರಂಭಿಸುತ್ತಾರೆ ಸಲ್ಮಾನ್ ಖಾನ್.

ಮೂವರು ಹಿಟ್ ನಿರ್ದೇಶಕರ ಕತೆ ಕೇಳಿರುವ ಸಲ್ಮಾನ್ ಖಾನ್: ಯಾರ ಸಿನಿಮಾ ಮೊದಲು?
ಸಲ್ಮಾನ್ ಖಾನ್
Follow us
ಮಂಜುನಾಥ ಸಿ.
|

Updated on:Jun 02, 2023 | 11:34 PM

ಬಾಲಿವುಡ್ (Bollywood) ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಮುಳುಗುತ್ತಿದ್ದ ಬಾಲಿವುಡ್​ಗೆ ಶಾರುಖ್ ಖಾನ್​ರ (Shah Rukh Khan) ಪಠಾಣ್ ಸಿನಿಮಾ ಜೀವ ತುಂಬಿದೆ. ಅದರ ಬೆನ್ನಲ್ಲೆ ಕೆಲವು ಸಿನಿಮಾಗಳು ಸಾಧಾರಣಕ್ಕಿಂತಲೂ ಉತ್ತಮ ಕಲೆಕ್ಷನ್ ಮಾಡಿವೆ. ಬಾಲಿವುಡ್​ ಏನೋ ಮರಳಿ ಹಳಿಗೆ ಮರಳುತ್ತಿದೆ ಆದರೆ ಬಾಲಿವುಡ್​ನ ಸ್ಟಾರ್ ನಟರು ಕೆಲವರು ಹಳಿಗೆ ಮರಳುವುದು ಬಾಕಿ ಇದೆ ಅದರಲ್ಲಿ ಪ್ರಮುಖವಾದವರೆಂದರೆ ನಟ ಸಲ್ಮಾನ್ ಖಾನ್ (Salman Khan). ಸತತ ಸೋಲುಗಳನ್ನೇ ಕಾಣುತ್ತಿರುವ ಸಲ್ಮಾನ್ ಖಾನ್, ಒಂದೇ ಒಂದು ಸೂಪರ್ ಹಿಟ್ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೂವರು ಹಿಟ್ ನಿರ್ದೇಶಕರು ಸಲ್ಮಾನ್ ಖಾನ್​ಗೆ ಕತೆ ಹೇಳಿದ್ದಾರೆ.

ಬಾಲಿವುಡ್​ನ ಹಿಟ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಸಲ್ಮಾನ್ ಖಾನ್​ಗೆ ಕತೆಯೊಂದನ್ನು ಹೇಳಿದ್ದಾರಂತೆ. ಸೈನ್ಯದ ಹಿನ್ನೆಲೆಯಲ್ಲಿನ ಈ ಕತೆ ಆಕ್ಷನ್ ಥ್ರಿಲ್ಲರ್ ಜಾನರ್​ಗೆ ಸೇರಿದ್ದಾಗಿದ್ದು, ಸಿನಿಮಾವನ್ನು ಸ್ವತಃ ಕರಣ್ ಜೋಹರ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ಅಥವಾ ವಿಷ್ಣು ವರ್ಧಾನ್ ನಿರ್ದೇಶನ ಮಾಡಲಿದ್ದಾರೆ.

ಬಾಲಿವುಡ್​ನ ಬಡಾ ನಿರ್ಮಾಪಕರಲ್ಲಿ ಒಬ್ಬರಾಗಿರುವ ಸಾಜಿದ್ ನಾಡಿಯಾವಾಲಾ ಸಲ್ಮಾನ್ ಖಾನ್​ಗಾಗಿ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು ಕತೆಯೊಂದನ್ನು ಹೇಳಿದ್ದಾರಂತೆ. ಈ ಹಿಂದೆ ಸಲ್ಮಾನ್ ಖಾನ್​ಗಾಗಿ ಕಿಕ್ ಸಿನಿಮಾವನ್ನು ಸಾಜಿದ್ ನಿರ್ದೇಶನ ಮಾಡಿದ್ದರು. ಇದೀಗ ಅದೇ ಸಿನಿಮಾದ ಎರಡನೇ ಭಾಗವನ್ನು ನಿರ್ದೇಶಿಸಲು ಸಾಜಿದ್ ಮುಂದಾಗಿದ್ದು ಕತೆಯನ್ನು ಸಲ್ಮಾನ್ ಖಾನ್​ಗೆ ಹೇಳಿದ್ದಾರೆ. ಸಾಜಿದ್, ಪ್ರಸ್ತುತ ಹೌಸ್​ಫುಲ್ 5 ಹಾಗೂ ಆನ್ ಸಿನಿಮಾಗಳ ನಿರ್ದೇಶನ ಮಾಡುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ:19 ಅಂತಸ್ತಿನ ಐಷಾರಾಮಿ ಹೋಟೆಲ್ ನಿರ್ಮಿಸಲಿದ್ದಾರೆ ಸಲ್ಮಾನ್ ಖಾನ್? ಇಲ್ಲಿದೆ ಸಂಪೂರ್ಣ ವಿವರ

ಬಾಲಿವುಡ್​ನ ಹಿರಿಯ ನಿರ್ದೇಶಕರಾಗಿರುವ ಸೂರಜ್ ಬರ್ಜಾತಿಯಾ ಸಹ ಸಲ್ಮಾನ್ ಖಾನ್​ಗೆ ಕತೆ ಹೇಳಿದ್ದಾರೆ. ಈ ಹಿಂದೆ ಸಲ್ಮಾನ್ ಖಾನ್​ಗಾಗಿ ಈ ವರೆಗೆ ನಾಲ್ಕು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸೂರಜ್ ಬರ್ಜಾತಿಯಾ ಇದೀಗ ಮತ್ತೊಮ್ಮೆ ಸಲ್ಮಾನ್​ ಖಾನ್​ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಲ್ಮಾನ್ ವೃತ್ತಿ ಬದುಕಿನ ಸೂಪರ್ ಹಿಟ್ ಸಿನಿಮಾ ಆಗಿರುವ ಹಮ್ ಆಪ್ಕೆ ಹೈ ಕೋನ್, ಮೈನೆ ಪ್ಯಾರ್ ಕಿಯಾ ಸಿನಿಮಾಗಳನ್ನು ಸೂಜರ್ ನಿರ್ದೇಶನ ಮಾಡಿದ್ದಾರೆ. ಇವುಗಳ ಜೊತೆಗೆ ಹಮ್ ಸಾಥ್ ಸಾಥ್ ಹೈ, ಪ್ರೇಮ್ ರತನ್ ಧನ್ ಪಾಯೋ ಸಿನಿಮಾವನ್ನು ಸಹ ಸೂರಜ್ ಭರ್ಜಾತಿಯಾ ನಿರ್ದೇಶನ ಮಾಡಿದ್ದಾರೆ. ಇದೀಗ ಸಲ್ಮಾನ್ ಖಾನ್​ಗಾಗಿ ಮಧ್ಯವಯಸ್ಕರಿಬ್ಬರ ನಡುವೆ ಪ್ರೇಮಕತೆಯನ್ನು ಹೆಣೆದಿದ್ದಾರಂತೆ. ಮಾಸ್ ಇಮೇಜಿನ ಸಲ್ಮಾನ್ ಖಾನ್ ಈ ಸಿನಿಮಾವನ್ನು ಒಪ್ಪುತ್ತಾರೆಯೋ ಇಲ್ಲವೊ ಕಾದು ನೋಡಬೇಕಿದೆ.

ಸಲ್ಮಾನ್ ಖಾನ್ ಪ್ರಸ್ತುತ ಟೈಗರ್ 3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದಿನ ಎರಡೂ ಟೈಗರ್ ಸರಣಿಯ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ ಈ ಸಿನಿಮಾದ ಮೇಲೆಯೂ ಸಲ್ಮಾನ್ ಖಾನ್​ಗೆ ಭಾರಿ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:29 am, Fri, 2 June 23

ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ