ಹೊಸ ಮನೆ ಖರೀದಿಸಿದ ಊರ್ವಶಿ ರೌಟೆಲಾ, ಮನೆಯ ಮೌಲ್ಯ 150 ಕೋಟಿಗೂ ಅಧಿಕ
Urvashi Rautela: ನಟಿ ಊರ್ವಶಿ ರೌಟೆಲಾ ಮುಂಬೈನಲ್ಲಿ ಐಶಾರಾಮಿ ಮನೆ ಖರೀದಿಸಿದ್ದಾರೆ. ಹಲವು ಸೌಕರ್ಯ, ಸೌಲಭ್ಯಗಳನ್ನು ಹೊಂದಿರುವ ಈ ಮನೆಯ ಬೆಲೆ 150 ಕೋಟಿಗೂ ಹೆಚ್ಚು.
ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್ (Bollywood) ನಟಿ ಊರ್ವಶಿ ರೌಟೆಲ್ಲಾ (Urvashi Rautela) ಸಿನಿಮಾಗಳಿಗಿಂತಲೂ ಮಾಡೆಲಿಂಗ್ (Modeling), ಐಟಂ ಸಾಂಗ್ (Item Song) ಹಾಗೂ ರಿಷಬ್ ಪಂಥ್ (Rishab Pant) ಕಾರಣಕ್ಕೆ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿರುವ ಈ ನಟಿ ದುಬಾರಿ ಉಡುಗೆಗಳನ್ನು, ಆಭರಣಗಳನ್ನು ಫೋಟೊಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ದುಬೈನ ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಸಹ ಆಗಿದ್ದಾರೆ. ಭಾರಿ ಬ್ಯುಸಿ ನಟ ಅಲ್ಲದಿದ್ದರೂ ವರ್ಷಕ್ಕೆ ಎರಡು ಮೂರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿರುವ ಊರ್ವಶಿ ಇದೀಗ ಹೊಸ ಪ್ರವೇಶಿಸಿದ್ದು ಮನೆಯ ಮೌಲ್ಯ ಹುಬ್ಬೇರಿಸುವಷ್ಟಿದೆ.
ಮುಂಬೈನ ಐಶಾರಾಮಿ ಏರಿಯಾ ಆಗಿರುವ ಅಂಧೇರಿ ವೆಸ್ಟ್ನಲ್ಲಿ ಬಾಲಿವುಡ್ ಬಡಾ ನಿರ್ಮಾಪಕ ಯಶ್ ಚೋಪ್ರಾ ಮನೆಯ ಪಕ್ಕದಲ್ಲಿಯೇ ಐಶಾರಾಮಿ ಮನೆಯನ್ನು ಊರ್ವಶಿ ಖರೀದಿಸಿದ್ದಾರೆ. ಈ ಮನೆಗೆ ಊರ್ವಶಿ ಬರೋಬ್ಬರಿ 190 ಕೋಟಿ ರುಪಾಯಿ ಪಾವತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದ್ಭುತವಾದ ಗಾರ್ಡನ್, ಎರಡು ಸ್ವಿಮ್ಮಿಂಗ್ ಪೂಲ್, ಖಾಸಗಿ ಜಿಮ್, ಚಿತ್ರಮಂದಿರ, ಬಾರ್, ವಿಶಾಲ ಪಾರ್ಕಿಂಗ್ ಮತ್ತು ಬ್ಯಾಕ್ ಯಾರ್ಡ್ ಇನ್ನೂ ಹಲವು ಐಶಾರಾಮಿ ಸೌಲಭ್ಯಗಳು ಊರ್ವಶಿಯ ಹೊಸ ಮನೆಯಲ್ಲಿವೆಯಂತೆ.
ಮುಂಬೈನ ಐಶಾರಾಮಿ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗೆ ಇದ್ದ ಊರ್ವಶಿ ರೌಟೆಲಾ ಕಳೆದ ಏಳೆಂಟು ತಿಂಗಳಿನಿಂದಲೂ ಸೂಕ್ತವಾದ ಮನೆಯೊಂದರ ಹುಡುಕಾಟದಲ್ಲಿದ್ದರು. ಪ್ರತಿಷ್ಠಿತ ರಿಯಲ್ ಎಸ್ಟೇಟ್ ಏಜನ್ಸಿಯ ಸಹಾಯದಿಂದ ಈ ಐಶಾರಾಮಿ ಪ್ರಾಪರ್ಟಿಯನ್ನು ಊರ್ವಶಿ ರೌಟೆಲಾ ಖರೀದಿಸಿದ್ದಾರಂತೆ. ಊರ್ವಶಿ ಖರೀದಿಸಿರುವ ಬಂಗ್ಲೆಯ ಹೆಸರು ಕೇಲ್ಸೆಟ್ ಇದು ಲೋಕಂಡ್ವಾಲಾ ಕಾಂಪ್ಲೆಕ್ಸ್ನಲ್ಲಿದೆ.
ಜುಹು, ಅಂಧೇರಿ ವೆಸ್ಟ್ ಹಾಗೂ ಲೋಕಂಡ್ವಾಲಾ ಮೂರು ಏರಿಯಾಗಳಲ್ಲಿ ಊರ್ವಶಿ ರೌಟೆಲಾ ಮನೆ ಹುಡುಕುತ್ತಿದ್ದರಂತೆ. ಕೊನೆಗೆ ಅಂಧೇರಿ ವೆಸ್ಟ್ನಲ್ಲಿ ಮನೆ ಖರೀದಿ ಮಾಡಿದ್ದಾರೆ ಊರ್ವಶಿ. ಮನೆ ಖರೀದಿಸಿದ ಬಳಿಕ ಕೆಲವು ಬದಲಾವಣೆಗಳನ್ನು ಊರ್ವಶಿ ಮಾಡಿಸಿದ್ದಾರೆ. ಆದರೆ ಹೊಸ ಮನೆಯ ಚಿತ್ರಗಳನ್ನು ಊರ್ವಶಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ.
ಊರ್ವಶಿ ಇತ್ತೀಚೆಗೆ ಕಾನ್ ಚಿತ್ರೋತ್ಸವದಲ್ಲಿ ಸಹ ಪಾಲ್ಗೊಂಡು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಇದೀಗ ರಾಮ್ ಪೋತಿನೇನಿಯ ತೆಲುಗು ಸಿನಿಮಾ ಒಪ್ಪಿಕೊಂಡಿರುವ ಊರ್ವಶಿ ಅದರ ಜೊತೆಗೆ ಇನ್ನು ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಿಷಬ್ ಪಂಥ್ ಅನ್ನು ಗೆಳೆಯ, ಪ್ರೇಮಿ ಎಂದು ಹೇಳಿಕೊಂಡಿದ್ದ ಊರ್ವಶಿ, ರಿಷಬ್ ನೋಡಲು ಅವರಾಡುವ ಐಪಿಎಲ್ ಪಂದ್ಯಾವಳಿಗೆ ಹೋಗಿ ಸಖತ್ ಟ್ರೋಲ್ ಆಗಿದ್ದರು. ರಿಷಬ್ಗೆ ಅಪಘಾತವಾಗಿದ್ದಾಗ ದಾಖಲಾಗಿದ್ದ ಆಸ್ಪತ್ರೆಯ ಚಿತ್ರವನ್ನು ಸಹ ಊರ್ವಶಿ ರೌಟೆಲಾ ಹಂಚಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Thu, 1 June 23